ಉತ್ತಮ ಸಮಾಜಕ್ಕಾಗಿ

ಇತಿಹಾಸ ಅಧ್ಯಯನಕ್ಕೆ ಹಸ್ತಪ್ರತಿಗಳ ಕೊಡುಗೆ ಅನನ್ಯ – ಡಾ. ಹಂಪ ನಾಗರಾಜಯ್ಯ

0

ಇತಿಹಾಸ ಅಧ್ಯಯನಕ್ಕೆ ಹಸ್ತಪ್ರತಿಗಳ ಕೊಡುಗೆ ಅನನ್ಯ – ಡಾ. ಹಂಪ ನಾಗರಾಜಯ್ಯ

ಬೆಳಗಾವಿ.: ಭಾರತದ ಇತಿಹಾಸ ,ಸಂಸ್ಕøತಿ ಮತ್ತು ಧರ್ಮದ ಬಗ್ಗೆ ಆಳವಾದ ಅಧ್ಯಯನ ಮತ್ತು ಸಮಗ್ರ ಮಾಹಿತಿ ನೀಡುವಲ್ಲಿ ಹಸ್ತಪ್ರತಿಗಳ ಕೊಡಗೆ ಅನನ್ಯವಾಗಿದೆ ಎಂದು ನಾಡಿನ ಹಿರಿಯ ವಿದ್ವಾಂಸ, ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ಇಂದಿಲ್ಲಿ ಅಭಿಪ್ರಾಯಪಟ್ಟರು.

ಬೆಳಗಾವಿಯಲ್ಲಿಂದು ಕನ್ನಡ ವಿಶ್ವವಿದ್ಯಾಲಯ ಹಂಪಿ ಹಸ್ತಪ್ರತಿಶಾಸ್ತ್ರ ವಿಭಾಗ, ಡಾ. ಆ.ನೇ.ಉಪಾಧ್ಯೆ ವಿಸ್ತರಣ ಕೇಂದ್ರ ಭರತೇಶ ಶಿಕ್ಷಣ ಬೆಳಗಾವಿ ಇವರು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಅಖಿಲ ಕರ್ನಾಟಕ 15 ನೇಯ ಹಸ್ತಪ್ರತಿ ಸಮ್ಮೇಳನದ ಸಮ್ಮೇಳನಾಧ್ಯಕ್ಷ ವಹಿಸಿ ಹಾಗೂ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ಈ ಹಿಂದಿನ ಕಾಲದಲ್ಲಿ ಹಸ್ತಪ್ರತಿಗಳ ಮೂಲಕ ನಮ್ಮ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗಿತ್ತು. ಇಂದು ಯಾರಿಗೂ ಹಸ್ತಪ್ರತಿಗಳು ಬೇಡವಾಗಿರಬಹುದು. ಆದರೆ ಹಿಂದಿನ ಕಾಲದ ವೈಭವವನ್ನು ಅರಿಯಲು ಹಸ್ತಪ್ರತಿಗಳ ಸಹಾಯವಿಲ್ಲದೇ ಇತಿಹಾಸ ಅರಿಯಲು ಸಾಧ್ಯವಿಲ್ಲ. ಹಸ್ತಪ್ರತಿಗಳು ನಿರ್ಜಿವ ಎಂದು ಬಹುತೇಕರು ಭಾವಿಸಿದ್ದಾರೆ. ಆದರೆ ವಾಸ್ತವದಲ್ಲಿ ಇಂದಿಗೂ ಹಸ್ತಪ್ರತಿಗಳಲ್ಲಿ ಜೀವ ತುಂಬಿದ್ದು, ನಮ್ಮ ಹಿಂದಿನ ಇತಿಹಾಸವನ್ನು ಸಾರಿ ತಿಳಿಸುತ್ತಿದೆ ಎಂದು ಅವರು ಹೇಳಿದರು.
ನಮ್ಮ ಹಿರಿಯರು ಹಸ್ತಪ್ರತಿ,ಒಲೆಗರೆ . ತಾಲೆಪ್ರತಿಗಳನ್ನು ರಚಿಸುವ ಮೂಲಕ ನಮ್ಮತನವನ್ನು ಸಂರಕ್ಷಸಿದ್ದಾರೆ. ಇದರಲ್ಲಿ ಹಸ್ತಪ್ರತಿಗಳನ್ನು ಓದಿ ತಿಳಿದುಕೊಂಡು ಅವುಗಳನ್ನು ಸಾಮನ್ಯ ಜನರಿಗೆ ತಿಳಿಸುವ ಕಾರ್ಯ ನಡೆದಿರುವುದೂ ಸಹ ಹೆಮ್ಮೆಯ ಸಂಗತಿಯಾಗಿದೆ. ಜರ್ಮನ ದೇಶದಲ್ಲಿನ ಗ್ರಂಥಾಲಯದಲ್ಲಿ ಪರಿಪೂರ್ಣವಾದ ಹಸ್ತಪ್ರತಿಗಳ ಸಂಗ್ರಹವಿದ್ದು, ಈ ಹಸ್ತಪ್ರತಿಗಳ ಮೂಲಕ ಸಂಪೂರ್ಣ ಭಾರತದ ಸಂಸ್ಕøತಿಯನ್ನು ಅಧ್ಯಯನ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಮೂಡಬಿದರಿಯಲ್ಲಿ ದೊರೆತ ಧವಲಾ , ಜಯಧವಲಾ, ಮಹಾಧವಲಾ ಗ್ರಂಥಗಳು ಎಂಬ ಹೆಸರಿನಿಂದ ಲೋಕವಿಖ್ಯಾತವಾಗಿರುವ ಧವಲಾ ಹಸ್ತಪ್ರತಿ ಗ್ರಂಥಗಳ ಹಿರಿಮೆ ಮಹಿಮೆ ಕುರಿತು ಎಷ್ಟು ಹೇಳಿದರೂ ಕಡಿಮೆಯೇ . ಇವು ಏಕೈಕ ಹಸ್ತಪ್ರತಿಗಳಾಗಿದ್ದು, ಮೂಡಬಿದರೆಯ ಸ್ವಸ್ತಿಶ್ರೀ ಚಾರುಕೀರ್ತಿ ಪರಂಪರೆಯ ಜೈನ ಮಠದಲ್ಲಿ ಸಂರಕ್ಷಿಸಲ್ಪಟ್ಟಿವೆ. ತಾಲೆಗರಿಗಳ ಮೇಲೆ ವನಸ್ಪತಿ ರಸ ಮತ್ತು ಅಳಲೆಕಾಯಿ ಸೇರಿಸಿ ಮಾಡಿದ ವಿಶಿಷ್ಟ ಮಸಿಯಿಂದ ಗಲಗದ ಕಡ್ಡಿಯಿಂದ ಬರೆಯಲಾಗಿರುವುದು ಇದರ ವಿಶೇಷತೆಗಳು, ಅಂದರೆ ಇದರ ಅಕ್ಷರಗಳು ಕೋರಿ ಕಾಗದದ ಮೇಲೆ ಬರೆಯುವಂತೆಯೇ ಮಸಿಯಿಂದ ಬರೆದವು ಇದರ ಮೂಲ ಚೂಲಗಳ ಚರಿತ್ರೆ ಬಲು ರೋಚಕವಾಗಿದೆ ಎಂದು ಅವರು ವಿವರಿಸಿದರು.
News Belgaum-ಇತಿಹಾಸ ಅಧ್ಯಯನಕ್ಕೆ ಹಸ್ತಪ್ರತಿಗಳ ಕೊಡುಗೆ ಅನನ್ಯ - ಡಾ. ಹಂಪ ನಾಗರಾಜಯ್ಯ 1ಇಂದು ಕನ್ನಡ ವಿಶ್ವ ವಿದ್ಯಾಲಯ ಹಂಪಿ ತನ್ನ ಅಧೀನದಲ್ಲಿ ಹಸ್ತಪ್ರತಿಶಾಸ್ತ್ರ ವಿಭಾಗವನ್ನು ಪ್ರಾರಂಭಿಸಿ ಹಸ್ತಪ್ರತಿಗಳ ಸಂರಕ್ಷಣೆ ಮಾಡುವುದಲ್ಲದೇ ಅವುಗಳ ಅಧ್ಯಯನಕ್ಕೆ ವಿಶೇಷ ಪ್ರಯತ್ನ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇಂದಿಗೂ ಸಹ ನಾಡಿನ ವಿವಿಧ ಗ್ರಾಮಗಳಲ್ಲಿ ತಾಳೆಗರಿ, ಹಸ್ತಪ್ರತಿಗಳು ದೊರೆಯುತ್ತಿರುವುದನ್ನು ನಾವು ಕಾಣುತ್ತೇವೆ. ಇಂತಹ ಅಪರೂಪದ ತಾಳೆಗರಿಗಳು ಅಥವಾ ಹಸ್ತಪ್ರತಿಗಳು ದೊರೆತಲ್ಲಿ ಅವುಗಳನ್ನು ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಹಸ್ತಾಂತರಿಸಿ ನಮ್ಮ ಸಂಸ್ಕøತಿಯನ್ನು ಬೆಳವಣಿಗೆಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿಮಾಡಿದರು.
ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಡಾ. ಆ.ನೇ.ಉಫಾಧ್ಯೆ ವಿಸ್ತರಣ ಕೇಂದ್ರದ ಅಧ್ಯಕ್ಷ ಡಾ.ಜಿನದತ್ತ ದೇಸಾಯಿ ಅವರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಗಡಿ ಭಾಗದಲ್ಲಿ ಈ ಅಧ್ಯಯನ ಕೇಂದ್ರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ವಿಶ್ವ ವಿದ್ಯಾಲಯ ಹೆಚ್ಚಿನ ಆರ್ಥಿಕ ನೆರವು ನೀಡಿದಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಮೂರು ಕೃತಿಗಳನ್ನು ಬಿಡುಗಡೆ ಮಾಡಲಾಯಿತು ಮೊದಲಿಗೆ `ಆಧುನಿಕ ಹಿಂದಿ ಮಹಾಕಾವ್ಯಗಳಲ್ಲಿ ಭಗವಾನ್ ಮಹಾವೀರ್’ ಮೂಲಡಾ.ಸುಷಮಾ ರೋಟೆ ಅನುವಾದ ಪ್ರೊ.ನಿಟ್ಟೂರು ದೇವೇಂದ್ರಕುಮಾರ ಇದನ್ನು ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಹಂಪ ನಾಗರಾಜಯ್ಯ ಅವರು ಬಿಡುಗಡೆ ಮಾಡಿದರು ನಂತರ ಡಾ.ಎಫ್.ಟಿ.ಹಳ್ಳಿಕೇರಿಯವರು ಸಂಪಾದಿಸಿದ ಹಸ್ತಪ್ರತಿ ವ್ಯಾಸಂಗ-17 ಈ ಕೃತಿಯನ್ನು ಡಾ.ಜಿನದತ್ತ ದೇಸಾಯಿಯವರು ಬಿಡುಗಡೆ ಮಾಡಿದರು. ಇನ್ನೊಂದು ಕೃತಿ ಡಾ.ಕೆ.ರವೀಂದ್ರನಾಥ ಅವರು ಸಂಪಾದಿಸಿದ ಹಸ್ತಪ್ರತಿ ವ್ಯಾಸಂಗ-18 ಇದನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಮಂಜುನಾಥ ಬೇವಿನಕಟ್ಟಿ ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಮಂಜುನಾಥ ಬೇವಿನಕಟ್ಟಿಯವರು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗವು ಪ್ರತಿ ವರ್ಷ ಇಂತಹ ಕಾರ್ಯಕ್ರಮವನ್ನು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾಡುತ್ತಾ ಹಸ್ತಪ್ರತಿಗಳ ಬಗ್ಗೆ ಜಾಗೃತಿ ಮತ್ತು ಅವುಗಳ ಮೌಲ್ಯಗಳನ್ನು ಕುರಿತು ಜನ ಸಾಮಾನ್ಯರಿಗೆ ವಿದ್ಯಾರ್ಥಿಗಳಿಗೆ ತಿಳಿಸಲು ಪ್ರಯತ್ನಿಸಲಾಗುತ್ತದೆ. ಅದೇ ತೆರನಾದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಾವಿರಾರು ಹಸ್ತಪ್ರತಿಗಳು ಕೊಣೆಯಲ್ಲಿ ಬಂಧನವಾಗಿವೆ ಆ ಹಸ್ತಪ್ರತಿಗಳನ್ನು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಬಂಢಾರಕ್ಕೆ ನೀಡಿದರೆ ಅವುಗಳನ್ನು ರಕ್ಷಿಸಿ ಸಂಪಾದಿಸುವ ಕೆಲಸವನ್ನು ಮಾಡುತ್ತೇವೆ ಎಂದರು. ಹಂಪ ನಾಗರಾಜಯ್ಯನವರು ಈ ಕೆಲಸವನ್ನು ಮಾಡಬೇಕೆಂದು ಹಸ್ತಪ್ರತಿಗಳ ಕಾಳಜಿಯನ್ನು ವ್ಯಕ್ತಪಡಿಸಿದರು. ಭರತೇಶ ಶಿಕ್ಷಣ ಸಂಸ್ಥೆಯವರು ಎಂ.ಫಿಲ್ ಹಾಗೂ ಪಿಎಚ್.ಡಿ ಕೋರ್ಸ್‍ಗಳನ್ನು ತೆರೆಯಲು ಅವಕಾಶ ಮಾಡಿಕೊಡುತ್ತೇನೆ. ಎಂದು ಹೇಳಿದರು.
ಪ್ರಾಸ್ಥಾವಿಕ ನುಡಿಗಳನ್ನು ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಕೆ.ರವೀಂದ್ರನಾಥ ಅವರು ಮಾತನಾಡಿ ಜನ ಸಾಮಾನ್ಯರನ್ನು ವಿದ್ಯಾರ್ಥಿಗಳನ್ನು ಮತ್ತು ಪ್ರಾಧ್ಯಾಪಕರನ್ನು ಗಮನದಲ್ಲಿಟ್ಟುಕೊಂಡು ಹಸ್ತಪ್ರತಿಗಳ ತರಬೇತಿ ಮತ್ತು ಸಂರಕ್ಷಣೆಯನ್ನು ಕುರಿತು ಸಮ್ಮೇಳನಗಳನ್ನು ನಾಡಿನಾದ್ಯಂತ ಹಮ್ಮಿಕೊಳ್ಳಲಾಗುವುದು ಎಂದು ನುಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪುಷ್ಪದಂತ ದೊಡ್ಡಣ್ಣವರ ಶ್ರೀಪಾಲ ಖೇಮಲಾಪುರೆ ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಭರತೇಶ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಮಕ್ಕಳು ನೆರವೇರಿಸಿದರು ಸ್ವಾಗತವನ್ನು ಡಾ.ಆ.ನೇ.ಉಪಾಧ್ಯೆ ವಿಸ್ತರಣ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಎಸ್.ಅಂಗಡಿಯವರು ನೆರವೆರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನುಮತ್ತು ವಂದನಾರ್ಪಣೆಯನ್ನು ಡಾ.ಭರತ ಅಲಸಂದಿಯವರು ನೆರವೆರಿಸಿದರು. ////

The post ಇತಿಹಾಸ ಅಧ್ಯಯನಕ್ಕೆ ಹಸ್ತಪ್ರತಿಗಳ ಕೊಡುಗೆ ಅನನ್ಯ – ಡಾ. ಹಂಪ ನಾಗರಾಜಯ್ಯ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.