ಉತ್ತಮ ಸಮಾಜಕ್ಕಾಗಿ

`ಕಾಗೆ ಹಿಂಡಿಗೆ’ ಪೊಲೀಸ್ ಡ್ರಿಲ್ ಆರೋಪಿಗಳ ಕರೆತಂದು ಪರಿಶೀಲನೆ, ಮಾರಕಾಸ್ತ್ರ ವಶ

0

ಉಗಾರ ಖುರ್ದ: ವಿವೇಕ ಶೆಟ್ಟಿ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಾಸಕ ರಾಜು ಕಾಗೆ ಬೆಂಬಲಿಗರಿಗೆ ಪೊಲೀಸರು ಡ್ರಿಲ್ ನಡೆಸ್ತಿದ್ದಾರೆ. ಗೂಂಡಾಗಿರಿ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳನ್ನು ಪೊಲೀಸರು ಶನಿವಾರ ಘಟನಾ ಸ್ಥಳಕ್ಕೆ ಕರೆತಂದು ಸ್ಥಳ ಮೊಹಜರು ನಡೆಸಿದರು.
ಮೂವರು ಆರೋಪಿಗಳಾದ ಸಿದ್ದಗೌಡ ಕಾಗೆ, ಪ್ರಸಾದ ಕಾಗೆ, ಚಾಲಕ ಬಾಹುಬಲಿ ಎಂಬುವರನ್ನು ಡಿಎಸ್‍ಪಿ ವೀರಭದ್ರಯ್ಯ ಅವರು ಶಾಸಕ ರಾಜು ಕಾಗೆ ನಿವಾಸದ ಬಳಿ ಇರುವ ಗೋದಾಮು ಹಾಗೂ ಸಿದ್ದಗೌಡ ಕಾಗೆ ಅವರ ನಿವಾಸಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದರು.
ಈ ವೇಳೆ ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನುಳಿದ 7 ಜನ ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು ಎಂದು ತನಿಖಾಧಿಕಾರಿ ವೀರಭದ್ರಯ್ಯ ಮಾಹಿತಿ ನೀಡಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.