ಉತ್ತಮ ಸಮಾಜಕ್ಕಾಗಿ

ಕಸಮಳಗಿ ಜೈನ ಬಸದಿ ಪಂಚಕಲ್ಯಾಣ ಮಹೋತ್ಸವ ; ಜ 22 ರಂದು ಯಜಮಾನ ಸವಾಲು ಕಾರ್ಯಕ್ರಮ

0


ಬೆಳಗಾವಿ.ಜ.19: ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಭಗವಾನ.ಶ್ರೀ.1008 ಪಾಶ್ರ್ವನಾಥ ತೀರ್ಥಂಕರರ ಜಿನ ಮಂದಿರ ಮತ್ತು ನೂತನ ಮಾನಸ್ತಂಭೋಪರಿ ಜಿನಬಿಂಬಗಳ ಮತ್ತು 24 ತೀರ್ಥಂಕರರ ವಿಶ್ವ ಮಟ್ಟದ ಬೃಹತ್ ಪಂಚಕಲ್ಯಾಣ ಮಹಾಮಹೋತ್ಸವ ಏಪ್ರಿಲ 28 ರಿಂದ 2 ಮೇ ರವರೆಗೆ ನಡೆಯಲಿದ್ದು, ಈ ಮಹಾಮಹೋತ್ಸವದ ಯಜಮಾನ ಸವಾಲ ಕಾರ್ಯಕ್ರಮ ಜನೇವರಿ 22 ರಂದು ಮಧ್ಯಾಹ್ನ 12 ಗಂಟೆಗೆ ಕಸಮಳಗಿ ಗ್ರಾಮದ ನೂತನ ಜಿನಮಂದಿರದಲ್ಲಿ ನಡೆಯಲಿದೆ ಎಂದು ಜಿನಮಂದಿರ ಟ್ರಸ್ಟ ಅಧ್ಯಕ್ಷ ಜಯಪಾಲ ಸಾವಂತ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 12 ವರ್ಷಗಳ ಹಿಂದೆ ಕಸಮಳಗಿ ಗ್ರಾಮದಲ್ಲಿ ಶಾಲಾ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಭೂಗರ್ಭದಲ್ಲಿ ಅತ್ಯಂತ ಪುರಾತಣವಾದ ಕ್ರಿ.ಶ.11 ನೇ ಶತಮಾನದ ಶ್ರೀ. ಪಾಶ್ರ್ವನಾಥ ತೀಥಂಕರರ ಪ್ರತಿಮೆ ದೊರೆಯಿತು. ಅಂದಿನಿಂದ ಇಂದಿನವರೆಗೆ ಈ ಪ್ರತಿಮೆಯನ್ನು ಪೂಜೆ ಮಾಡಲಾಗುತ್ತಿದೆ. ಭೂಗರ್ಭದಲ್ಲಿ ದೊರೆತ ಈ ಪ್ರತಿಮೆ ವಿಶೇಷವಾಗಿದ್ದು, ಪ್ರತಿ ದಿನ ಮೂರು ಬಣ್ಣಗಳಲ್ಲಿ ರೂಪಾಂತರಗೊಳ್ಳುತ್ತದೆ. ಇದೊಂದು ವಿಶೇಷ ರೀತಿಯ ಕಪ್ಪು ಮಿಶ್ರಿತ ನೀಲಿ ಛಾಯೆಯ ಬಳಪದ ಶಿಲೆಯಲ್ಲಿ ಕೆತ್ತಲಾಗಿದ್ದು, ಈ ಶಿಲ್ಪವು ಇಡಿ ಭಾರತದಲ್ಲಿಯೇ ವಿಶೇಷವಾಗಿದೆ ಎಂದು ಅವರು ತಿಳಿಸಿದರು.
12 ವರ್ಷಗಳಿಂದ ನಿರಂತರ ಪ್ರಯತ್ನದಿಂದ ಇದೀಗ ಈ ತೀರ್ಥಂಕರರ ಪ್ರತಿಮೆ ಪ್ರತಿಷ್ಠಾಪಿಸುವುದಕ್ಕಾಗಿ ಕಸಮಳಗಿ ಗ್ರಾಮದಲ್ಲಿ ಜಿನಮಂದಿರ ನಿರ್ಮಿಸಲಾಗಿದೆ. ಶ್ರವಣಬೆಳಗೊಳದ ಭಟ್ಟಾರಕ ಶ್ರೀಗಳ ಪ್ರೇರಣೆ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ. ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈ ಜಿನಮಂದಿರವನ್ನು ನಿರ್ಮಿಸಲಾಗಿದೆ. ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮಕ್ಕೆ ಡಾ. ವಿರೇಂದ್ರ ಹೆಗ್ಗಡೆ ಅವರು ಸೌಧರ್ಮ ಇಂದ್ರ ಇಂದ್ರಾಯಣಿ ಯಜಮಾನ ಪದವನ್ನು ಸ್ವೀಕರಿಸಿದ್ದು,ಇನ್ನುಳಿದ ಯಜಮಾನ ಪದಗಳ ಸವಾಲು ಕಾರ್ಯಕ್ರಮ ಜ.22 ರಂದು ನಡೆಯಲಿದೆ ಎಂದು ತಿಳಿಸಿದ ಅವರು, ಈ ಕಾರ್ಯಕ್ರಮಕ್ಕೆ ಶ್ರೀ.108 ಸಿದ್ದಸೇನ ಮುನಿಗಳು ಹಾಗೂ ಜಿನವಾಣಿ ಮಾತಾಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಬೆಣವಾಡ ಗ್ರಾಮದಲ್ಲಿ ಪಂಚಕಲ್ಯಾಣ ಮಹೋತ್ಸವ: ಹುಕ್ಕೇರಿ ತಾಲೂಕಿನ ಬೆಣಿವಾಡ ಗ್ರಾಮದಲ್ಲಿನ 9 ನೇ ಶತಮಾನದ ಐತಿಹಾಸಿಕ ಹಾಗೂ ಇತಿಹಾಸ ಪ್ರಸಿದ್ದ ಪಾಶ್ರ್ವನಾಥ ಜೈನ ಮಂದಿರದ ಪಂಚಕಲ್ಯಾಣ ಮಹೋತ್ಸವ ಫೆ. 3 ರಿಂದ 7 ರವರೆಗೆ ನಡೆಯಲಿದೆ ಎಂದು ಮಹೋತ್ಸವ ಸಮಿತಿ ಸದಸ್ಯ ಬಿ.ಬಿ.ಕಂಠಿ ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 9 ನೇ ಶತಮಾನದ ಜಿನ ಮಂದಿರವು ಅತ್ಯಂತ ಶೀಥಿಲಾವಸ್ಥೆಯಲ್ಲಿತ್ತು. ಈ ಕುರಿತು ಸಮಾಜ ಬಾಂಧವರ ಗಮನ ಸೆಳೆದ ಸಂದರ್ಭದಲ್ಲಿ ಜೈನ ಸಮಾಜದ ಸಹಕಾರ ಮತ್ತು ಶ್ರೀ. ಧರ್ಮಸ್ಥಳ ಧರ್ಮೋತ್ತಾನ ಟ್ರಸ್ಟ ಸಹಯೋಗ ಮತ್ತು ಕರ್ನಾಟಕ ಸರಕಾರದ ಸಹಕಾರದಿಂದ ಈ ಬಸದಿಯನ್ನು ಜಿರ್ಣೋದ್ದಾರ ಮಾಡಲಾಗಿದ್ದು, ಶ್ರೀ.108 ಕುಲರತ್ನಭೂಷಣ ಮುನಿಗಳ ಸಾನಿಧ್ಯದಲ್ಲಿ ಫೆ.3 ರಿಂದ 7 ರವರೆಗೆ ಪಂಚಕಲ್ಯಾಣ ಮಹಾಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು.
ಜ.23 ರಂದು ಸಾಧಕರಿಗೆ ಸನ್ಮಾನ ಕಾರ್ಯಕ್ರಮ : ಕರ್ನಾಟಕ ಸರಕಾರದ ವತಿಯಿಂದ ನೀಡಲಾಗುತ್ತಿರುವ ಪಂಪ ಪ್ರಶಸ್ತಿ ಪುರಸ್ಕøತ ನಾಡೋಜ ಡಾ. ಹಂಪ ನಾಗರಾಜಯ್ಯ, ಬಿ.,ಎಂ.ಶ್ರೀ., ಪ್ರಶಸ್ತಿ ಪುರಸ್ಕøತ ನಾಡೋಜ ಡಾ. ಕಮಲಾ ಹಂಪನಾ, ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪುರಸ್ಕøತ ಡಾ. ಬಾಳಾಸಾಹೇಬ ಲೋಕಾಪುರ, ಹಾಗೂ ಚಾವುಂಡರಾಯ ಪ್ರಶಸ್ತಿ ಪುರಸ್ಕøತ ಡಾ>ಧರಣೇಂದ್ರ ಕುರಕುರಿ ಇವರನ್ನು ಭರತೇಶ ಶಿಕ್ಷಣ ಸಂಸ್ಥೆ ಕನ್ನಡ ವಿದ್ಯಾಲಯ ಹಂಪಿ ಇವರ ಡಾ. ಆ.ನೆ.ಉಪಾಧ್ಯೆ ಕನ್ನಡ ಅಧ್ಯಯನ ಕೇಂದ್ರದ ಪರವಾಗಿ ಜ.23 ರಂದು ಬೆಳಿಗ್ಗೆ 11 ಗಂಟೆಗೆ ಭರತೇಶ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸನ್ಮಾನಿಸಲಾಗುವುದು ಎಂದು ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಈ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಶಾಸಕ ಸಂಜಯ ಪಾಟೀಲ, ದೇವೆಂದ್ರ ಗೌಡ, ಪ್ರಮೋದ ಕೋಚೆರಿ, ಮಹಾವೀರ ನಿಲಜಗಿ, ಅಶೋಕ ರಂಗೊಳ್ಳಿ, ಬಾಹುಬಲಿ ನಾಗನೂರಿ, ಜನಗೌಡ ಪಾಟೀಲ, ವಿನೋದ ದೊಡ್ಡಣ್ಣವರ, ಅಭಯ ಅವಲಕ್ಕಿ, ಹೀರಾಚಂದ ಕಲಮನಿ, ಕುಂತಿನಾಥ ಕಲಮನಿ, ಅಭಿನಂದನ ಕೋಚೆರಿ, ರಾಜು ಜಕ್ಕನ್ನವರ, ವಿಶ್ವಜೀತ ಉಪಾಧ್ಯೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.