ಉತ್ತಮ ಸಮಾಜಕ್ಕಾಗಿ

ಕನ್ನಡ ಬೆಳವಣಿಗೆಗಾಗಿ ಸರಕಾರದ ಇಚ್ಛಾಶಕ್ತಿ ತೋರಬೇಕಿದೆ

0


ಬೆಳಗಾವಿ:ಕರ್ನಾಟಕ ಏಕೀಕರಣದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರ ಗಣನೀಯವಾಗಿದೆ. ಕನ್ನಡ ಉಳಿವಿಗಾಗಿ ಬೆಳಗಾವಿ ಹೋರಾಟಗಾರರ ಪಾತ್ರವೂ ಅದ್ವಿತೀಯವಾಗಿದೆ. ಸರಕಾರ ಅದನ್ನು ಅರಿತು ಗಡಿ ಭಾಗದಲ್ಲಿ ಹೆಚ್ಚಚ್ಚು ಕನ್ನಡ ಜಾಗೃತಿಗೊಳಿಸುವ ಇಚ್ಛಾಶಕ್ತಿಯನ್ನು ತೋರಬೇಕಾಗಿದೆ ಎಂದು ಬುಡಾ ಮಾಜಿ ಅಧ್ಯಕ್ಷ ಶಂಕರ ಬುಚಡಿ ಹೇಳಿದರು.
ಅವರು ಇಂದು ನಗರದ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ್ಲ ಕರ್ನಾಟಕ ಏಕೀಕರಣದ 60 ನೆಯ ವಾರ್ಷಿಕೋತ್ಸವ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಬೆಳಗಾವಿಯಲ್ಲಿ ಕನ್ನಡ ಉಳಿಯಲು ಜನಪ್ರತಿನಿಧಿಗಳು ಮನಸಾರೆ ಹೋರಾಡಬೇಕಿದೆ ಎಂದರು.
ಕೆ.ಎಲ್.ಇ ಯ ವೈದ್ಯಾಧಿಕಾರಿ ಡಾ. ಎಚ್.ಬಿ.ರಾಜಶೇಖರ ಸಸಿಗೆ ನೀರು ಹಣಿಸುವ ಮೂಲಕ ಉದ್ಘಾಟಿಸಿದರು. ಎಲ್.ವಿ.ಪಾಟೀಲ ಹಾಗೂ ರವೀಂದ್ರ ತೋಟಿಗೇರ ಉಪನ್ಯಾಸ ನೀಡಿದರು. ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ ಶ್ರಮಿಸಿದ ಕನ್ನಡ ಹೋರಾಟಗಾರರನ್ನು, ಪತ್ರಿಕೆಗಾರರನ್ನು, ಸಾಹಿತಿಗಳು ಸೇರಿದಂತೆ ಹಿರಿಯ-ಕಿರಿಯರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಿದ್ಧನಗೌಡ ಪಾಟೀಲ ಮಾತನಾಡಿ, ಇತರ ಜಿಲ್ಲೆಗಳಿಗೆ ಬೆಳಗಾವಿ ಹೋರಾಟಗಾರರ ಪ್ರೇರಣೆ ಹೇಗಿತ್ತು ಎಂಬುದನ್ನು ವಿವರಿಸಿದರು. ವೇದಿಕೆ ಮೇಲೆ ಕಸಾಪ ಮಾಜಿ ಅಧ್ಯಕ್ಷ ಯ.ರು.ಪಾಟೀಲ, ಎಂ.ಎಸ್.ಇಂಚಲ ಉಪಸ್ಥಿತರಿದ್ದರು. ಮಹಾಂತೇಶ ಮೆಣಸಿನಕಾಯಿ ನಿರೂಪಿಸಿದರು. ಜ್ಯೋತಿ ಬಾದಾಮಿ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.