ಉತ್ತಮ ಸಮಾಜಕ್ಕಾಗಿ

ಕಾಗವಾಡ ಶಾಸಕ ಸೇರಿ ೬ ಜನರ ಬಂಧನ

0

ಬೆಳಗಾವಿ-ವಿವೇಕ ಶೆಟ್ಟಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಮಂಧಿಸಿದಂತೆ ಕಾಗವಾಡ ಶಾಸಕ ರಾಜು ಕಾಗೆ ಸೇರಿದಂತೆ ಆರು ಜನರನ್ನು ಪೋಲೀಸರು ಬಂಧಿಸಿದ್ದು ಅವರನ್ನು ಅಥಣಿಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುತ್ತಿದೆ ಶಾಸಕ ರಾಜು ಕಾಗೆ ಅವರನ್ನು ಬಂಧಿಸಿರುವ ಬೆಳಗಾವಿ ಜಿಲ್ಲಾ ಪೋಲೀಸರು ಕಾನೂನು ಎಲ್ಲರಿಗೂ ಒಂದೇ ಅನ್ನೋದನ್ನು ಸಾಭಿತು ಪಡಿಸಿದ್ದಾರೆ ಈ ವಿಷಯದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಅವರು ಇಲಾಖೆಯ ವಿಶ್ವಾಸವನ್ನು ಹೆಚ್ಚಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಕಾಗವಾಡ ಶಾಸಕ ಸೇರಿ ೬ ಜನರ ಬಂಧನ ಹಿನ್ನಲೆ, ಅಥಣಿ ಪಟ್ಟಣದ ನ್ಯಾಯಾಲಯದ ಬಳಿ ಭಾರೀ ಜನಜಂಗುಳಿ, ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ನ್ಯಾಯಾಲಯ ಸಂಕೀರ್ಣ ಭಾರೀ ಜನಸಂದಣಿ, ಸೇರಿದೆ ಮುಂಜಾಕ್ರತ ಕ್ರಮವಾಗಿ ಬಿಗಿ ಪೋಲೀಸ್ ಬಂದೋಬಸ್ತಿಯನ್ನು ನಿಯೋಜನೆ ಮಾಡಲಾಗಿದೆ

ಶಾಸಕ ಕಾಗೆ ಸೇರಿದಂತೆ ೬ ಆರೋಪಿಗಳ ಕೋರ್ಟ್ ಗೆ ಹಾಜರು ಪಡಿಸುವ ಹಿನ್ನೆಲೆ ಯಲ್ಲಿ, ೨ ಡಿವೈಎಸ್ಪಿ, ಓರ್ವ ಎಎಸ್ಪಿ, ೪ ಪಿಎಸ್ಐ ಸೇರಿದಂತೆ ಪೊಲೀಸ್ ಸಿಬ್ಬಂದಿ ನಿಯೋಜನೆ, ಮಾಡಲಾಗಿದೆ

ಮಧ್ಯಾಹ್ನ ೩ ಗಂಟೆ ನಂತರ ಆರೋಪಿಗಳನ್ನು ಹಾಜರು ಪಡಿಸುವ ಸಾಧ್ಯತೆ, ಇದೆ  ವಿವೇಕಶೆಟ್ಟಿ ತಂದೆ ಜಯೇಂದ್ರ ಶೆಟ್ಟಿ ಬೆಳಗಾವಿ ಸುದ್ಧಿಗೆ ಪ್ರತಿಕ್ರಿಯೆ, ನೀಡಿದ್ದು ಜನ ಸಾಮಾನ್ಯರಿಗೂ, ಜನ ಪ್ರತಿ ನಿಧಿಗೂ ಒಂದೇ ಕಾನೂನು ಎಂದು ತೋರಿಸಿಕೊಟ್ಟ ಪೊಲೀಸರು, ತನ್ನ ಮಗನ ಮೇಲೆ ಹಲ್ಲೆ ಮಾಡಿದ ಶಾಸಕ ಕಾಗೆ ಸೇರಿ ೬ ಜನರ ಬಂಧನ,  ಮಾಡಿದ್ದು  ಜಯೇಂದ್ರ ಶೆಟ್ಟಿ  ಬೆಳಗಾವಿ ಜಿಲ್ಲೆಯ ಪೋಲೀಸರಿಗೆ ಮತ್ತ4 ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಕೃತದ್ಙತೆ ಸಲ್ಲಿಸಿದ್ದಾರೆ

 

Leave A Reply

 Click this button or press Ctrl+G to toggle between Kannada and English

Your email address will not be published.