ಉತ್ತಮ ಸಮಾಜಕ್ಕಾಗಿ

ಅಪ್ಪನ ಸಂಗ ಮರೆಯುವುದು ಹ್ಯಾಂಗ!

how we can forget fathers friendship

0

ಶಿವರಾಯ ಏಳುಕೋಟಿ, ಹಿರಿಯ ಪತ್ರಕರ್ತರು, ಬೆಳಗಾವಿ ( news belgaum)

ತಾಯಿಯಷ್ಟೆ ತಂದೆಯೂ ಕೂಡ ಮಗುವಿನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ನೂರು ವರ್ಷಗಳ ಹಿಂದೆ ಗಣಿಯೊಂದರ ದುರಂತದಲ್ಲಿ ಅಸುನೀಗಿದ 361ಮಂದಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ವರ್ಜಿನಿಯಾದ ಚರ್ಚನಲ್ಲಿ 1891 ರ 21 ರಂದು ಮೆನ್ಸ್ ಡೇ(Men’s DAY) ಆಚರಿಸಲಾಯಿತು. ಅದಕ್ಕೊಂದು ಗಟ್ಟಿ ರೂಪ ಕೊಡಬೇಕೆಂದು ತಂದೆಯನ್ನು ಕಳೆದುಕೊಂಡ ಮಕ್ಕಳುಫಾದರ್ಸ್ ಡೇಎಂಬ ದಿನವನ್ನು ಕೆಲವು ಸಂಘ ಸಂಸ್ಥೆಗಳ ಸಹಕಾರದಿಂದ ಚಾಲನೆ ನೀಡಿದರು.

ಫಾದರ್ಸ್ ಡೇ ತಂದೆಯರ ದಿನ ಜೂನ್ 21 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ತಾಯಿಯ ಜೊತೆಗೆ ತಂದೆಯನ್ನೂ ಕೂಡ ನೆನೆಯುವುದಕ್ಕಾಗಿ ಜಗತ್ತಿನ ಅನೇಕ ದೇಶಗಳು ಜೂನ್ ಮೂರನೇ ವಾರವನ್ನು ಆಯ್ಕೆ ಮಾಡಿಕೊಂಡಿವೆ. ಆ ದಿನ ತಂದೆ,ಅಜ್ಜ, ಮುತ್ತಜ್ಜ, ಹೆಂಡತಿಯ ತಂದೆ, ಮಲತಂದೆ ಹೀಗೆ ಎಲ್ಲ ಹಿರಿಯರನ್ನು ಗೌರವಿಸುವ-ಸಂತಸಪಡಿಸುವ ಕಾರ್ಯಕ್ರಮ ಏರ್ಪಡಿಸಿ, ಸಿಹಿ ನೀಡಿ-ಹೂಗುಚ್ಛ ಕೊಟ್ಟು ಸತ್ಕರಿಸುವುದು. ಹೀಗೆ ಹಲವು ವಿಧದಲ್ಲಿ ಹಿರಿಯರನ್ನು ಸ್ಮರಿಸಿ ಸಂಭ್ರಮಿಸಲಾಗುತ್ತದೆ.

ಭಾರತವು ಪುರುಷ ಪ್ರಧಾನ ದೇಶ. ತಂದೆ ಎಂದರೆ ಕೊಂಚ ಧೋರಣೆ. ಅಂಗಳದಲ್ಲಿ ಹೊರಗೆ-ಹೊರಗೆ ಬೆಳೆಯುವಂತೆ ಪ್ರೇರೇಪಿಸುತ್ತದೆ. ಹೀಗಾಗಿ ತಂದೆ ಮಕ್ಕಳ ನಡುವೆ ಹೊರನೋಟಕ್ಕೆ ಹೆಚ್ಚಾಗಿ ಪ್ರೀತಿ, ಸಲುಗೆ, ವ್ಯವಹಾರ ಕಂಡು ಬರುವುದಿಲ್ಲ. ತಂದೆ ಕಣ್ಣೋಟಕ್ಕೆ ಕೊಂಚ ಹೆದರಿಸಿದರೂ; ಕರುಳಿನ ಒಳ ಒಳಗೆ ಅಂತಃಕರಣ ಕರಗಿ ನೀರಾಗುವುದು ಸುಳ್ಳಲ್ಲ. ತಂದೆಯೊಳಗೆ ಮಾತೃತ್ವ ಪ್ರೀತಿ ಇದ್ದೇ ಇರುತ್ತದೆ. ಮಕ್ಕಳನ್ನು ಮಾರುದ್ದ ದೂರ ಇರಿಸಿದ್ದರೂ, ಪ್ರೀತಿಯೊಂದು ಸಮೀಪದಲ್ಲಿ ಸುಳಿದಾಡುತ್ತದೆ. ಗಂಡು ಮಕ್ಕಳನ್ನು ನಿಯಂತ್ರಣದ ಅಡಿಯಲ್ಲಿಯೇ ಬದುಕಿಗೆ ಬೇಕಾದ ವಿದ್ಯೆ, ಹೆಣ್ಣು ಮಕ್ಕಳಿಗೆ ನಿಯಮಗಳಡಿ ರಕ್ಷಣೆ ಎನ್ನುವುದು ಸಹಜವೇ.

ತಂದೆಗೆ ಹೆಣ್ಣು ಮಕ್ಕಳ ಬಗ್ಗೆ ವಿಪರೀತ ಪ್ರೀತಿ-ಮಮತೆ. ಮಗಳ ಮದುವೆ ಮಾಡಿ ಕಳುಹಿಸುವಾಗ ತಾಯಿಯನ್ನು ಕಣ್ಣೀರು ಹರಿಸಿ ತನ್ನ ಎದೆ ಭಾರ ಹೊರಹಾಕುತ್ತಾಳೆ. ಆದರೆ ಹೇಳಲಾಗದ-ಅಳಬಾರದ ತಂದೆಯ ಅಂತರಂಗ ಮೌನವಾಗಿಯೇ ರೋಧಿಸುತ್ತಿದೆ. ಬದುಕೆಲ್ಲ ಕೈಕಟ್ಟಿ ನಿಂತ ಈಗ ಮಗಳನ್ನು ಸನಿಹಕ್ಕೆ ಕರೆದು ಆಲಂಗಿಸಿ ತನ್ನನ್ನು ಹೇಳಿಕೊಳ್ಳಲಾಗದ ಅಸಹಾಯಕತೆಯಲ್ಲ. ತಂದೆ ಎಲ್ಲರ ಬಾಳಲ್ಲಿ ಮಾತೃ ಹೃದಯದ…ಸಾಕಾರಮೂರ್ತಿ. ಅದಕ್ಕಾಗಿ ಅಪ್ಪನ ಸಂಗ ಮರೆಯುವುದು ಹ್ಯಾಂಗ…!

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.