ಉತ್ತಮ ಸಮಾಜಕ್ಕಾಗಿ

ಆರ್.ಟಿ.ಇ: ಪಾಲಕರ ಗಮನಕ್ಕೆ

0

ಬೆಳಗಾವಿ, ಜನವರಿ 19 2017-18 ನೇ ಸಾಲಿನ ಆರ್ ಟಿ ಇ ಅಡಿಯಲ್ಲಿ ದಾಖಲಾತಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜನವರಿ 20 ರಿಂದ ಪ್ರಾರಂಭವಾಗುವುದಾಗಿ ಮಾನ್ಯ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರು ತಿಳಿಸಿರುತ್ತಾರೆ.
ಕಾರಣ ಆಸಕ್ತ ಪಾಲಕರು ತಮ್ಮ ಮಕ್ಕಳ ದಾಖಲಾತಿಗಾಗಿ ಆನ್‍ಲೈನಲ್ಲಿ ಅರ್ಜಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಕಡ್ಡಾಯವಾಗಿ ಮಗು ಮತ್ತು ತಂದೆ ಅಥವಾ ತಾಯಿ ಅಥವಾ ಪೋಷಕರ ಬಯೋ ಮೆಟ್ರಿಕ್ ( ಹೆಬ್ಬೆರಳು ಗುರುತು ) ಅವಶ್ಯಕ ವಿರುತ್ತದೆ. ಜೋತೆಗೆ ಆಧಾರ ಕಾರ್ಡ, ಮಗುವಿನ ಜಾತಿ ಪ್ರಮಾಣ ಪತ್ರ ಹಾಗೂ ತಂದೆ ಅಥವಾ ತಾಯಿ ಅಥವಾ ಪೋಷಕರ ಆದಾಯ ಪ್ರಮಾಣ ಪತ್ರ, ಜನ್ಮ ದಿನಾಂಕ ದಾಖಲೆಗಳು ಸಹ ಕಡ್ಡಾಯವಾಗಿ ಅವಶ್ಯಕವಾಗಿರುತ್ತವೆ.
ಆಸಕ್ತ ಪಾಲಕರು ಮೇಲಿನ ಎಲ್ಲಾ ದಾಖಲೆಗಳೊಂದಿಗೆ ಆನ್‍ಲೈನ ಮೂಲಕ ಅರ್ಜಿ ಸಲ್ಲಿಸುವುದು ಹೆಚ್ಚಿನ ಮಾಹಿತಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆರ್ ಟಿ ಇ ಸಹಾಯವಾಣಿ ದೂರವಾಣಿ ಸಂಖ್ಯೆ 0831-2451452. ಹಾಗೂ ನೋಡಲ್ ಅಧಿಕಾರಿಗಳ ದೂರವಾಣಿ ಸಂಖ್ಯೆ 9480695054 ಗೆ ಸಂಪರ್ಕಿಸಬೇಕೆಂದು ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.