ಉತ್ತಮ ಸಮಾಜಕ್ಕಾಗಿ

ಇಂಜಿನಿಯರಿಂಗ್ ಕೋರ್ಸ್ ಇಷ್ಟವಾಗದೆ ವಿಧ್ಯಾರ್ಥಿನಿ ಆತ್ಮಹತ್ಯೆ

0

ಇಂಜಿನಿಯರಿಂಗ್ ಕೋರ್ಸ್ ಇಷ್ಟವಾಗದೆ ವಿಧ್ಯಾರ್ಥಿನಿ ಆತ್ಮಹತ್ಯೆ

ತಾನು ದಾಖಲಾಗಿದ್ದ ಕೋರ್ಸ್ ಹಿಡಿಸದೆ ಖಿನ್ನತೆಯಿಂದ 18 ​​ವರ್ಷದ ವಿದ್ಯಾರ್ಥಿನಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗಾಶ್ರೀ ಎಸ್ಸಿ, ಮೊದಲ ವರ್ಷ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿನಿ ಎನ್ನಲಾಗಿದೆ. ಗುವಾಹಾಟಿಯ ಹೊರವಲಯದಲ್ಲಿರುವ ಐಐಟಿ ಕ್ಯಾಂಪಸ್ನಲ್ಲಿ ಧನಸಿರಿ ಹಾಸ್ಟೆಲ್ ಕೋಣೆಯ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಲ್ಲಲಾಗಿದೆ ಎಂದು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಶಿವಮೊಗ್ಗ ಬಳಿಯ ಹೊಸನಗರದ ನಿವಾಸಿ ನಾಗಶ್ರೀ ಇಂಜಿನಿಯರಿಂಗ್ ಕೋರ್ಸ್ ಗೆ ದಾಖಲಾಗಿದ್ದರು.

ನಾಗಶ್ರಿಯ ಸ್ನೇಹಿತೆ ತರಗತಿಗೆ ಹಾಜರಾಗಿ ಹಿಂದುರುಗಿದಾಗ ಕೋಣೆಯು ಒಳಗಿನಿಂದ ಲಾಕ್ ಮಾಡಿಕೊಳ್ಳಲಾಗಿತ್ತು, ಪೋನ್ ಮಾಡಿದರೆ ಕರೆ ಸ್ವೀಕರಿಸದಿದ್ದದ್ದನ್ನು ಕಂಡು ಸೆಕ್ಯೂರಿಟಿ ಗೆ ಮಾಹಿತಿ ತಿಳಿಸಲಾಗಿದೆ.

ಸೆಕ್ಯೂರಿಟಿಗಳು ಪೊಲೀಸರಿಗೆ ಮಾಹಿತಿ ಮುಟ್ಟಿಸಿ ಬಾಗಿಲು ಹೊಡೆದು ಒಳ ಬಂದಾಗ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಅಲ್ಲದೆ , ಡೆತ್ ನೋಟ್ ಕೂಡ ದೊರೆತಿದ್ದು, ಕೋರ್ಸ್ ಇಷ್ಟವಿಲ್ಲದೆ ಈ ನಿರ್ಣಯಕ್ಕೆ ಬಂದಿರುವುದಾಗಿ ತಿಳಿದು ಬಂದಿದೆ. ///


WebTitle : ಇಂಜಿನಿಯರಿಂಗ್ ಕೋರ್ಸ್ ಇಷ್ಟವಾಗದೆ ವಿಧ್ಯಾರ್ಥಿನಿ ಆತ್ಮಹತ್ಯೆ – engineering student commits suicide-unhappy about engineering

Kannada Crime News

The post ಇಂಜಿನಿಯರಿಂಗ್ ಕೋರ್ಸ್ ಇಷ್ಟವಾಗದೆ ವಿಧ್ಯಾರ್ಥಿನಿ ಆತ್ಮಹತ್ಯೆ appeared first on News Belgaum.

Source link

ಇಂಜಿನಿಯರಿಂಗ್ ಕೋರ್ಸ್ ಇಷ್ಟವಾಗದೆ ವಿಧ್ಯಾರ್ಥಿನಿ ಆತ್ಮಹತ್ಯೆ

Leave A Reply

 Click this button or press Ctrl+G to toggle between Kannada and English

Your email address will not be published.