ಉತ್ತಮ ಸಮಾಜಕ್ಕಾಗಿ

ಉದ್ಯೋಗಖಾತರಿ ಕೂಲಿಕಾರರಿಗೆ ಆರೋಗ್ಯ ತಪಾಸಣೆ

0

ಉದ್ಯೋಗಖಾತರಿ ಕೂಲಿಕಾರರಿಗೆ ಆರೋಗ್ಯ ತಪಾಸಣೆ

ಬೆಳಗಾವಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಅಕ್ಟೋಬರ್ 4 ರಂದು ಆರೋಗ್ಯ ತಪಾಸಣೆ ಮಾಡಲಾಯಿತು.

ಥಣಿ ತಾಲೂಕಿನ ಜಕ್ಕಾರಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಕ್ಕಾರಟ್ಟಿ ಗ್ರಾಮದಲ್ಲಿ ಕೈಕೊಳ್ಳಲಾದ ಬಾಂದಾರ ಹೂಳು ತೆಗೆಯುವ ಕಾಮಗಾರಿಯನ್ನು ಅನುಷ್ಟಾನ ಮಾಡಲಾಗುತ್ತಿದೆ. ಸದರಿ ಕಾಮಗಾರಿಯಲ್ಲಿ ದಿನಂಪ್ರತಿ 40-45 ಜನ ನೊಂದಾಯಿತ ಕೂಲಿಕಾರರು ಕೆಲಸಕ್ಕಾಗಿ ಬರುತ್ತಿದ್ದು, ಈ ದಿನ 39 ಜನ ಕೂಲಿಕಾರರು ಕೆಲಸಕ್ಕೆ ಹಾಜರಾಗಿದ್ದು, ಕಾಮಗಾರಿ ನಡೆಯುವ ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು ಅದೇ ರೀತಿ ವಿಶೇಷವಾಗಿ ಈ ದಿನ ಕೂಲಿ ಕೆಲಸಕ್ಕಾಗಿ ಬಂದಿರುವಂತ ಕೂಲಿಕಾರರಿಗೆ ಮದಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಆರೋಗ್ಯ ತಪಾಸಣೆ ಮತ್ತು ಪ್ರಥಮ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿತ್ತು.
ಈ ಕೂಲಿಕಾರರಲ್ಲಿ ವಿಶೇಷವಾಗಿ 3 ಜನ ಅಂಗವಿಕಲರು ಕೆಲಸದಲ್ಲಿ ಭಾಗಿಯಾಗಿದ್ದು ಅವರಿಗೂ ಕೂಡಾ ಆರೋಗ್ಯ ತಪಾಸಣಾ ಕಾರ್ಯವನ್ನು ಮಾಡಲಾಯಿತು. ತಪಾಸಣಾ ವೇಳೆಯಲ್ಲಿ ಬಿ.ಪಿ, ಶುಗರ್, ರಕ್ತ ತಪಾಸಣೆ ಪ್ರಥಮ ಚಿಕಿತ್ಸೆ ಮಾಡಿ ಆರೋಗ್ಯ ವಿಚಾರಣೆ ಮಾಡಲಾಯಿತು.
ಸ್ಥಳದಲ್ಲಿ ಎ.ಎನ್.ಎಮ್ ಅಶ್ವಿನಿ ಮಾಡಕರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಅಚ್ಯುತ ಎಸ್ ಕುಲಕರ್ಣಿ, ಅಧ್ಯಕ್ಷರು ಶ್ರೀಮತಿ ರಾಜೇಶ್ರೀ ಶೇಡಬಾಳ, ತಾಲೂಕ ಐಇಸಿ ಸಂಯೋಜಕರಾದ ಶಿವಾನಂದ ಸಾವಗಾಂವ ತಾಂತ್ರಿಕ ಸಹಾಯಕ ಅವಿನಾಶ ಪಾಟೀಲ ಮತ್ತು ಆಶಾ ಕಾರ್ಯಕರ್ತೆ ಸುರೇಖಾ ಕಾಂಬಳೆ ಉಪಸ್ಥಿತರಿದ್ದರು.

The post ಉದ್ಯೋಗಖಾತರಿ ಕೂಲಿಕಾರರಿಗೆ ಆರೋಗ್ಯ ತಪಾಸಣೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.