ಉತ್ತಮ ಸಮಾಜಕ್ಕಾಗಿ

ಇನ್ನೊಬ್ಬರ  ದುಡ್ಡು ಖರ್ಚು ಮಾಡಿ ಶಿಮ್ಲಾ ಮಹಾನಗರ ಪಾಲಿಕೆ ಸ್ಟಡಿ ಮಾಡ್ತಾರಂತೆ. ನಗರ ಸೇವಕರು ಜಾಲಿ ಟ್ರಿಪ್

0

ಇನ್ನೊಬ್ಬರ  ದುಡ್ಡು ಖರ್ಚು ಮಾಡಿ ಶಿಮ್ಲಾ ಮಹಾನಗರ ಪಾಲಿಕೆ ಸ್ಟಡಿ ಮಾಡ್ತಾರಂತೆ. ನಗರ ಸೇವಕರು ಜಾಲಿ ಟ್ರಿಪ್

ಬೆಳಗಾವಿ:ಊರು ಸಂಕಷ್ಟದಲ್ಲಿದ್ದಾಗ ಈಗ ನಗರ ಸೇವಕರು ಜಾಲಿ ಟ್ರಿಪ್ ಹಾಕಿದ್ದಾರೆ. ಉದ್ದೇಶ ಮಾತ್ರ ಕಡು ಸ್ಪಷ್ಟ, ‘ಸ್ಟಡಿ ಟೂರ್!’ ಅಂಗೈಯಲ್ಲಿ ಆಕಾಶದ ಚಿತ್ತಾರ, ವ್ಯೋಮ ವ್ಯವಹಾರ ಸ್ಟಡಿ ಮಾಡುವ ಕಾಲ ಬಂದಿರುವಾಗ, ಇನ್ನೊಬ್ಬರ  ದುಡ್ಡು ಖರ್ಚು ಮಾಡಿ ಶಿಮ್ಲಾ ಮಹಾನಗರ ಪಾಲಿಕೆ ಸ್ಟಡಿ ಮಾಡ್ತಾರಂತೆ..!! ಕೆಟ್ಟು ಹೋದ ನಗರ ರಸ್ತೆಗಳ ರಿಪೇರಿ ಮಾಡಿಸಲು 2000 ಕೀಮಿ ಆಚೆಯ ಶಿಮ್ಲಾ ಪ್ರವಾಸ ಮಾಡಿ ಬರಬೇಕೆ ಎಂದು ನಾಗರಿಕರು ಪ್ರಶ್ನೆ ಎತ್ತಿದ್ದಾರೆ.

News Belgaum-ಇನ್ನೊಬ್ಬರ  ದುಡ್ಡು ಖರ್ಚು ಮಾಡಿ ಶಿಮ್ಲಾ ಮಹಾನಗರ ಪಾಲಿಕೆ ಸ್ಟಡಿ ಮಾಡ್ತಾರಂತೆ. ನಗರ ಸೇವಕರು ಜಾಲಿ ಟ್ರಿಪ್ಮ್ಮ ಸ್ವಂತ ದುಡ್ಡಿನಲ್ಲಿ ಬೇಕಾದ್ರೆ ಸ್ಟಡಿ ಟೂರ್…ಜಾಲಿ ಟ್ರಿಪ್…ಮಾಡಿಕೊಂಡು ಬರಬಹುದಿತ್ತು ಎಂಬ ಸಾರ್ವಜನಿಕ ವ್ಯಾಖ್ಯಾನ ವ್ಯಕ್ತವಾಗಿದೆ. ಗೂಗಲನಲ್ಲಿ ಮೊಬೈಲ್ ವರ್ಬಲ್ ಪ್ಯಾಡ್ ಟಂಕಿಸಿದರೆ ಶಿಮ್ಲಾ ಮಹಾನಗರ ಪಾಲಿಕೆಯ ಜಾತಕವೇ ಓಪನ್ ಆಗುತ್ತಿರುವಾಗ ಅಲ್ಲಿಗೇ ಭೇಟಿ ನೀಡುವ ‘ಸ್ಟಡಿ’ ಉದ್ದೇಶ ಸ್ಪಷ್ಠಗೊಳ್ಳುತ್ತದೆ; ಅಲ್ವೇನ್ರೀ, ಎನ್ನುವವರ ಮಧ್ಯೆ ಪಾಪ ಶಿಮ್ಲಾ ನೋಡ್ಕೊಂಡು ಬರ್ಲಿ ಬಿಡ್ರಿ ಎಂಬ ಉದಾರಿಗಳು ಸೇರಿಕೊಳ್ಳುತ್ತಾರೆ. ಲಗುಬಗೆಯ ನಿರ್ಧಾರ ಪ್ರಕಟಿಸಿದ ಮೇಯರ್ ಬಸಪ್ಪ ಚಿಕ್ಕಲದಿನ್ನಿ ಹಾಗೂ ಸಹುದ್ಯೋಗಿಗಳು ಈಗ ಸ್ಟಡಿಗಾಗಿ ಶಿಮ್ಲಾಗೆ ಹಾರಿದ್ದು ಬೆಳಗಾವಿಗೆ ಬಂದ್ ತಕ್ಷಣ ಅಭ್ಯಾಸ ಇಂಪ್ಲಿಮೆಂಟ್ ಮಾಡಲಿದ್ದಾರಂತೆ.

ಈ ಹಿಂದೆ ಚಂಡಿಗಡ ಸ್ಟಡಿ ಟೂರ್ ಮಾಡ್ಕೊಂಡು ಬಂದಿದ್ದವರು, ಏನು ಕಡಿದು ಎಲ್ಲಿ ಕಟ್ಟೆ ಕಟ್ಟಿದ್ದಾರೆ ಎಂದು ಜನತೆ ನಗರದ ತುಂಬ ಹುಡುಕಾಡುತ್ತಿದ್ದಾರೆ. ಸಾರ್ವಜನಿಕ ಹಣದಲ್ಲಿ ಸ್ಟಡಿ ಟೂರ್ ಹೋದ ಪಾಲಿಕೆ ದಂಡು ತಿರುಗಿ ಬಂದ ಮೇಲೆ ಯಾವೆಲ್ಲ ಸುಧಾರಣೆ ಮಾಡುತ್ತಾರೆ ಎಂಬ ನೆಟ್ಟ ನೋಟದಿಂದ ಜನ ಕಾಯ್ದು ಕುಳಿತಿದ್ದಾರೆ.

The post ಇನ್ನೊಬ್ಬರ  ದುಡ್ಡು ಖರ್ಚು ಮಾಡಿ ಶಿಮ್ಲಾ ಮಹಾನಗರ ಪಾಲಿಕೆ ಸ್ಟಡಿ ಮಾಡ್ತಾರಂತೆ. ನಗರ ಸೇವಕರು ಜಾಲಿ ಟ್ರಿಪ್ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.