ಉತ್ತಮ ಸಮಾಜಕ್ಕಾಗಿ

ಎರಡು ಕೋಟಿ ಹಣ ಝೂ ಕಂಪೌಂಡ

0

ಎರಡು ಕೋಟಿ ಹಣ ಝೂ ಕಂಪೌಂಡ

ಬೆಳಗಾವಿ: ಪರಿಸರಸ್ನೇಹಿ ಅಭಿವೃದ್ಧಿ ಮಂತ್ರ ಸರಕಾರದ ಆದ್ಯತೆ ಆಗಬೇಕೆ ಹೊರತು ಕೇವಲ ಮಾನವ ಕುಲ ಅಭಿವೃದ್ಧಿ ಆಗಬಾರದು ಎಂದು ಎಪಿಸಿಸಿಎಫ್ ಹಾಗೂ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ಪಿ. ರವಿ ಅಭಿಪ್ರಾಯ ಪಟ್ಟರು.

ಬೆಳಗಾವಿ ಅರಣ್ಯ ವಿಭಾಗದ 64ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಸಮೀಪದ ಭೂತರಾಮನಹಟ್ಟಿ ಝೂ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ಸಂರಕ್ಷಿತ ಪ್ರದೇಶ ಜಾಲ(Protected Area Network) ಕರ್ನಾಟಕದಲ್ಲಿ ಹಬ್ಬಿದೆ. ವನ್ಯ ಹಾಗೂ ಪ್ರಾಣಿಸಂಪತ್ತು ರಾಜ್ಯದಲ್ಲಿ ಇದರಿಂದ ಹೆಚ್ಚಿದೆ. ಮಾನವ ಅನಕೂಲಕ್ಕಾಗಿ ಮಾತ್ರ ಅಭಿವೃದ್ಧಿ ಮಾಡಿದರೆ ಮುಂದಿನ ದಿನಗಳಲ್ಲಿ ಪರಿಸರ ಸರ್ವನಾಶ ಆಗಲಿದೆ. ಪರಿಸರ ಕೇಂದ್ರಿತ ಅಭಿವೃದ್ಧಿ ಮಾಡಿದರೆ( Ecocentric Approach)ಮಾತ್ರ ಜೀವವಲಯ ಉಳಿಯಲಿದೆ ಎಂದರು. ಪ್ರಾಕೃತಿಕ ಸಂಪನ್ಮೂಲ ಸ್ವಾಭಾವಿಕವಾಗಿ ಕಾಯ್ದು ಬೆಳೆಸಿದಾಗ ಮಾತ್ರವೇ ಸಾಮಾಜಿಕ ನ್ಯಾಯ(Social Justice) ದೊರಕಿಸಿದಂತಾಗುತ್ತದೆ ಎಂದು ವ್ಯಾಖ್ಯಾನಿಸಿದರು.
ಬೆಳಗಾವಿ ಸಿಸಿಎಫ್ ಕರುಣಾಕರನ್ ಮಾತನಾಡಿ 1100ಚಕೀಮಿ ಅರಣ್ಯ ರಾಜ್ಯದಲ್ಲಿ ವಿಸ್ತಾರಗೊಂಡಿದ್ದು, 416 ಹುಲಿ, 6700 ಆನೆ ಹಾಗೂ ಇತರ ಅವಲಂಬಿತ ವನ್ಯ ವರ್ಗ ರಾಜ್ಯದಲ್ಲಿ ಹರಡಿದೆ ಎಂದರು. ಬೆಳಗಾವಿ ಭೂತರಾಮನಹಟ್ಟಿ ಝೂ ಅಭಿವೃದ್ಧಿಗೆ ಕೇಂದ್ರ ಮೃಗಾಲಯ ಪ್ರಾಧಿಕಾರ ಅನುಮೋದನೆ ನೀಡಿದ್ದು, ಹುಲಿ, ಸಿಂಹ ಹಾಗೂ ಇತರ ವನ್ಯಮೃಗಗಳನ್ನು ಮುಂದಿನ ದಿನಗಳಲ್ಲಿ ಇಲ್ಲಿಯೂ ನೋಡಬಹುದು ಎಂದರು.
ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ ಈಗಾಗಲೇ ಎರಡು ಕೋಟಿ ಹಣ ಝೂ ಕಂಪೌಂಡ ಕಟ್ಟಲು ಕೊಡಲಾಗಿದೆ. ಸರಕಾರ ಪಾಲಿಕೆ ಹಾಗೂ ಇತರ ಮೂಲಗಳಿಂದ ಹಣ ಸೇರಿದಂತೆ ಪ್ರತಿವರ್ಷ ಹತ್ತು ಕೋಟಿ ಕೊಡಿಸಲಾಗುವುದು. ದೇಶದಲ್ಲೇ ಅತ್ಯುತ್ತಮ ಮಾದರಿ ಝೂ ಇದಾಗಲಿದೆ ಎಂದರು.
ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಅರಣ್ಯ ಸಿಬ್ಬಂಧಿ ಹಾಗೂ ಉರಗಪ್ರೇಮಿಗಳನ್ನು ಸನ್ಮಾನಿಸಲಾಯಿತು. ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಎಸ್ಪಿ ಸುಧೀರಕುಮಾರ ರೆಡ್ಡಿ, ಡಿಸಿಎಫ್ ಎಂ. ವಿ. ಅಮರನಾಥ, ಮಾಜಿ ಸಚಿವ ವೀರಕುಮಾರ ಪಾಟೀಲ, ಬಿ. ಆರ್. ಸಂಗಪ್ಪಗೋಳ, ಲಕ್ಷ್ಮಣ ರಾವ ಚಿಂಗಳೆ, ಸಿದ್ದು ಸುಣಗಾರ, ಎಸಿಎಫ್ ಎಸ್. ಎಂ. ಸಂಗೊಳ್ಳಿ, ಆರ್ ಎಫ್ ಓ ನಾಗರಾಜ ಬಾಳೆಹೊಸೂರ, ಶ್ರೀನಾಥ ಕಡೋಲಕರ ಇತರರು ಭಾಗವಹಿಸಿದರು.

The post ಎರಡು ಕೋಟಿ ಹಣ ಝೂ ಕಂಪೌಂಡ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.