ಉತ್ತಮ ಸಮಾಜಕ್ಕಾಗಿ

ಅಲೆಮಾರಿ ಜನಾಂಗದವರ ಸಮಗ್ರ ವಿವರ ನೀಡಲು ಅಧಿಕಾರಿಗಳಿಗೆ ಸೂಚನೆ

0

Notice to officials to give detailed details of nomadic people

ಅಲೆಮಾರಿ ಜನಾಂಗದವರ ಸಮಗ್ರ ವಿವರ ನೀಡಲು ಅಧಿಕಾರಿಗಳಿಗೆ ಸೂಚನೆ

ಹಾಸನ : ಜಿಲ್ಲೆಯಲ್ಲಿರುವ ವಿವಿಧ ರೀತಿಯ ಅಲೆಮಾರಿ ಜನಾಂಗದವರ ಸಮಗ್ರ ವಿವರಗಳನ್ನು ಮುಂದಿನ ಒಂದು ತಿಂಗಳೊಳಗೆ ಒದಗಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ವರ್ಗದ ಅಲೆಮಾರಿ/ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶದ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಇರುವ ಅಲೆಮಾರಿ ಸಮುದಾಯದ ಬಗ್ಗೆ ಒಂದು ನಿರ್ಧಿಷ್ಟವಾದ ಮಾಹಿತಿ ಇಲ್ಲ ಹಾಗಾಗಿ ಸಮುದಾಯದ ಸಂಘಟನೆಗಳ ಮುಖಂಡರು ಹಾಗೂ ಅಧಿಕಾರಿಗಳು ಮಾಹಿತಿ ದೃಡೀಕರಿಸಿ ನೀಡುವಂತೆ ಕೋರಿದರು.

ಅಲೆಮಾರಿ/ಅರೆ ಅಲೆಮಾರಿ/ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಸಮುದಾಯಗಳನ್ನು ಅಭಿವೃದ್ಧಿ ಕೋಶದ ರಾಜ್ಯಪಟ್ಟದ ನೋಡಲ್ ಅಧಿಕಾರಿ ಡಾ|| ಬಾಲ ಗುರುಮೂರ್ತಿಯವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯಲ್ಲಿರುವ ಅಲೆಮಾರಿ/ಅರೆ ಅಲೆಮಾರಿ ಸಮುದಾಯದ ಪ್ರತಿಯೊಬ್ಬರ ಅಹವಾಲುಗಳನ್ನು ಆಲಿಸಲಾಯಿತು.

ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದ ಉಪ ಪಂಗಡಗಳ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳು ಲಭ್ಯವಿದೆಯಾದರೂ ಅವುಗಳನ್ನು ತಲುಪಿಸಲು ಈ ವರ್ಗದ ಜನ ಸಮುದಾಯದ ನಿಖರ ನೆಲೆ ಬಗ್ಗೆ ಅಧಿಕೃತ ಮಾಹಿತಿ ಜಿಲ್ಲಾಡಳಿತದೊಂದಿಗೆ ಇಲ್ಲ ಹಾಗಾಗಿ ಮೊದಲು ಇಂತಹ ಜನ ವರ್ಗದ ಬಗ್ಗೆ ಮಾಹಿತಿ ಕೂೃಢೀಕರಿಸಿ ಸೌಲಭ್ಯ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಅಲೆಮಾರಿ ಸಮುದಾಯದ ಜನರಿಗೆ ವಸತಿ ಹಾಗೂ ಶಿಕ್ಷಣ ವ್ಯವಸ್ಥೆ ಒದಗಿಸುವುದು ಜಿಲ್ಲಾಡಳಿತದ ಮೊದಲ ಆದ್ಯತೆ ಉಳಿದ ಬೇಡಿಕೆಗಳನ್ನು ಸಹ ಹಂತ ಹಂತವಾಗಿ ಪರಿಶೀಲಿಸಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನೋಡಲ್ ಅಧಿಕಾರಿ ಡಾ|| ಬಾಲಗುರುಮೂರ್ತಿಯವರು ಮಾತನಾಡಿ ಅಲೆಮಾರಿ ಜನದ ಮಕ್ಕಳೇ ಹೆಚ್ಚಾಗಿ ಓದುವ ಶಾಲೆಗಳಲ್ಲಿ ಕಟ್ಟಡ ನಿರ್ಮಾಣ, ಅಲೆ ಮಾರಿ ಜನಾಂಗದವರು ವಾಸಿಸುವ ಪ್ರದೇಶಗಳಲ್ಲ ವಿಶೇಷ ಗ್ರಂಥಾಲಯಗಳ ಸ್ಥಾಪನೆಗೆ ಅವಕಾಶವಿದ್ದು ಬೇಡಿಕೆ ಮತ್ತು ಅವಶ್ಯಕತೆ ಆಧಾರಿತವಾಗಿ ಪರಿಗಣಿಸಲಾಗುವುದು ಎಂದರು.

ಅಲೆಮಾರಿ ಜನ ಸಮುದಾಯಗಳ ಸಂಘಟಿತವಾಗಬೇಕು ತಮಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಅರಿವು ಪಡೆಯಬೇಕು ಎಂದರು ಜಮೀನು ಹೊಂದಿರುವವರಿಗೆ ಕೊಳವೆ ಬಾವಿ ಕೊರೆಯಲು ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಹಾಜರಿದ್ದ ಸುಡುಗಾಡು ಸಿದ್ದರ ಮುಖಂಡರು ಮಾತನಾಡಿ ತಮ್ಮ ಸಮುದಾಯ ಜೋತಿಷ್ಯ ಹೇಳುವ, ಬೀಕ್ಷೆ ಬೇಡುವ ಕಾರ್ಯ ಮಾಡುತ್ತಿದ್ದಾರೆ. ತಮ್ಮ ಜನಾಂಗದವರು ಹೆಚ್ಚಾಗಿ ವಾಸಿವಿರುವುದು ಅರಸೀಕೆರೆ ತಾಲ್ಲೂಕಿನ ಗ್ರಾಮಗಳಲ್ಲಿ, ಶಾಲಾ ಕಟ್ಟಡ, ಸಮುದಾಯ ಭವನ ಗ್ರಂಥಾಲಯಗಳನ್ನು ಒದಗಿಸುವಂತೆ ಹಾಗೂ ಉದ್ಯೋಗದಲ್ಲಿ ಅಲೆಮಾರಿ ಜನಾಂಗಗಳಿಗೆ ಪತ್ಯೇಕ ಮೀಸಲಾತಿ ಒದಗಿಸುವಂತೆ ಮನವಿ ಮಾಡಿದರು.

ಶಿಳ್ಳೆಕ್ಯಾತ ಸಮುದಾಯ ಪ್ರಮುಖರು ತಮಗೆ ವಸತಿ ವ್ಯವಸ್ಥೆ ಕಲಾ ಪರಿಕರಣಗಳನ್ನು ಒದಗಿಸುವಂತೆ ಹಾಗೂ ಕೃಷಿ ಜಮೀನ್ ದೊರೆಕಿಸುವಂತೆ ಮನವಿ ಮಾಡಿದರು.

ಹಂದಿಜೋಗಿ ಸಮುದಾಯದ ಮುಖಂಡರು ಮಾತನಾಡಿ ಹಂದಿ ಸಾಗಣಿಕೆ ವೇಳೆ ತಾವು ಅನುಭವಿಸುತ್ತಿರುವ ಕಷ್ಟ ಹಾಗೂ ಇದಾಕ್ಕಾಗಿ ತಾಲ್ಲೂಕುವಾರು ಒಂದಿಷ್ಟು ಜಮೀನು ಒದಗಿಸುವ ಕುರಿತು ಮನವಿ ಮಾಡಿದರು.

ಇದೇ ರೀತಿ ಹಕ್ಕಿ ಪಕ್ಕಿ ಜನಾಂಗದವರು ಮಾತನಾಡಿ ನಿರಂತರ ಹೋರಾಟದ ನಂತರದಲ್ಲೂ ತಮಗೆ ಜಮೀನು ದೊರೆತಿಲ್ಲ ಔಷಧಿ ಸಸ್ಯಗಳನ್ನು ಬೆಳೆಯಲು ಅವಕಾಶವಾಗುತ್ತಿಲ್ಲ ಅರಣ್ಯ ಪ್ರದೇಶಗಳಲ್ಲಿ ಇದಕ್ಕೆ ಅವಕಾಶ ದೊರೆಕಿಸಿಕೊಡಬೇಕು ಎಂದರು.

ಎಲ್ಲರ ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ರಾಜ್ಯ ನೋಡಲ್ ಅಧಿಕಾರಿ ಡಾ|| ಬಾಲಗುರುಮೂರ್ತಿ ಅವರು ಜಿಲ್ಲೆಯ ಎಲ್ಲಾ ತಾಲ್ಲೂಗಳಲ್ಲಿ ಇರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ವರ್ಗದ ಅಲೆಮಾರಿ/ಅರೆ ಅಲೆಮಾರಿ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯ ಒಟ್ಟಾರೆ ವಿವರವನ್ನು ಕೂೃಢೀಕರಿಸಿ ಮೊದಲ ಹಂತದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಕ್ರಮವಹಿಸಿಲಾಗುವುದು, ನಂತರ ಇತರೆ ಸೌಲಭ್ಯ ಒದಗಿಸುವುದು ಆದರೆ ಹಿರಿಯರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕು ಎಂದರು.

ವೃತ್ತಿಗಳ ಆಧಾರದ ಮೇಲೆ ಅಲೆಮಾರಿ ಸಮುದಾಯವನ್ನು ಗುರುತಿಸಿದ್ದು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮವಾಗಿ ಗುರುತಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವಾಗಿ ಗುರುತಿಸಲಾಗಿದೆ ಎಂದು ಬಾಲಮುರುಳಿ ಕೃಷ್ಣ ಅವರು ತಿಳಿಸಿದರು.

ಹಾಸನ ಜಿಲ್ಲೆಯಲ್ಲಿ ಸುಡುಗಾಡು ಸಿದ್ದರು, ಹಂದಿಜೋಗಿ, ಶಿಳ್ಳೆಕ್ಯಾತರು, ದೊಂಬರು, ಹಕ್ಕಿಪಿಕ್ಕಿ ಹಾಗೂ ಮೇದರು ಸಮುದಾಯದವರಿದ್ದಾರೆ. ಸರ್ಕಾರವು ಅಲೆಮಾರಿ ಸಮುದಾಯಗಳಿಗೆ ವಿಶೇಷ ಕಾರ್ಯಕ್ರಮ ರೂಪಿಸಿದ್ದು, ಅರ್ಹರಿಗೆ ತಲುಪಿಸಲು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.

ಅಲೆಮಾರಿ ಸಮುದಾಯದ ಅಭಿವೃದ್ಧಿಗಾಗಿ ಮೊದಲ ಅದ್ಯತೆಯನ್ನು ವಸತಿಗೆ ನೀಡಲಾಗಿದೆ. ನಿವೇಶನ ಹಾಗೂ ಮನೆಹೊಂದಿಲ್ಲದವರಿಗೆ ಮನೆಗಳನ್ನು ನಿರ್ಮಿಸಲು ತಹಸೀಲ್ದಾರ್ ಜಾಗ ಗುರುತಿಸಬೇಕು ಎಂದರಲ್ಲದೆ, ನಿವೇಶನ ಹೊಂದಿರುವವರಿಗೆ ಮನೆ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ತಯಾರಿಸಬೇಕು ಎಂದರು.

ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಅಲೆಮಾರಿ ಸಮುದಾಯದ ಮಕ್ಕಳಿಗೆ ಶಾಲೆ ಪ್ರವೇಶಕ್ಕೆ ಪರೀಕ್ಷೆಯಿರುವುದಿಲ್ಲ ಉಚಿತ ಪ್ರವೇಶವಿದೆ ಈ ವಿಷಯ ಸಮುದಾಯದ ಜನತೆಗೆ ಮಾಹಿತಿಯಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಪ್ರಭಾರಿ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಪುಟ್ಟಸ್ವಾಮಿ, ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಪ್ರಿಯಾಂಕ ಎಂ. ಡಿ.ವೈ.ಎಸ್.ಪಿ ಶಶಿಧರ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು ಹಾಜರಿದ್ದರು. ////

The post ಅಲೆಮಾರಿ ಜನಾಂಗದವರ ಸಮಗ್ರ ವಿವರ ನೀಡಲು ಅಧಿಕಾರಿಗಳಿಗೆ ಸೂಚನೆ appeared first on Prajaa News.

Source link

ಅಲೆಮಾರಿ ಜನಾಂಗದವರ ಸಮಗ್ರ ವಿವರ ನೀಡಲು ಅಧಿಕಾರಿಗಳಿಗೆ ಸೂಚನೆ

Leave A Reply

 Click this button or press Ctrl+G to toggle between Kannada and English

Your email address will not be published.