ಉತ್ತಮ ಸಮಾಜಕ್ಕಾಗಿ

ಅರ್ಜಿ ಆಹ್ವಾನ ಹಾಗೂ ಪ್ರಕಟಣೆ

0

ಕೌಶಲ್ಯಾಧಾರಿತ ತರಬೇತಿಗೆ ಅರ್ಜಿ ಆಹ್ವಾನ
ಬೆಳಗಾವಿ:  ಬೆಳಗಾವಿ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಕೌಶಲ್ಯಾಧಾರಿತ ಮೂರು ತಿಂಗಳಿನ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ವೃತ್ತಿಗಳಾದ ಎಲೆಕ್ಟ್ರೀಶಿನ, ವೆಲ್ಹ್‍ಡಿಂಗ್, ಸಿಎನ್‍ಸಿ ಮಶಿನ ಆಪರೇಟರ, ಡಿ.ಪಿ.ಟಿ. ಕಂಪ್ಯೂಟರ ವೃತ್ತಿಗಳಲ್ಲಿ ಜಿಲ್ಲೆಯ ಸರ್ಕಾರಿ ಐ.ಟಿ.ಐ ಬೆಳಗಾವಿ, ನಿಪ್ಪಾಣಿ, ಸದಲಗಾ, ಗೋಕಾಕ, ಸವದತ್ತಿ, ರಾಮದುರ್ಗ ಹಾಗೂ ನೇಸರಗಿ ಹಾಗೂ ಸರ್ಕಾರ ಉಪಕರಣಗಾರ ತರಬೇತಿ ಸಂಸ್ಥೆ (ಜಿ.ಟಿ.ಟಿ.ಸಿ) ಬೆಳಗಾವಿಯಲ್ಲಿ ನೀಡಲಾಗುತ್ತದೆ.
ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಟ 16 ವರ್ಷ ಮತ್ತು ಗರಿಷ್ಟ 35 ವರ್ಷಗಳು, ಅಭ್ಯರ್ಥಿಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸೇರಿದವರಾಗಿರಬೇಕು, ಎಸ್.ಎಸ್.ಎಲ್.ಸಿ. ಉತ್ತೀರ್ಣ/ಅನುತೀರ್ಣರಾಗಿರಬೇಕು, ಅರ್ಹತೆ ಹೊಂದಿರತಕ್ಕದ್ದು. ತರಬೇತಿ ಅವಧಿಯಲ್ಲಿ ಶಿಷ್ಯವೇತನವನ್ನು ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಅಕ್ಟೋಬರ್ 10 ರೊಳಗೆ ಈ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 0831-2440430 ಅಥವಾ ಸಹಾಯಕ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಉಪವಿಭಾಗ ಬೈಲಹೊಂಗಲ ಹಾಗೂ ಚಿಕ್ಕೋಡಿ ಅಥವಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳು ಹಾಗೂ ಮೇಲೆ ತಿಳಿಸಿದ ಸರ್ಕಾರಿ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಬೇಕೆಂದು ಬೆಳಗಾವಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಖಾದಿ ಗ್ರಾಮೋದ್ಯೋಗ ಮಂಡಳಿ: ಸಾಲ ಪಡೆದಿರುವವರ ಗಮನಕ್ಕೆ
ಬೆಳಗಾವಿ:  ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಧನಸಹಾಯ ಸ್ವರೂಪ ಯೋಜನೆಯಡಿಯಲ್ಲಿನ (ಪಿ.ಬಿ.ಎಸ್) ಹಾಗೂ ಸಮೂಹ ಬ್ಯಾಂಕ್ ಯೋಜನೆಯಡಿ (ಸಿ.ಬಿ.ಸಿ) ಫಲಾನುಭವಿಗಳು ವಿವಿಧ ಉದ್ದಿಮೆಗಳಿಗೆ ಸಾಲ ಪಡೆದಿದ್ದು ಸಾಲ ಮರುಪಾವತಿಯಾಗದೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವು 2018-19ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ ಸಂಖ್ಯೆ: 181 ರಲ್ಲಿ ರಾಜ್ಯ ಸರ್ಕಾರ ಸಂಸ್ಥೆಯಾದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮೂಲಕ ಮೇಲ್ಕಂಡ ಯೋಜನೆಗಳಲ್ಲಿ ಸಾಲ ಪಡೆದಿರುವ ಎಲ್ಲಾ ಬಿ.ಪಿ.ಎಲ್ ಕುಟುಂಬಗಳ ಸಮೀಕ್ಷೆ ಮಾಡಿ ಪಟ್ಟಿಯನ್ನು ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶದಲ್ಲಿ ಸಲ್ಲಿಸಲು ಸೂಚಿಸಿರುತ್ತಾರೆ.
ಈ ಕುರಿತು ಸರ್ಕಾರವು ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಮಾಹಿತಿ ಅತಿ ಮುಖ್ಯವಾಗಿರುತ್ತದೆ. ಆದ್ದರಿಂದ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಮೇಲ್ಕಂಡ ಯೋಜನೆಯಗಳಲ್ಲಿ ಸಾಲ ಪಡೆದಿರುವಂತಹ ಫಲಾನುಭವಿಗಳು ಬಿ.ಪಿ.ಎಲ್ ಕಾರ್ಡ್ ಹೊಂದಿದಲ್ಲಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಮಂಡಳಿ ಕಚೇರಿಗೆ ಸಂಪರ್ಕಿಸಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ, 5ನೇ ಅಡ್ಡ ರಸ್ತೆ, ಕುಶಲಕರ್ಮಿ ತರಬೇತಿ ಕೇಂದ್ರ ಆವರಣ, ಉದ್ಯಮಬಾಗ, ಬೆಳಗಾವಿ ಕಚೇರಿ ಅಥವಾ ದೂ: 0831-2455067 ಗೆ ಸಂಪರ್ಕಿಸಬೇಕೆಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 26 ರಿಂದ ನಗರದ ವಿವಿಧ ಸ್ಥಳಗಳಲ್ಲಿ ವಿದ್ಯುತ್ ನಿಲುಗಡೆ
ಬೆಳಗಾವಿ:  ಯು ಜಿ ಕೇಬಲ್ ಕೆಲಸ ಕೈಗೊಳ್ಳುವ ಸಲುವಾಗಿ ಬುಧವಾರ ಸೆ.26 ರಂದು 110 ಕೆವಿ ನೆಹರು ನಗರ ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ್-11 ಸಿವಿಲ್ ಹಾಸ್ಪೀಟಲ್ ಪೂರಕದ ಮೇಲೆ ಬರುವ ಕಾಳಿ ಅಂಬರಾಯಿ, ಸಿಟಿ ಪೊಲೀಸ್ ಲೈನ್, ಕಾಲೇಜರಸ್ತೆ, ಸರ್ದಾರಗ್ರೌಂಡ್.ಗಾಂಧಿ ಭವನ, ಈ ಪ್ರದೇಶಗಳಲ್ಲಿ ಸೆ.26 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಘಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

ಸೆಪ್ಟೆಂಬರ್ 27 ರಂದು ವಿದ್ಯುತ್ ನಿಲುಗಡೆ:
ಯು ಜಿ ಕೇಬಲ್ ಕೆಲಸ ಕೈಗೊಳ್ಳೊವ ಸಲುವಾಗಿ ಗುರುವಾರ ಸೆ.27 ರಂದು 110 ಕೆವಿ ವಡಗಾಂವ ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ್-6 ಹಳೇ ಬೆಳಗಾವಿ ಪೂರಕದ ಮೇಲೆ ಬರುವ ಕುಲಕರ್ಣಿಗಲ್ಲಿ, ಬಸವಣಗಲ್ಲಿ, ಬಜಾರಗಲ್ಲಿ, ಉಪ್ಪಾರಗಲ್ಲಿ, ವರದಪ್ಪ ಗಲ್ಲಿ, ವಡ್ಡರ್‍ಚಾವಣಿ ಈ ಪ್ರದೇಶಗಳಲ್ಲಿ ಸೆ.27 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಘಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

ಸೆಪ್ಟೆಂಬರ್ 28 ರಂದು ವಿದ್ಯುತ್ ನಿಲುಗಡೆ:
ಯು ಜಿ ಕೇಬಲ್ ಕೆಲಸ ಕೈಗೊಳ್ಳೊವ ಸಲುವಾಗಿ ಶುಕ್ರವಾರ ಸೆ. 28 ರಂದು 110/11 ಕೆವಿ ವಡಗಾಂವ ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ-7ಹೂಸುರು ಪೂರಕದ ಮೇಲೆ ಬರುವ ಓಂ ನಗರ, ಹಿಂದುಸ್ತಾನ ಟೈಯರ್ಸ್ ಈ ಪ್ರದೇಶಗಳಲ್ಲಿ ಸೆ. 28 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಘಂಟೆಯವರೆಗೆ ಘಂಟೆಯ ವರೆಗೆವಿದ್ಯುತ್ ನಿಲುಗಡೆಯಾಗಲಿದೆ.

ಸೆಪ್ಟೆಂಬರ್ 29 ರಂದು ವಿದ್ಯುತ್ ನಿಲುಗಡೆ:
ಯು ಜಿ ಕೇಬಲ್ ಕೆಲಸ ಕೈಗೊಳ್ಳೊವ ಸಲುವಾಗಿ ಶನಿವಾರ ಸೆ.29 ರಂದು 110 ಕೆವಿ ವಡಗಾಂವ ವಿದ್ಯುತ ವಿತರಣಾ ಕೇಂದ್ರದಿಂದ ಹೊರಡುವ ಎಫ್-6 ಹಳೇ ಬೆಳಗಾವಿ ಪೂರಕದ ಮೇಲೆ ಬರುವ ಕೊರವಿಗಲ್ಲಿ,ಲಕ್ಷ್ಮೀ ನಗರ, ಭುವನೇಶ್ವರಿ ನಗರ, ಸಾಂಬಾಜಿಗಲ್ಲಿ ಹಾಗೂ ಎಫ-7 ಧಾರವಾಡರೋಡ ಪೂರಕದ ಮೇಲೆ ಬರುವ ಉಜ್ಡಲನಗರ, ತಿರಂಗಾ ಕಾಲೋನಿ ಈ ಪ್ರದೇಶಗಳಲ್ಲಿ ಸೆ.29 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5 ಘಂಟೆಯವರೆಗೆ ವಿದ್ಯುತ್ ನಿಲುಗಡೆಯಾಲಿದೆ ಎಂದು ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ಅರ್ಜಿ ಆಹ್ವಾನ ಹಾಗೂ ಪ್ರಕಟಣೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.