ಉತ್ತಮ ಸಮಾಜಕ್ಕಾಗಿ

ಅಹವಾಲು ಸ್ವೀಕಾರ

0

ನಗರ ಸಭೆ ಕುಂದು ಕೊರತೆಗಳ ಕುರಿತು ಜಿಲ್ಲಾಧಿಕಾರಿಯಿಂದ ಅಹವಾಲು ಸ್ವೀಕಾರ

ಹಾಸನ ಅ.10: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಹಾಸನ ನಗರ ಸಭೆಯಲ್ಲಿಂದು ನಗರ ವ್ಯಾಪ್ತಿಯ ಕುಂದು ಕೊರತೆಗಳ ಕುರಿತು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದರು.

ಸುಮಾರು 100ಕ್ಕೂ ಅಧಿಕ ಮಂದಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯವರ ಮುಂದಿಟ್ಟರು.

ಎಲ್ಲರ ಅಹವಾಲುಗಳನ್ನು ಸಮಾದಾನದಿಂದ ಆಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ನ್ಯಾಯ ಸಮ್ಮತ ಬೇಡಿಕೆಗಳನ್ನು ಕಾಲಮಿತಿಯೊಳಗೆ ಇತ್ಯರ್ಥ ಪಡಿಸುವಂತೆ ಸೂಚನೆ ನೀಡಿದರು.

ಅಧಿಕಾರಿಗಳು ಇನ್ನಷ್ಟು ಜನಪರವಾಗಿ ಕಾರ್ಯನಿರ್ವಹಿಸಬೇಕು, ಸ್ವಚತೆ, ಶುದ್ದ ಕುಡಿಯುವ ನೀರಿನ ಪೂರೈಕೆ ಉತ್ತಮ ರಸ್ತೆಗಳ ಅಭಿವೃದ್ದಿಯತ್ತ ನಗರಸಭೆ ಗಮನ ಹರಿಸಬೇಕು ಎಂದು ಜಿಲ್ಲಾಧಿಕಾರಿಯವರು ಸೂಚನೆ ನೀಡಿದರು.

ನಗರದಲ್ಲಿ ಒತ್ತುವರಿಯಾಗಿರುವ ಕಸರ್ವೆನ್ಸಿಗಳನ್ನು ತೆರವುಗೊಳಿಸಬೇಕು. ಪಾರ್ಕಿಂಗ್ ವ್ಯವಸ್ಥೆ ಸರಿ ಪಡಿಸಬೇಕು. ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ರಸ್ತೆಗಳ ಗುಂಡಿ ಮುಚ್ಚಬೇಕು ಕುಡಿಯುವ ನೀರಿನ ಪೂರೈಕೆಯಲ್ಲಿನ ವ್ಯತ್ಯಯ ಹಾಗೂ ಅಸಮರ್ಪಕತೆ ಸರಿಪಡಿಸಿ ಎಂದು ಬಹುತೇಕ ಮಂದಿ ಮನವಿ ಮಾಡಿದರು.

ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ನಿವಾಸಿಗಳು ತಮ್ಮ ಬಡಾವಣೆಯನ್ನು ಶೀಘ್ರ ಅಭಿವೃದ್ದಿಪಡಿಸಿ ಡ್ರೈನೇಜ್ ಮುಚ್ಚಿ ಹೇಮಾವತಿ ನದಿಯಿಂದ ಕುಡಿಯುವ ನೀರು ಪೂರೈಸಿ ಎಂದು ಮನವಿ ಮಾಡಿದರು.

ಬಡಾವಣೆ ನಿರ್ಮಾಣವಾಗಿ ಹಲವು ವರ್ಷಗಳಾದರು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ದಿ ಸಾಧ್ಯಾವಾಗಿಲ್ಲ 6 ಕೋಟಿ ರೂಪಾಯಿ ನಗರಸಭೆಗೆ ಬಿಡುಗಡೆಯಾಗಿದ್ದರು ಅದನ್ನು ಸದ್ಬಳಕೆ ಮಾಡಿಕೊಂಡಿಲ್ಲ. ಅಲ್ಲದೆ ಇತರ ಬಡಾವಣೆಗಳಲ್ಲಿ ಹೆಚ್ಚಿನ ತೆರಿಗೆ ಮಾಡಲಾಗುತ್ತಿದೆ ಇದನ್ನು ಕಡಿಮೆ ಮಾಡಬೇಕು ಎಂದು ಕೆ.ಹೆಚ್.ಬಿ. ನಿವಾಸಿಗಳು ಮನವಿ ಮಾಡಿದರು.

ಎಲ್ಲರ ಮನವಿಗಳನ್ನು ಆಲಿಸಿದ ಜಿಲ್ಲಾಧಿಕಾರಿ ಚನ್ನಪಟ್ಟಣ ಕೆ.ಹೆಚ್.ಬಿ. ಬಡಾವಣೆ ನೂತನವಾಗಿ ನಿರ್ಮಾಣಗೊಂಡಿದೆ ಹಂತ ಹಂತವಾಗಿ ಅಭಿವೃದ್ದಿಪಡಿಸಲಾಗುತ್ತಿದೆ. ಈಗಾಗಲೇ ಟೆಂಡರ್ ಕರೆಯಲಾಗಿದೆ ಅಮೃತ್ ಯೋಜನೆಯಲ್ಲಿ ಹೇಮಾವತಿ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು ಈ ಬಡಾವಣೆಯಲ್ಲಿ ಭೂಮಿಯ ದರ ಹೆಚ್ಚಾಗಿರುವುದರಿಂದ ತೆರಿಗೆ ಪ್ರಮಾಣವೂ ಅದಕ್ಕೆ ಅನುಗುಣವಾಗಿ ವಿಧಿಸಲಾಗುತ್ತದೆ ಎಂದರು.

ನಗರದಲ್ಲಿ ಸರ್ಕಾರಿ ರಸ್ತೆಗಳ ಒತ್ತುವರಿ ಪಾರ್ಕಿಂಗ್ ಸಮಸ್ಯೆಗಳ ಕುರಿತು ಪರಿಶೀಲಿಸಿ ವರದಿ ಮಾಡುವಂತೆ ಜಿಲ್ಲಾಧಿಕಾರಿಯವರು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಡಳಿತ ವ್ಯವಸ್ಥೆಯಲ್ಲಿ ಇನ್ನಷ್ಟು ಚುರುಕು ಹಾಗೂ ಪಾರದರ್ಶಕಗೊಳಿಸುವಂತೆ ನಗರಸಭೆ ಆಯುಕ್ತರಿಗೆ ನಿರ್ದೇಶನ ನೀಡಿದರು.

ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು ಕಾಲಮಿತಿಯೊಳಗೆ ದೊರೆಯಬೇಕು, ನಗರಸಭೆಯಲ್ಲಿ ಸಕಾಲ ಯೋಜನೆಯ ಕೌಂಟರ್ ಪ್ರಾರಂಭಿಸಿ ನಗರದ ಸೌಂದರ್ಯಾಭಿವೃದ್ದಿ ಹಾಗೂ ಸಭೆಗೆ ಹೆಚ್ಚಿನ ಗಮನ ಹರಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.

ತಾವು ವಸತಿ ರಹಿತರಾಗಿದ್ದು, ಅಶ್ರಯ ಅಥವಾ ಇನ್ನಾವುದಾದರೂ ಯೋಜನೆಯಲ್ಲಿ ನಿವೇಶನ, ಮನೆ ಒದಗಿಸುವಂತೆ ಕೆಲವರು ಮನವಿ ಮಾಡಿದರು. @ Hassan, Karnataka

The post ಅಹವಾಲು ಸ್ವೀಕಾರ appeared first on Prajaa News.

Source link

ಅಹವಾಲು ಸ್ವೀಕಾರ

Leave A Reply

 Click this button or press Ctrl+G to toggle between Kannada and English

Your email address will not be published.