ಉತ್ತಮ ಸಮಾಜಕ್ಕಾಗಿ

ಐಜಿಪಿ ಅಲೋಕ್ ಕುಮಾರ್ ರವರಿಗೆ ಹೃದಯಸ್ಪರ್ಶಿ ಬಿಳ್ಕೊಡುಗೆ

0

ಐಜಿಪಿ ಅಲೋಕ್ ಕುಮಾರ್ ರವರಿಗೆ ಹೃದಯಸ್ಪರ್ಶಿ ಬಿಳ್ಕೊಡುಗೆ

 ಬೆಳಗಾವಿ: ಉತ್ತರ ವಲಯದ ಖಡಕ್ ಐಜಿಪಿ ಆಗಿ ಹೆಸರು ಗಳಿಸಿದ ಅಲೋಕ ಕುಮಾರ ಅವರಿಗೆ ಇಂದು ಹೃದಯಸ್ಪರ್ಶಿ ಬಿಳ್ಕೊಡುಗೆ ನೀಡಲಾಯಿತು.

ಬೆಳಗಾವಿ ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ, ಸಿಇಓ ಆರ್. ರಾಮಚಂದ್ರನ್, ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಉತ್ತರ ವಲಯದ ಜಿಲ್ಲೆಗಳ ಪೊಲೀಸ್ ಅಧಿಕ್ಷಕರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಸ್ಪಿಗಳಾದ ಸುಧೀರಕುಮಾರರೆಡ್ಡಿ, ಸಂತೋಷಬಾಬು, ಕೆ. ಬಿ. ರಿಷ್ಯಂತ್, ಜಿ. ಸಂಗೀತಾ, ಸೀಮಾ ಲಾಟಕರ, ಪ್ರಕಾಶ ನಿಕ್ಕಂ, ಎಎಸ್ಪಿ ಮಹಾನಿಂಗ ನಂದಗಾವಿ, ರವೀಂದ್ರ55 ಗಡಾದಿ ಹಾಗೂ ರೇಂಜ್ ನ ಡಿಎಸ್ ಪಿಗಳು ಪೊಲೀಸ್ ಇನ್ಸಪೆಕ್ಟರ್ ಗಳು ಭಾಗವಹಿಸಿದರು.

ಬಿಜಾಪುರ ಎಸ್ಪಿ ಪ್ರಕಾಶ ನಿಕ್ಕಂ ಮಾತನಾಡಿ ನೂರು ಪ್ರತಿಷತ ಪೊಲೀಸಿಂಗ್ ಮಾಡುವ ಅಧಿಕಾರಿ ಅಲೋಕಕುಮಾರ! ಪೊಲೀಸ್ ಇಲಾಖೆಯ ಸಂಪೂರ್ಣ ತನಿಖಾ ವ್ಯವಸ್ಥೆ ಮತ್ತು ಆಡಳಿತ ನಿಪುಣ ಎಂದು ಬಣ್ಣಿಸಿದರು. ಗದಗ ಎಸ್ಪಿ ಸಂತೋಷಕುಮಾರ ಮಾತನಾಡಿ ಅಪಾರ ಸ್ಮರಣ ಶಕ್ತಿ ಹೊಂದಿರುವ ಅಲೋಕಕುಮಾರ ಇಲಾಖೆಯ ಆಗುಹೋಗುಗಳ ಬಲ್ಲ ಆಕರ ಕಣಜ ಎಂದರು. ಪೊಲೀಸ್ ಆಯುಕ್ತ ಡಾ. ಡಿ.ಸಿ. ರಾಜಪ್ಪ ಮಾತನಾಡಿ ಅಪಾರ ಅನುಭವಿ ಅಲೋಕಕುಮಾರ ನಮ್ಮ ಮಾರ್ಗದರ್ಶರಾಗಿ ಕೆಲಸ ಕಲಿಸಿದ್ದಾರೆ. ಪೊಲೀಸ್ ನೌಕರಿಯ ಬದ್ಧತೆ ಕಟ್ಟುಪಾಡುಗಳನ್ನು ಧೈರ್ಯ ಸಾಹಸ, ವೃತ್ತಿ ಕ್ರೀಯಾಶೀಲತೆಗಳನ್ನು ಅವರು ಕಲಿಸಿದ್ದಾರೆ. ಬೆಳಗಾವಿ ರೇಂಜ್ ಐಜಿ ಆಗಿ ಅವರು ಬಂದಿದ್ದೇ ತಡ ಬೆಳಗಾವಿ ನಗರದಲ್ಲಿ ನಮಗೆಲ್ಲ ಹೆಚ್ಚಿನ ಹುಮ್ಮಸ್ಸು ತಂದಿತು ಎಂದು ಡಾ. ರಾಜಪ್ಪ ಸ್ಮರಿಸಿಕೊಂಡರು.

ಗೌರವ ಬೀಳ್ಕೊಡುಗೆ ಸ್ವೀಕರಿಸಿದ ಅಲೋಕಕುಮಾರ ಹುದ್ದೆಯಲ್ಲಿದ್ದಷ್ಟು ದಿನ ಆತ್ಮಸಂತ್ರಪ್ತಿ ತರುವಂತೆ ಕರ್ತವ್ಯ ಮಾಡಬೇಕು. ಪೊಲೀಸಿಂಗನ ಶೇ. 70ರಷ್ಟನ್ನು ನಾನು ಬೈಲಹೊಂಗಲದಲ್ಲಿ ಕಲಿತಿದ್ದೇನೆ ಎಂದರು. ಬಿಜಾಪುರ ಜಿಲ್ಲೆಯ ಅಪರಾಧ ಘಟನೆಗಳು ರಾಜ್ಯದ ಗಮನ ಸೆಳೆದವು.

ಬಿಜಾಪುರದ ಪುಂಡಾಟ ಹತ್ತಿಕ್ಕುವ ಕೆಲಸ ಪೊಲೀಸ್ ಇಲಾಖೆ ಮಾಡಿತು. ಆದರೆ ನಮ್ಮ ಕೆಲ ಪೊಲೀಸ್ ಅಧಿಕಾರಿಗಳೇ ಅಪರಾಧದಲ್ಲಿ ಭಾಗವಹಿಸಿದ್ದು ಖೇದಕರ ಎಂದರು. ಬೆಳಗಾವಿ ಪೊಲೀಸ್ ರೇಂಜನಲ್ಲಿ ಟ್ರಾಫಿಕ್ ಆಕ್ಸಿಡೆಂಟ್ ಪ್ರಕರಣಗಳೇ ದೊಡ್ಡ ಸಮಸ್ಯೆ.

ವೈಜ್ಞಾನಿಕ ರಸ್ತೆ ನಿರ್ಮಾಣ ಕೆಲಸ ಮತ್ತು ಜನರು ಸಂಚಾರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು ಆದಷ್ಟು ಶಾಂತಿ ಸುವ್ಯವಸ್ಥೆ ಕಾಯ್ದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ರೇಂಜನಲ್ಲಿ ಮಾಡಲಾಯಿತು ಎಂದರು. ////

The post ಐಜಿಪಿ ಅಲೋಕ್ ಕುಮಾರ್ ರವರಿಗೆ ಹೃದಯಸ್ಪರ್ಶಿ ಬಿಳ್ಕೊಡುಗೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.