ಉತ್ತಮ ಸಮಾಜಕ್ಕಾಗಿ

ಈಗೊಬ್ಬ ಜನನಾಯಕ , ಯುವಶಕ್ತಿ ಜೇಡಗಲ್ಲಿಯ ಶ್ರೀ ಭೂಪಾಲ ಅಣ್ಣಾ

0

ಈಗೊಬ್ಬ ಜನನಾಯಕ , ಯುವಶಕ್ತಿ ಜೇಡಗಲ್ಲಿಯ ಶ್ರೀ ಭೂಪಾಲ ಅಣ್ಣಾ

ನಾವಾಯಿತು ನಮ್ಮ ಕೆಲಸವಾಯಿತು ಎಂದು ಮೂಗು ತಿರುವೋ ರಾಜಕಾರಣಿಗಳ ಮಧ್ಯೆ ಇಂತಹ ಒಬ್ಬ ಜನನಾಯಕರು ಇರುತ್ತಾರೆ ಎಂದು ತೋರಿಸಿಕೊಟ್ಟವರು ಜೇಡಗಲ್ಲಿಯ ಶ್ರೀ ಭೂಪಾಲರವರು.

ಮಾಜಮುಖಿ ಕೆಲಸಕಾರ್ಯಗಳಿಗೆ , ಧಾರ್ಮಿಕ ಹವನ , ಇನ್ನಾವುದೇ ಸಮಾಜಿಕ ಕೆಲಸ ಕಾರ್ಯಗಳಿಗೆ ತಟ್ಟನೆ ಮುಂದಾಗುವ ಪ್ರವೃತ್ತಿ ಹೋದಿರೋ ಜೇಡಗಲ್ಲಿಯ ಶ್ರೀ ಭೂಪಾಲರವರು ಯುವಕರ ಆಶಾಕಿರಣ ಎಂದರೆ ತಪ್ಪಗಾಲಾರದು.

ಬಡವರ ಬಗೆಗೆ ಅಪಾರ ಕಾಳಜಿ ಹಾಗೂ ಸಾಮಾಜಿಕ ಒಳತಿಗೆ ಒಳ್ಳೆಯ ಭಾವನೆ ಹೊಂದಿರೋ ಇವರು , ಮೊನ್ನೆಯಷ್ಟೇ ಕಳೆದ ಗಣೇಶ ಚತುರ್ತಿಯ ಸಮಯದ ತಮ್ಮ ಒಳ್ಳೆಯ ಕಾರ್ಯಕ್ಕೆ ಇನ್ನಷ್ಟು ಜನರ ಹತ್ತಿರವಾಗಿದ್ದಾರೆ. ಯುವಪಡೆಯಂತು ಇವರನ್ನು ಇನ್ನಷ್ಟು ಹಚ್ಚಿಕೊಂಡಿದ್ದಾರೆ.

ಗಣೇಶ ಪ್ರತಿಷ್ಠಾಪಿಸುವ ಸಂಘ ಸಂಸ್ಥೆಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಸಿಸಿಟಿವಿ ಅಳವಡಿಸಬೇಕು ಎಂಬ ಸೂಚನೆಗೆ “ಏನು ಮಾಡಬೇಕೆಂದು ” ತೋಚದ ಗಣೇಶ ಯುವ ಬಳಗಕ್ಕೆ ನಿರಾಗವಾಗಿ ಸಹಕರಿಸಿದ್ದು ಇದೇ ಸಮಾಜ ಸೇವಕ ಹಾಗೂ ಸಮಾಜ ಕಳಕಳಿ ಮೆರೆಯುತ್ತಿರುವ ಶ್ರೀ ಭೂಪಾಲರವರು.

ಶಹಾಪೂರ ಠಾಣಾ ವ್ಯಾಪ್ತಿಯಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ CCTV ಕ್ಯಾಮರಾಗಳನ್ನು ಅಳವಡಿಸ ಬೇಕೆಂದು ಯಾವುದೆ ಮನ್ಸೂಚನೆಯಿಲ್ಲದೆ ಮೇಲಾಧಿಕಾರಿಗಳು ಕಟ್ಟಪ್ಪಣೆ ಮಾಡಿದಾಗ ಗಣೇಶ ಪ್ರತಿಷ್ಠಾಪನೆಗೆ ಸಿದ್ದವಾಗಿದ್ದ ಎಲ್ಲರೂ ಬರಸಿಡಿಲು ಬಡಿದಂತೆ ತೆಲೆಮೇಲೆ ಕೈಹೊತ್ತು ಕುಳಿತಿರು.News Belgaum-ಈಗೊಬ್ಬ ಜನನಾಯಕ , ಯುವಶಕ್ತಿ ಜೇಡಗಲ್ಲಿಯ ಶ್ರೀ ಭೂಪಾಲ ಅಣ್ಣಾ 4

ವಯಕ್ತಿಕ ಕುಶಲೋಪರಿಗೆಂದು ಠಾಣೆಗೆ ಬಂದಿದ್ದ ಭೂಪಾಲ ಅಣ್ಣಾ ಅವರು ಸಂಗತಿ ತಿಳಿದ ತಕ್ಷಣ ಹಿಂದು ಮುಂದು ನೋಡದೆ ನಾನು ಇರುವಾಗ ಚಿಂತಿಸದಿರಿ ಎಂದು ಅಭಯ ನೀಡುವುದಲ್ಲದೆ ಸ್ವತಃ ಖುದ್ದಾಗಿ ಅಪ ರಾತ್ರಿಯ ವರೆಗೆ ನಿಂತು 8 ಕ್ಯಾಮರಾ ಅಳವಡಿಸಿ ಇಲಾಖೆಯೊಂದಿಗೆ ಸಹಕರಿಸಿದ್ದಾರೆ.

ಇವರ ಜನಪರ ಕಾಳಜಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು. ನಿಜವಾದ ಜನನಾಯಕ ಇವರೇ ಎಂದು ಜನ ಆಶಿರ್ವದಿಸಿದ್ದಾರೆ. ಅಷ್ಟೇ ಅಲ್ಲದೆ ಇಂತಹ ಸಮಾಜಮುಖಿ ವ್ಯಕ್ತಿಗಳು ಇನ್ನಷ್ಟು ಜನಸೇವೆ ಮಾಡಲು ದೇವರು ಶಕ್ತಿ ನೀಡಲಿ ಎಂದಿದ್ದಾರೆ

ಸ್ಥಳೀಯ ಮಂಜುನಾಥ್ ಇಷ್ಟಲಿಂಗ ರವರು ಮಾತನಾಡಿ , ಯುವಶಕ್ತಿ ಸಮಾಜ ಸೇವಕ ಶ್ರೀ ಭೂಪಾಲರವರು ತಮ್ಮ ಸ್ವ ಗುಣದಿಂದ ಜನರಿಗೆ ಒಳಿತು ಮಾಡುತ್ತಿದ್ದಾರೆ. ಅವರೇನಾದರೂ ರಾಜಕೀಯ ಶಕ್ತಿ ಪಡೆದರೆ ಖಂಡಿತಾ ಅಭಿವೃದ್ದಿ ಹಾಗೂ ಸಮಾಜ ಕೆಲಸಗಳು ಇನ್ನಷ್ಟು ಬೆಳವಣಿಗೆ ಕಾಣುತ್ತದೆ , ಎಂದರು.

ಅಲ್ಲದೆ ಅವರ ಸೇವೆ ಜನರಿಗೆ ಬೇಕಾಗಿದ್ದು , ಅವರು ಬಯಸಿ ಜನಸೇವೆಗೆ ಅಥವಾ ರಾಜಕೀಯ ಪ್ರವೇಶಿಸಿದರೆ ಖಂಡಿತಾ ಗೆಲವು ಖಚಿತ ಎಂದರು.

News Belgaum-ಈಗೊಬ್ಬ ಜನನಾಯಕ , ಯುವಶಕ್ತಿ ಜೇಡಗಲ್ಲಿಯ ಶ್ರೀ ಭೂಪಾಲ ಅಣ್ಣಾ 1
News Belgaum-ಈಗೊಬ್ಬ ಜನನಾಯಕ , ಯುವಶಕ್ತಿ ಜೇಡಗಲ್ಲಿಯ ಶ್ರೀ ಭೂಪಾಲ ಅಣ್ಣಾ 2
News Belgaum-ಈಗೊಬ್ಬ ಜನನಾಯಕ , ಯುವಶಕ್ತಿ ಜೇಡಗಲ್ಲಿಯ ಶ್ರೀ ಭೂಪಾಲ ಅಣ್ಣಾ 3
News Belgaum-ಈಗೊಬ್ಬ ಜನನಾಯಕ , ಯುವಶಕ್ತಿ ಜೇಡಗಲ್ಲಿಯ ಶ್ರೀ ಭೂಪಾಲ ಅಣ್ಣಾ

ಯಶಸ್ವಿ ಗಣೇಶೋತ್ಸವ – ಕಾನೂನು ಸುವ್ಯವಸ್ಥೆ ಕಾಪಾಡಿದ ಅರಕ್ಷಕರಿಗೆ ಸನ್ಮಾನ.

ಜೇಡಗಲ್ಲಿ ಶಹಾಪೂರ ಬೆಳಗಾವಿಯ ಮುಸ್ಲಿಂ ಜಮಾತನ ಹಾಗೂ ಪಂಚ ಮಂಡಳಿಯ ಶ್ರೀ ಭೂಪಾಲ ಅಣ್ಣಾ ಅತ್ತು ,ಶ್ರಿಶೈಲ ಹಣಬರಟ್ಟಿ, ಅನಿಲ ಅನ್ವೇಕರ, ಪ್ರವೀಣ ಅಮ್ರೋಳಕರ, ವಿನೋದ ಖಂಗ್ರಾಳಕರ, ಗಜು ಗಂಗನೆ, ಹಾಗೂ ಇಮ್ತಿಯಾಜ ಬೇಪಾರಿ, ಮೈನು ಬೇಪಾರಿ ಮತ್ತು ಪ್ರಮುಖರು ಪೊಲೀಸ್ ಠಾಣೆಗೆ ಆಗಮಿಸಿ ಮೊಹರಂ ಹಾಗೂ ಗಣೇಶೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಬೆಳಗಾವಿನಗರಕ್ಕೆ ಶಹಾಪೂರ ಠಾಣೆಯನ್ನು ಮಾದರಿಯಾಗಿಸಲು ಹಗಲಿರುಳೆನ್ನದೆ ಸಾರ್ವಜನಿಕರ ಮಾನ-ಪ್ರಾಣಗಳ ರಕ್ಷಣೆಗಾಗಿ ನಿದ್ರೆ,ಹಸಿವು, ಹಾಗೂ ಕುಟುಂಬಗಳ ಹಂಗನ್ನು ತೊರೆದು ಶ್ರಮಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಶ್ಲಾಂಘಣೆಗಳ ಮಹಾಪೂರವನ್ನೆ ಹರಿಸಿ ಸನ್ಮಾನಿಸಿದರು. ////

The post ಈಗೊಬ್ಬ ಜನನಾಯಕ , ಯುವಶಕ್ತಿ ಜೇಡಗಲ್ಲಿಯ ಶ್ರೀ ಭೂಪಾಲ ಅಣ್ಣಾ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.