ಉತ್ತಮ ಸಮಾಜಕ್ಕಾಗಿ

ಆನಂದ ಸದನ, ನಂದ ಗೋಕುಲ ನೂತನ ಕಟ್ಟಡಕ್ಕೆ ಹೆಚ್.ಡಿ.ರೇವಣ್ಣ ಚಾಲನೆ

0

Ananda Sadana and Nanda Gokula's new building inaugurated by HD Revanna

ಆನಂದ ಸದನ, ನಂದ ಗೋಕುಲ ನೂತನ ಕಟ್ಟಡಕ್ಕೆ ಹೆಚ್.ಡಿ.ರೇವಣ್ಣ ಚಾಲನೆ

ಹಾಸನ : ನಗರದ ಹೊರ ವಲಯದಲ್ಲಿರುವ ಕಾಮದೇನು ಮತ್ತು ಚೈತನ್ಯ ವೃದ್ಧಾಶ್ರಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆನಂದ ಸದನ ಮತ್ತು ನಂದ ಗೋಕುಲ ಕಟ್ಟಡವನ್ನು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಉದ್ಘಾಟಿಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಇಂತಹ ವೃದ್ಧಾಶ್ರಮ ನಡೆಸುವುದು ಸುಲಭದ ಕೆಲಸವಲ್ಲ. ಈ ನಿಟ್ಟಿನಲ್ಲಿ ಚೈತನ್ಯ ವೃದ್ಧಾಶ್ರಮವನ್ನು ಗುರುರಾಜು ಹೆಬ್ಬಾರ್ ಅವರು ಯಾವ ಕೊರತೆ ಇಲ್ಲದಂತೆ ಯಶಸ್ವಿತಯಾಗಿ ನಡೆಸಿಕೊಂಡು ಹೋಗುತ್ತಿರುವುದು ಅವರ ಶ್ರಮ ಮತ್ತು ಕೆಲಸ ಶ್ಲಾಘನೀಯವಾಗಿದೆ ಎಂದರು.

ಎಲ್ಲೊ ತೊಟ್ಟಿಯಲ್ಲಿ ಬಿದ್ದಿರುವ ಮಕ್ಕಳು ಇಂದು ದೇಶ ವಿದೇಶಗಳಲ್ಲಿ ಕೋಟ್ಯಾದಿಪತಿ ಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಹಾಗೂ ವೃದ್ಧರೂ ಕೂಡ ಇಲ್ಲಿ ಆಶ್ರಯ ಪಡೆದು ಹೆಬ್ಬಾರು ಅವರು ತಮ್ಮ ಕುಟುಂಬದವರಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಇದೆ ವೇಳೆ ನೆನಪಿಸಿಕೊಂಡರು.

ಮುಂದಿನ ದಿನಗಳಲ್ಲಿ ಆಶ್ರಮ ಇನ್ನು ಅಭಿವೃದ್ಧಿಗೊಳ್ಳಲಿ. ಅವಶ್ಯಕವಾಗಿರುವ ಅನುದಾನವನ್ನು ಸರಕಾರದ ಮಟ್ಟದಲ್ಲಿ ಕೊಡಲು ಮುಂದಾಗುವುದಾಗಿ ಭರವಸೆ ನುಡಿದರು. ಇವರ ಸಮಾಜ ಸೇವೆ ಇನ್ನು ಮುಂದುವರೆಯಲಿ ಎಂದು ಹೇಳಿದರು. ಇದೆ ವೇಳೆ ಜೆಡಿಎಸ್ ಆಡಳಿತದಲ್ಲಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಇದೆ ವೇಳೆ ಮೆಲಕು ಹಾಕಿದರು.

ಭವಾನಿ ರೇವಣ್ಣ ಅವರು ಉದ್ದೇಶಿಸಿ ಮಾತನಾಡಿ, ಇಂತಹ ವೃದ್ಧಾಶ್ರಮ ಮಾಡಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಲ್ಲಿ ಆಸೆ ಇತ್ತು. ಅವರ ಕನಸ್ಸು ಕೂಡ ಆಗಿತ್ತು. ವರ್ಷದ ೩೬೫ ದಿನಗಳಲ್ಲೂ ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದರಿಂದ ಸಾಧ್ಯವಾಗಿರುವುದಿಲ್ಲ.

ಈಗ ನನ್ನ ಮಗ ಪ್ರಜ್ವಲ್ ರೇವಣ್ಣಗೆ ತುಂಬ ಆಸಕ್ತಿ ಇದ್ದು, ಆ ನಿಟ್ಟಿನಲ್ಲಿ ಪ್ರತಿ ವರ್ಷ ಮೇ.೧೮ರ ದೇವೇಗೌಡರ ಜನ್ಮ ದಿನದಂದು ಈ ಚೈತನ್ಯ ವೃದ್ಧಾಶ್ರಮಕ್ಕೆ ಒಂದು ಲಕ್ಷ ರೂಗಳ ಧನ ಸಹಾಯ ಮಾಡಲಾಗುವುದು. ಈ ಹಣದಲ್ಲಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚೈತನ್ಯ ವೃದ್ಧಾಶ್ರಮದ ಡಾ|| ಗುರುರಾಜು ಹೆಬ್ಬಾರ್, ಉಪವಿಭಾಗಧಿಕಾರಿ ಹೆಚ್.ಎಲ್. ನಾಗರಾಜು, ಉಪಾಧ್ಯಕ್ಷ ಮುತ್ತತ್ತಿ ರಾಜಣ್ಣ, ಹಿಮ್ಸ್ ನಿರ್ದೇಶಕ ರವಿಕುಮಾರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಉದಯಕುಮಾರ್, ಮಹಿಳಾ ನಿರ್ದೇಶಕಿ ಸ್ವರ್ಣಲತಾ, ಜಿಲ್ಲಾ ಸರಕಾರಿ ಆಸ್ಪತ್ರೆಯ ಶಸ್ತç ಚಿಕಿತ್ಸಕ ಡಾ|| ಶಂಕರ್, ಗೋವಿಂದರಾಜ ಶಟ್ಟಿ ಇತರರು ಪಾಲ್ಗೊಂಡಿದ್ದರು. /////

The post ಆನಂದ ಸದನ, ನಂದ ಗೋಕುಲ ನೂತನ ಕಟ್ಟಡಕ್ಕೆ ಹೆಚ್.ಡಿ.ರೇವಣ್ಣ ಚಾಲನೆ appeared first on Prajaa News.

Source link

ಆನಂದ ಸದನ, ನಂದ ಗೋಕುಲ ನೂತನ ಕಟ್ಟಡಕ್ಕೆ ಹೆಚ್.ಡಿ.ರೇವಣ್ಣ ಚಾಲನೆ

Leave A Reply

 Click this button or press Ctrl+G to toggle between Kannada and English

Your email address will not be published.