ಉತ್ತಮ ಸಮಾಜಕ್ಕಾಗಿ

ಆತ್ಮಹತ್ಯೆಗೆ ಯತ್ನಿಸಿದ ಮಾತು ಬಾರದ ಯುವಕ

0

ಆತ್ಮಹತ್ಯೆಗೆ ಯತ್ನಿಸಿದ ಮಾತು ಬಾರದ ಯುವಕ

ಚಾಮರಾಜನಗರ – ಹನೂರು : ಮಾತು ಬಾರದ ಯುವಕನೊರ್ವ ಕುಟುಂಬ ಕಲಹದಿಂದ ಬೇಸತ್ತು ಮೊಬೈಲ್ ಟವರ್ ಮೇಲೆ ಹತ್ತಿ ಆತ್ಮಹತ್ಯೆ ಯತ್ನಿಸಿದ್ದಾನೆ.

Chamarajanagar News Kannada

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಅಧಿಕಾರಿಗಳು ಯುವಕನ ಮನವೊಲಿಸಿ ಟವರ್ ಕೆಳಗೆ ಇಳಿಸಿದ ಘಟನೆ ಎಲ್ಲೆಮಾಳ ಗ್ರಾಮದಲ್ಲಿ ಜರುಗಿದೆ.

ಹನೂರು ಸಮೀಪದ ಚಿಗತಾಪುರ ಗ್ರಾಮದ ಪರಶಿಮೂರ್ತಿ ಪುತ್ರ ಗುರುರಾಜ್ ೨೫ ವರ್ಷ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆವೊಡ್ಡಿದ್ದಾನೆ.

ಇದನ್ನೂ ಓದಿ >>> ಚಾಕಲೇಟ್ ಕೊಟ್ಟು 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಈತ ಮನೆಯಲ್ಲಿ ಕುಟುಂಬ ಕಲಹದಿಂದ ಬೇಸತ್ತು ಎಲ್ಲೆಮಾಳ ಗ್ರಾಮದಲ್ಲಿರುವ ಏರ್‌ಟೆಲ್ ಟವರ್ ಏರುವ ಮೂಲಕ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದಾನೆ.

ಈ   ಸುದ್ದಿ ಕಾಡ್ಗಚ್ಚಿನಂತೆ ಗ್ರಾಮಗಳಿಗೆ ತಿಳಿದು ತಕ್ಷಣ ಹನೂರು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ವಿಚಾರ ಮುಟ್ಟಿಸಲಾಗಿ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಪೋಲಿಸ್ ಸಿಬ್ಬಂದಿ ವರ್ಗದವರಾದ ಆನಂದ್, ಪ್ರವೀಣ್, ನಾಗೇಶ್, ಗಿರೀಶ್ ಸ್ಥಳಕ್ಕೆ ಬಂದಿದ್ದಾರೆ.

ಇದನ್ನೂ ಓದಿ >>>ಅಂಕಲ್ ಆಪಿಸ್ ಗೆ ಆಂಟಿ ಟಾಕಿಸ್ ಗೆ, ಇಲ್ಲಿದೆ ರಿಯಲ್ ಕಹಾನಿ

ಟವರ್ ತುದಿಯಲ್ಲಿ ಕುಳಿತಿದ್ದ ಯುವಕನ್ನು ಅಧಿಕಾರಿ ಸಿಬ್ಬಂದಿಗಳು ಮನವೊಲಿಸಿ, ನಿನ್ನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಮಾತು ನೀಡಿ, ಇಳಿಯುವಂತೆ ಮನವೊಲಿಸಿ ೨೫೦ ಅಡಿ ಎತ್ತರ ಟವರ್‌ನಿಂದ ಕೆಳಕ್ಕೆ ಇಳಿಸಿ ನಡೆಯಬಹುದಾದ ದೊಡ್ಡ ಕ್ರೈಂ ಅಥವಾ ಆತ್ಮಹತ್ಯೆ ತಪ್ಪಿಸಿದ್ದಾರೆ. ನಂತರ ಕುಟುಂಬದವರನ್ನು ಕರೆಯಿಸಿ ಮನೆಗೆ ಕಳುಹಿಸಿದ್ದಾರೆ. ///

WebTitle : ಆತ್ಮಹತ್ಯೆಗೆ ಯತ್ನಿಸಿದ ಮಾತು ಬಾರದ ಯುವಕ – The young man tried to commit suicide

>>> ಕನ್ನಡ ಕ್ರೈಂ ನ್ಯೂಸ್ ಗಾಗಿ ಕ್ಲಿಕ್ಕಿಸಿ : Kannada Crime News | Karnataka Crime News | Hanur News Kannada

Kannada Crime News

The post ಆತ್ಮಹತ್ಯೆಗೆ ಯತ್ನಿಸಿದ ಮಾತು ಬಾರದ ಯುವಕ appeared first on News Belgaum.

Source link

ಆತ್ಮಹತ್ಯೆಗೆ ಯತ್ನಿಸಿದ ಮಾತು ಬಾರದ ಯುವಕ

Leave A Reply

 Click this button or press Ctrl+G to toggle between Kannada and English

Your email address will not be published.