ಉತ್ತಮ ಸಮಾಜಕ್ಕಾಗಿ

ಕರ್ತವ್ಯ ಬಿಟ್ಟು ತಿರುಗಾಡುವ PDOಗಳು: ಲಕ್ಷ್ಮೀ ಹೆಬ್ಬಾಳಕರ

0

ಕರ್ತವ್ಯ ಬಿಟ್ಟು ತಿರುಗಾಡುವ PDOಗಳು: ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ: ಪಿಡಿಓ, ತಲಾಠಿ, ಸೆಕ್ರೆಟರಿ, ಸರ್ಕಲ್ ಗಳು ಏನು ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಕೆಡಿಪಿ ಸಭೆಯಲ್ಲಿ ಪ್ರಶ್ನಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಅಧಿಕಾರಿಗಳು ಕರ್ತವ್ಯದ ಮೇಲೆ ಇರುವುದೇ ಇಲ್ಲ. ತಮ್ಮ ಕೆಲಸದ ಬಗ್ಗೆ ಗಮನ ಇರದೇ ಎಲ್ಲೊ ತಿರುಗಾಡಿಕೊಂಡು ಇದ್ದಾರೆ ಎಂದು ಸಭೆಯ ಗಮನ ಸೆಳೆದರು. ಜನತೆ ಇಂತಹ ಕೆಲಸಗಳ್ಳ ಅಧಿಕಾರಿಗಳಿಂದ ಹೈರಾಣಾಗಿದ್ದಾರೆ. ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದರು. ಜನರಿಂದ ₹10 ಸಾವಿರದಷ್ಟು ಹಣ ಪಿಡಿಓಗಳು ಅವರ ಸೇವೆಗೆ ಪ್ರತಿಯಾಗಿ ಪೀಕಿಸುತ್ತಿರುವ ದೂರು ಬಂದಿವೆ ಎಂದರು. ತಮ್ಮ ನಿಗದಿತ ಗ್ರಾಮದಲ್ಲೇ ಪಿಡಿಓಗಳು ಮತ್ತು ಇತರ ಸ್ಥಳೀಯ ಅಧಿಕಾರಿಗಳು ವಾಸ್ತವ್ಯ ಹೂಡಬೇಕು ಎಂದರು.
ABVP ಕಾರ್ಯಕರ್ತ ಹೊರಕ್ಕೆ:ಕೆಡಿಪಿ ಸಭೆಯಲ್ಲಿ ಸರಕಾರಿ ಬಸ್ ಅವ್ಯವಸ್ಥೆ ಬಗ್ಗೆ ಚರ್ಚೆ ನಡೆದಿದ್ದಾಗ, ಸಭೆಯಲ್ಲಿ ಅಕ್ರಮವಾಗಿ ಪ್ರವೇಶಿಸಿ ಕುಳಿತಿದ್ದ ಯುವಕ ಪ್ರಶ್ನೆ ಕೇಳಲು ಯತ್ನಿಸುತ್ತಿದ್ದ ವೇಳೆ ಎಬಿವಿಪಿ ಸಂಘಟನೆಯವನು ಎಂದು ಹೇಳಿಕೊಳ್ಳುತ್ತಿದ್ದ ಯುವಕನನ್ನು ಪೊಲೀಸರು ಮೆತ್ತಗೆ ಹೊರಹಾಕಿದರು.

The post ಕರ್ತವ್ಯ ಬಿಟ್ಟು ತಿರುಗಾಡುವ PDOಗಳು: ಲಕ್ಷ್ಮೀ ಹೆಬ್ಬಾಳಕರ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.