ಉತ್ತಮ ಸಮಾಜಕ್ಕಾಗಿ

ಒಡೆದು ಆಳುವುದೇ ಬಿಜೆಪಿಯವರ ಕಾಯಕ-ಕೃಷಿ ಸಚಿವ ಶಿವಶಂಕರ್ ರೆಡ್ಡಿ

0

ಒಡೆದು ಆಳುವುದೇ ಬಿಜೆಪಿಯವರ ಕಾಯಕ-ಕೃಷಿ ಸಚಿವ ಶಿವಶಂಕರ್ ರೆಡ್ಡಿ

ರಾಜ್ಯದಲ್ಲಿರುವ ಮೈತ್ರಿ ಸರ್ಕಾರದ ಬದಲಾವಣೆಯಾಗಬೇಕಾದರೆ ಅದು ಸಮನ್ವಯ ಸಮಿತಿಯಲ್ಲಿ ಚರ್ಚೆ ನಡಸಿ ನಿರ್ಧಾರ ಕೈಗೊಳ್ಳಬೇಕು ಎಂದು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಚಾಮರಾಜನಗರದಲ್ಲಿ ಸ್ಪೋಟಕ ಹೇಳಿಕೆ ನೀಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಕೃಷಿ ಸಚಿವ ಶಿವಶಂಕರರೆಡ್ಡಿ, ವಿಶ್ವ ರೈತ ಮುಖಂಡ ಪ್ರೋ. ಎಂ.ಡಿ. ನಂಜುಂಡಸ್ವಾಮಿರವರ ಕನಸಿನ ಅಮೃತ ಭೂಮಿಗೆ ತೆರಳಿ, ನಂಜುಂಡಸ್ವಾಮಿರವರ ಸಮಾಧಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿ, ಮೈತ್ರಿ ಸರ್ಕಾರ ನಿರ್ವಹಣೆಗೆ ರಚನೆಯಾಗಿರುವ ಸಮನ್ವಯ ಸಮತಿಯ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.

ರಾಜ್ಯದಲ್ಲಿರುವ ಕಾಂಗ್ರೇಸ್ ಜೆ.ಡಿ.ಎಸ್. ಮೈತ್ರಿ ಸರ್ಕಾರ ಪತನಗೊಳಿಸಿ ಅಧಿಕಾರಕ್ಕೆರಲು ಬಿ.ಜೆ.ಪಿ ಹಗಲುಗನಸು ಕಾಣುತ್ತಿದೆ, ಒಡೆದು ಆಳುವುದೇ ಬಿಜೆಪಿಯವರ ಕಾಯಕವಾಗಿದೆ ಎಂದು ಕೃಷಿ ಸಚಿವ ಶಿವಶಂಕರ್‍ರೆಡ್ಡಿ ಹೇಳಿದರು.

ರಾಜ್ಯದಲ್ಲಿ ಕೋಮುವಾದಿ ಪಕ್ಷವನ್ನು ಆಧಿಕಾರದಿಂದ ದೂರ ಇಡಲು ಜಾತ್ಯಾತೀತ ಪಕ್ಷಗಳು ಒಂದಾಗಿ ಅಧಿಕಾರ ನಡೆಸುತ್ತಿದೆ, ಇದೇ ಮಾದರಿಯಾಗಿ ಲೋಕಸಭೆ ಚುನಾವಣೆಯಲ್ಲು ನಡೆಯಲಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ನಿರ್ವಹಣೆ ಮಾಡಲು ರಚನೆಯಾಗಿರುವ ಸಮನ್ವಯ ಸಮಿತಿಯ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿದ್ದೇವೆ ಎಂದರು.

ರಾಜ್ಯದಲ್ಲಿ ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಗಾದಿ ಹಿಡಿದ ಯಡಿಯೂರಪ್ಪರವರು ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಿದ್ದಾರಾ ಎಂದು ಕೃಷಿ ಸಚಿವ ಶಿವಶಂಕರ್‍ರೆಡ್ಡಿ ಪ್ರಶ್ನೆ ಮಾಡಿದರು.

 ಸಮಿಶ್ರ ಸರ್ಕಾರದಲ್ಲಿ ಸಹಕಾರ ಬ್ಯಾಂಕ್‍ಗಳ ಸಾಲವನ್ನು ಮನ್ನಾ ಮಾಡಿದೆ ಮುಂದಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವ ಆದೇಶ ಹೊರ ಬರಲಿದೆ ಎಂದರು.

ಸಚಿವರೊಂದಿಗೆ ಸಂಸದ ಆರ್. ದೃವನಾರಾಯಣ್, ಮಾಜಿ ಶಾಸಕ ಎ.ಆರ್ ಕೃಷ್ಣಮೂರ್ತಿ, ರೈತ ನಾಯಕ ಪ್ರೋ. ಎಂ.ಡಿ.ನಂಜುಂಡಸ್ವಾಮಿ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ಸಾಥ್ ನೀಡಿದರು.//// ವರದಿ : ರವಿ ಶ್ರೀ , ಚಾಮರಾಜನಗರ


WebTitle : ಒಡೆದು ಆಳುವುದೇ ಬಿಜೆಪಿಯವರ ಕಾಯಕ-ಕೃಷಿ ಸಚಿವ ಶಿವಶಂಕರ್ ರೆಡ್ಡಿ – BJP is Day-Dreaming Says Agriculture Minister Shivashankar Reddy

ಈ ವಿಭಾಗದ ಇನ್ನಷ್ಟು ಕನ್ನಡ ನ್ಯೂಸ್ ಗಾಗಿ ಕ್ಲಿಕ್ಕಿಸಿ – ರಾಜಕೀಯ

Karnataka Politics News | Kannada Politics News

Kannada Politics News

The post ಒಡೆದು ಆಳುವುದೇ ಬಿಜೆಪಿಯವರ ಕಾಯಕ-ಕೃಷಿ ಸಚಿವ ಶಿವಶಂಕರ್ ರೆಡ್ಡಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.