ಉತ್ತಮ ಸಮಾಜಕ್ಕಾಗಿ

ಎಸ್. ಜಿಯಾವುಲ್ಲಾ ಅವರ ಬೀಳ್ಕೊಡುಗೆ

0

ಎಸ್. ಜಿಯಾವುಲ್ಲಾ ಅವರ ಬೀಳ್ಕೊಡುಗೆ

ಬೆಳಗಾವಿ: ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿ ಅಪೂರ್ವ ಶ್ರೀಮಂತ ಆಡಳಿತಾತ್ಮಕ ಅನುಭವ ತಮಗೆ ನೀಡಿದೆ ಎಂದು ಪೂರ್ವ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ತಿಳಿಸಿದರು.

ಗರದ ಉದ್ಯಮಭಾಗ ಶಗುನ್ ಗಾರ್ಡನನಲ್ಲಿ ಇಂದು ಸಂಜೆ ನಡೆದ ಎಸ್. ಜಿಯಾವುಲ್ಲಾ ಅವರ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಅವರ ಆಹ್ವಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಳಗಾವಿ ಜಿಲ್ಲೆಯ ಆಡಳಿತ ನಡೆಸುವುದು ಸರಕಾರಿ ಅಧಿಕಾರಿಯೊಬ್ಬನಿಗೆ ಹತ್ತಾರು ಆಯಾಮಗಳಲ್ಲಿ ತರಬೇತಿ ನೀಡುತ್ತದೆ. ಮೊದಲು ಉಪವಿಭಾಗಾಧಿಕಾರಿಯಾಗಿ, ಮುಗದೊಮ್ಮೆ ವಿಶಾಲ ಜಿಲ್ಲೆಯ ಆಡಳಿತ ಮುಖ್ಯಸ್ಥನಾಗಿ ಸೇವಾಯಂತ್ರವನ್ನು ಮುನ್ನಡೆಸಿದ್ದೇನೆ. ಅಧಿಕಾರಿ ವರ್ಗ, ರಾಜಕೀಯ ವ್ಯವಸ್ಥೆ, ಪ್ರಾಜ್ಞರ ಸಲಹೆ ಸಹಕಾರ ಅಪಾರವಾಗಿತ್ತು ಎಂದು ಜಿಯಾವುಲ್ಲಾ ಸ್ಮರಿಸಿಕೊಂಡರು.

ಜಿ. ಪಂ. ಸಿಇಓ ಆರ್. ರಾಮಚಂದ್ರನ್ ಮಾತನಾಡಿ ಸೌಮ್ಯ ಸ್ವಭಾವದ ಕರ್ತವ್ಯದಕ್ಷ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರೊಂದಿಗೆ ಕಳೆದ ಒಂದು ವರ್ಷ ಒಂದು ಕ್ಷಣಕ ಎನ್ನಿಸಿದೆ ಎಂದರು. ಪಾಲಿಕೆ ಕಮಿಷ್ನರ್ ಶಶಿಧರ ಕುರೇರ ಮಾತನಾಡಿ ಹಿರಿಯ ಅಧಿಕಾರಿಯನ್ನು, ಕಿರಿಯ ಅಧಿಕಾರಿಗಳು ಸತತ ಗಮನಿಸುತ್ತಿರುತ್ತಾರೆ. ಆಡಳಿತ, ಹಾವಭಾವ, ಪರಿಸ್ಥಿತಿ ನಿಭಾವಣೆ ಎಲ್ಲವೂ ಸತತ ಗಮನಕ್ಕೆ ಒಳಪಡುತ್ತವೆ. ಅಂತಹ ನೈಪುಣ್ಯ ಅನುಭವಗಳನ್ನು ಜಿಲ್ಲಾಧಿಕಾರಿಯಾಗಿ ಎಸ್. ಜಿಯಾವುಲ್ಲಾ ನೀಡಿದ್ದಾರೆ ಎಂದರು. ಎಸ್ಪಿ ಸುಧೀರಕುಮಾರರೆಡ್ಡಿ, ಎಡಿಸಿ ಡಾ. ಬೂದೆಪ್ಪ, ಕಂದಾಯ, ಪೊಲೀಸ್ ಹಾಗೂ ಇತರ ಇಲಾಖೆ ಅಧಿಕಾರಿಗಳು ಭಾಗವಹಿಸಿದರು.

The post ಎಸ್. ಜಿಯಾವುಲ್ಲಾ ಅವರ ಬೀಳ್ಕೊಡುಗೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.