ಉತ್ತಮ ಸಮಾಜಕ್ಕಾಗಿ

ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ, ಪತ್ನಿಗೆ ಪತಿ ಮಾಲೀಕನಲ್ಲ: ಸುಪ್ರೀಂ ಕೋರ್ಟ್

0

ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ, ಪತ್ನಿಗೆ ಪತಿ ಮಾಲೀಕನಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಒಪ್ಪಿತ ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್​ ಪತ್ನಿಗೆ ಪತಿಯೇ ಮಾಲೀಕನಲ್ಲ. ಮಹಿಳೆ ಮತ್ತು ಪುರುಷರು ಇಬ್ಬರೂ ಸರಿಸಮಾನರು ಎಂದು ಸುಪ್ರೀಂ ಮಹತ್ವದ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ಐಪಿಸಿ ಸೆಕ್ಷನ್​ 497ರ ಕುರಿತು ತೀರ್ಪು ನೀಡಿದ್ದು, ಪತ್ನಿ ಅನೈತಿಕ ಸಂಬಂಧ ಹೊಂದಿದ್ದರೆ, ಪತಿ ಆಕೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು ಅಸಂವಿಧಾನಿಕ ಎಂದು ಹೇಳಿದೆ.

ಐಪಿಸಿ ಸೆಕ್ಷನ್ 497 ವ್ಯಭಿಚಾರ ಕಾನೂನು ಖಾಸಗಿ ಹಕ್ಕಿಗೆ ವಿರುದ್ಧವಾಗಿದ್ದು, ಇದು ಮೂಲಭೂತ ಹಕ್ಕುಗಳಲ್ಲಿ ಒಂದಾದ ಸಮಾನತೆಗೂ ಧಕ್ಕೆ ತರಲಿದೆ ಎಂದು ಅಭಿಪ್ರಾಯಪಟ್ಟಿದೆ.

ಐಸಿಸಿ ಸೆಕ್ಷನ್ 497 ಕಾನೂನು, ಪತ್ನಿ ತನ್ನ ಪ್ರೇಮಿಯೊಂದಿಗೆ ಸಂಬಂಧ ಹೊಂದಿದ್ದರೆ, ಅದನ್ನು ವ್ಯಭಿಚಾರ ಎನ್ನುವ ಅಧಿಕಾರವನ್ನು ಪತಿಗೆ ನೀಡಿತ್ತು. ಆದರೆ, ಪತಿ ಬೇರೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ, ಅದನ್ನು ವ್ಯಭಿಚಾರ ಎಂದು ಕರೆಯುವ ಅಧಿಕಾರವನ್ನು ಪತ್ನಿಗೆ ನೀಡಿರಲಿಲ್ಲ.////

The post ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ, ಪತ್ನಿಗೆ ಪತಿ ಮಾಲೀಕನಲ್ಲ: ಸುಪ್ರೀಂ ಕೋರ್ಟ್ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.