ಉತ್ತಮ ಸಮಾಜಕ್ಕಾಗಿ

ಅಲರ್ಜಿ ಚಿಕಿತ್ಸೆಗೆ ಪ್ರತಿ ತಿಂಗಳ 3ನೇ ಶನಿವಾರ ಖ್ಯಾತ ತಜ್ಞ ವೈದ್ಯ ಡಾ. ಸುಖೇಶ ರಾವ್ ಬೆಳಗಾವಿ ನಗರದಲ್ಲಿ

A famous expert physician on 3rd Saturday of every month for allergy treatment

0

ಬೆಳಗಾವಿ: ( news belgaum) ಪ್ರತಿ ತಿಂಗಳು ಮೂರನೇ ಶನಿವಾರ ಅಲರ್ಜಿಗೆ ಇಮ್ಯೂನ್ ಸಿಸ್ಟಮ(ರೋಗ ಪ್ರತಿನಿರೋಧಕ ಶಕ್ತಿ) ತಜ್ಞ ವೈದ್ಯ ಡಾ. ಸುಖೇಶ ರಾವ್ ಬೆಳಗಾವಿಯಲ್ಲಿ ಸಿಗಲಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್ ನಿರ್ದೇಶಕ ಡಾ. ರವಿ ಪಾಟೀಲ ಮಾತನಾಡಿ ಮಂಗಳೂರಿನ ಖ್ಯಾತ ಅಲರ್ಜಿ ರೋಗಗಳ ಚಿಕಿತ್ಸಕ ಡಾ. ಸುಖೇಶ್ ರಾವ್ ಪ್ರತಿ ತಿಂಗಳ ಮೂರನೇ ಶನಿವಾರ ಬೆಳಗಾವಿಗೆ ಆಗಮಿಸಿ ಚಿಕಿತ್ಸೆ ನೀಡಲಿದ್ದಾರೆ. ವಿವಿಧ ಅಲರ್ಜಿ ರೋಗಿಗಳಿಗೆ ವಿವಿಧ ಹಂತದ ಚಿಕಿತ್ಸೆಗಳನ್ನು ನೀಡಲಾಗುತ್ತದೆ ಎಂದರು.

ಅಲರ್ಜಿ ಹಲವು ಪ್ರಕಾರಗಳಿಂದ ಆಗಮಿಸುತ್ತದೆ. ನೆಗಡಿ, ಸೀನು, ಕೆಮ್ಮು, ಅಸ್ತಮಾ, ಶಕ್ತಿಹೀನತೆ ಇತರ ಹತ್ತು ಹಲವು ಅನಾರೋಗ್ಯ ಸಮಸ್ಯೆಗಳು ಕಂಡುಬರುವ ಹಲವು ರೋಗಿಗಳು ಇರುತ್ತಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಡಾ‌. ಸುಖೇಶ ರಾವ್ ತಿಳಿಸಿದರು. ವಾತಾವರಣ ತಂಪಿದ್ದಾಗ, ಮಳೆಯ ವಾತಾವರಣ ಇದ್ದಾಗ, ಧೂಳು, ಕೈಗಾರಿಕೆಯಲ್ಲಿ ಕೆಲಸಗಾರರು, ಡೀಸೆಲ್ ಸಿಮೆಂಟ್ ಉದ್ಯಮಗಳಲ್ಲಿ ದುಡಿಯುವವರಿಗೆ ಕೆಲವು ಅಲರ್ಜಿಗಳು ಬರುತ್ತವೆ. ಆದರೆ ಸಾಮಾನ್ಯ ಸಂದರ್ಭ ಶುದ್ಧ ವಾತಾವರಣದಲ್ಲೂ ಸೀನು, ಕೆಮ್ಮು, ನೆಗಡಿ ಬಂದರೆ ಅದು ಖಂಡಿತವಾಗಿಯೂ ಅಲರ್ಜಿ ಎಂದು ತಿಳಿಸಿದರು. ನ್ಯಾಯವಾದಿ ಬಸವರಾಜ ರೊಟ್ಟಿ ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.