ಉತ್ತಮ ಸಮಾಜಕ್ಕಾಗಿ

ಕರ್ನಾಟಕ ಏಕೀಕರಣ 60ನೇ ವಾರ್ಷಿಕೋತ್ಸವದ ಅಂಗವಾಗಿ ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ

0

ಬೆಳಗಾವಿ, ಜನವರಿ 19 ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ “ಕರ್ನಾಟಕ ಏಕೀಕರಣ 60ನೇ ವಾರ್ಷಿಕೋತ್ಸವದ” ಅಂಗವಾಗಿ ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಇದೇ ಜನವರಿ 21 ರಂದು ಬೆಳಿಗ್ಗೆ 10-30 ಗಂಟೆಗೆ ನಗರದ ಕನ್ನಡ ಸಾಹಿತ್ಯ ಭವನ (ಚನ್ನಮ್ಮ ವೃತ್ತ) ದಲ್ಲಿ ಆಯೋಜಿಸಲಾಗಿದೆ.
ಸಂಸದರಾದ ಶ್ರೀ ಸುರೇಶ ಅಂಗಡಿ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸುವರು. ಬೆಳಗಾವಿ ಪ್ರಥಮ ಕನ್ನಡ ಮಹಾಪೌರರಾದ ಡಾ. ಸಿದ್ಧನಗೌಡ ಪಾಟೀಲ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶ್ರೀ ಶಂಕರ ಎಮ್ ಬುಚಡಿ ಅವರು ಮುಖ್ಯ ಅತಿಥಿಗಳಾಗಿ ಹಾಗೂ ಬೆಳಗಾವಿ ಕ.ಸಾ.ಪ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಯ.ರು ಪಾಟೀಲ ಅವರು ಅತಿಥಿಗಳಾಗಿ ಉಪಸ್ಥಿತರಿರುವರು.
ಉಪನ್ಯಾಸಕರಾಗಿ ಹುಕ್ಕೇರಿ ನಿಕಟಪೂರ್ವ ಕ.ಸಾ.ಪ ಅಧ್ಯಕ್ಷರಾದ ಶ್ರೀ ಎಲ್.ವ್ಹಿ.ಪಾಟೀಲ, ಬೆಳಗಾವಿ ವಕೀಲರ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ರವೀಂದ್ರ ತೋಟಗೇರ ಅವರು ಪಾಲ್ಗೊಳ್ಳಲಿದ್ದು, ಇತರ ಗಣ್ಯರು ಅತಿಥಿಗಳು ಹಾಗೂ ವಿಶೇಷ ಆಮಂತ್ರಿತರಾಗಿ ಭಾಗವಹಿಸಲಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.