ಉತ್ತಮ ಸಮಾಜಕ್ಕಾಗಿ

ಅವ್ಯವಹಾರ ಬಯಲಿಗೆಳೆದಿದ್ದಕ್ಕಾಗಿ ಸುಳ್ಳು ದೂರು : ಎಸ್.ಡಿ.ಬೆಟ್ಟನ್ನವರ

0

ಅವ್ಯವಹಾರ ಬಯಲಿಗೆಳೆದಿದ್ದಕ್ಕಾಗಿ ಸುಳ್ಳು ದೂರು : ಎಸ್.ಡಿ.ಬೆಟ್ಟನ್ನವರ

ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೆಮಾಭಿವೃದ್ದಿ ಸಂಘದಲ್ಲಿ ಸಂಘದ ಮಾಜಿ ಅಧ್ಯಕ್ಷ ವಿ.ಟಿ.ವೆಂಕಟೇಶಯ್ಯ ಅವರು ನಡೆಸಿರುವ ಅವ್ಯವಹಾರಗಳನ್ನು ಬಯಲಿಗೆಳೆದಿರುದಕ್ಕಾಗಿ ನಮ್ಮ ಮೇಲೆ ಶಿಕ್ಷಣ ಇಲಾಖೆ ಮತ್ತು ಪೋಲಿಸ್ ಠಾಣೆಗಳಲ್ಲಿ ಸುಳ್ಳು ದೂರುಗಳನ್ನು ದಾಖಲಿಸಿದ್ದಾರೆ ಎಂದಿದ್ದಾರೆ.

ಬೆಳಗಾವಿ : ಅಲ್ಲದೆ ಮಾನಸಿಕ ಹಿಂಸೆ ಮತ್ತು ತೊಂದರೆಗಳನ್ನು ನೀಡುತ್ತಿದ್ದಾರೆ ಎಂದು ಸಂಘದ ಪ್ರಮುಖರಾಗಿರುವ ಭರತ ಬಳ್ಳಾರಿ, ಎಸ್.ಡಿ.ಬೆಟ್ಟನ್ನವರ, ಎಸ್.ಎ.ಸರಿಕರ, ಡಿ.ಎನ್.ಹಲ್ಕಿ ಮತ್ತು ಎಸ್.ಐ. ಗುಡದೈಗೋಳ ಆರೋಪಿಸಿದ್ದಾರೆ.

ಈ ಕುರಿತು ಜಂಟಿ ಪತ್ರಿಕಾ ಪ್ರಕಟನೆ ನೀಡಿರುವ ಅವರುಗಳು, ವಿ.ಟಿ.ವೆಂಕಟೇಶಯ್ಯ ಅವರು ಸಂಘದ ಅಧ್ಯಕ್ಷರಾಗಿದ್ದಾಗ ಅವರು ಮತ್ತು ಅವರ ಸಂಗಡಿಗರು ನಡೆಸಿರುವ ಅಧಿಕಾರದ ದುರುಪಯೋಗ, ಸಂಘದ ರಾಜ್ಯ ಸಮಾವೇಶದ ಲೆಕ್ಕಪತ್ರ ನೀಡದಿರುವದು, ರಾಷ್ತ್ರೀಕೃತ ಬ್ಯಾಂಕುಗಳಲ್ಲಿ ಜಂಟಿ ಖಾತೆ ತೆರೆದಿರುವದು, ಶಿಕ್ಷಕಿಯರಿಗೆ ಲೈಂಗಿನ ಕಿರುಕುಳ ನೀಡಿರುವದು ಮತ್ತು ಗೃಹ ನಿರ್ಮಾಣ ಮಂಡಳಿ ಮಾಡಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ನಾವುಗಳು ಬಹಿರಂಗ ಪಡಿಸಿರುವದರಿಂದ ನಮ್ಮ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ರಾಜ್ಯದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯದ ೪೬ ಸಾವಿರ ಶಿಕ್ಷಕರಿದ್ದರೂ ಕೇವಲ ತಮಗೆ ಬೇಕಾದವರನ್ನು ಮಾತ್ರ ಸಂಘದ ಸದಸ್ಯರನ್ನಾಗಿ ನೇಮಕ ಮಾಡಿಕೊಂಡು ಅಧಿಕಾರದ ದುರುಪಯೋಗ ಪಡಿಸಿಕೊಂಡಿದ್ದಾರೆ.

ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳ ನೇಂಕಾತಿಗೂ ಹಣ ಪಡೆದಿದ್ದಾರೆ. ಇದೆಲ್ಲವನ್ನು ಪ್ರಶ್ನಿಸಿರುವದಕ್ಕೆ ಕೆ.ಎ.ಕೃಷ್ಣಪ್ಪ, ಭರತ ಬಳ್ಳಾರಿ, ಜಲೇಂದ್ರ, ಎಸ್.ಡಿ.ಬೆಟ್ಟಣ್ಣವರ, ಸೊನ್ನಪ್ಪ, ಶೇಖರ ನಾಯ್ಕ, ಸಂಗಪ್ಪ ಸರಿಕರ, ದುಂಡಪ್ಪ ಹಲಕಿ, ಕೆ.ಟಿ.ನಾಗರಾಜ, ಶಾಂತಕುಮಾರ, ಗುಡದೈಗೋಳ, ಧುಮಾಳೆ, ಜೋಶಿ, ಇಂದ್ರಕುಮಾರಿ, ಮಾಗಡಿ ಶ್ರಿನಿವಾಸ, ಓಬಳಪ್ಪ ಮುಂತಾದವರ ವಿರುದ್ಧ ಪೋಲಿಸ್ ಠಾಣೆ ಮತ್ತು ಶಿಕ್ಷಣ ಇಲಾಖೆಗೆ ದೂರು ನೀಡಿ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರಕಾರವು ಮಾಜಿ ಅಧ್ಯಕ್ಷ ವಿ.ಟಿ.ವೆಂಕಟೇಶಯ್ಯ, ಸುಮಿತ್ರಾ ದುರ್ಗಿ, ಶಶಿಕಾಂತ ಶಿಂಗನ್ನವರ ಅವರುಗಳ ವಿರುದ್ಧ ಕಠಿಣ ಕ್ರಮ ಜರುಗಿಸದಿದ್ದರೇ, ವಿವಿಧ ದಲಿತ ಸಂಘಟನೆಗಳ ಬೆಂಬಲದೊಂದಿಗೆ ಬೆಂಗಳೂರಿನ ಫ್ರಿಡಂ ಪಾರ್ಕಿನಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಅವರುಗಳು ಎಚ್ಚರಿಕೆ ನೀಡಿದ್ದಾರೆ. ////

The post ಅವ್ಯವಹಾರ ಬಯಲಿಗೆಳೆದಿದ್ದಕ್ಕಾಗಿ ಸುಳ್ಳು ದೂರು : ಎಸ್.ಡಿ.ಬೆಟ್ಟನ್ನವರ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.