ಉತ್ತಮ ಸಮಾಜಕ್ಕಾಗಿ

ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆ

0


ಬೆಳಗಾವಿ.ಜ.21: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣರ ಗ್ರಾಮದ ಸಮ್ಮೇದ ಶ್ರೀಕಾಂತ ದಾದನ್ನವರ ಇವರು ಫೆಬ್ರುವರಿ -2017 ರಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕರಾಟೆ ಸ್ಫರ್ಧೆಗೆ ಆಯ್ಕೆಯಾಗುವ ಮೂಲಕ ಕರಾಟೆಯಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ.
ಇತ್ತಿಚಿಗೆ ಮೈಸೂರಿನಲ್ಲಿ ನಡೆದ 5 ನೇ ರಾಷ್ಟ್ರಮಟ್ಟದ ಕರಾಟೆ ಸ್ಫರ್ಧೆಯಲ್ಲಿ ಧಾರವಾಡ ಜಿ.ಎಸ್.ಎಸ್.ಮಹಾವಿದ್ಯಾಲಯದ ವತಿಯಿಂದ ಭಾಗವಹಿಸಿ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದುಕೊಂಡು ಅಂತಿಮ ಸುತ್ತಿಗೆ ಆಯ್ಕೆಯಾಗುವುದರ ಜೊತೆಗೆ ಅಂತರರಾಷ್ಟ್ರೀಯ ಕರಾಟೆ ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ. ಸಮ್ಮೇದ ಅವರ ಈ ಸಾಧನೆಗೆ ಅವರ ಕರಾಟೆ ಗುರುಗಳಾದ ರಮೇಶ ಸೊಲ್ಲಾಪೂರೆ ಅವರ ಮಾರ್ಗದರ್ಶನ ಲಭಿಸಿದೆ. ಧಾರವಾಡದಲ್ಲಿ ಅಜೀತಪ್ರಸಾದ ಅವರು ಕರಾಟೆ ಪಟು ಸಮ್ಮೇದ ಅವರನ್ನು ಸನ್ಮಾನಿಸಿ ಗೌರವಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.