ಉತ್ತಮ ಸಮಾಜಕ್ಕಾಗಿ

ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ಇಲಾಖೆ ನಿಷ್ಜ್ರೀಯವಾಗಿದೆ:ದಕ್ಷಿಣ ಶಾಸಕ ಅಭಯ ಪಾಟೀಲ

0

ದಕ್ಷಿಣ ಶಾಸಕ ಅಭಯ ಪಾಟೀಲ

ಬೆಳಗಾವಿ: ನಗರದಲ್ಲಿ ಎಗ್ಗಿಲ್ಲದೇ ನಡೆದಿರುವ ಡ್ರಗ್ಸ್, ಮಟಕಾ, ಓಸಿ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಡಿಜಿಪಿ ನೀಲಮನಿ ರಾಜು ಅವರಿಗೆ ಮಾಹಿತಿ ನೀಡಲಾಗಿದೆ ಎಂದು ದಕ್ಷಿಣ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ. ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಬೆಳಗಾವಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ಇಲಾಖೆ ನಿಷ್ಜ್ರೀಯವಾಗಿದೆ. ಪೊಲೀಸ್ ಇಲಾಖೆಯ ಕರಿ ನೆರಳಿನಲ್ಲೇ ಎಲ್ಲ ಅಕ್ರಮಗಳು ಎಗ್ಗಿಲ್ಲದೇ ನಡೆಯುತ್ತಿವೆ ಎಂದು ಆರೋಪಿಸಿದರು.

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂಧಿ ನೇರ ಭಾಗಿಯಾಗಿ ಅಂಗಡಿ ಮುಂಗಟ್ಟುಗಳಲ್ಲಿ ಮಾರಾಟ ನಡೆದಿದೆ. ಮಾರಾಟಗಾರರರು ಮತ್ತು ಅವರ ಹಿಂದೆ ಇರುವವರ ಪತ್ತೆ ಹಚ್ಚುವ ಕೆಲಸ ಪೊಲೀಸರು ಮಾಡುತ್ತಿಲ್ಲ. ಪೊಲೀಸ್ ಅಧಿಕಾರಿಗಳ ಮೇಲೆ ಸರಕಾರ ಕ್ರಮ ಆಗಬೇಕು. ರಾಜಕಾರಣಿಗಳು ಇದ್ದರೂ ಪತ್ತೆ ಹಚ್ಚಿ. ರಾಜಾರೋಷವಾಗಿ ಅಕ್ರಮ ನಡೆಸಿರುವ ಬೆಳಗಾವಿ ಪೊಲೀಸರು ಹೋಮ ಮಿನಿಸ್ಟರಗಿಂತ ಫವರಪುಲ್! ಎಂದರು. ಇಂತಹ ಅಕ್ರಮಗಳನ್ನು ತಡೆಗಟ್ಟಲು ಗೃಹಸಚಿವರು SIT ರಚಿಸುವ ಭರವಸೆ ಸದನದಲ್ಲಿ ನೀಡಿದ್ದರು. ಇನ್ನೂ ಏನು ಆಗಿಲ್ಲ. ಸರಕಾರ ಬೆಳಗಾವಿ ಪೊಲೀಸರನ್ನು ಬೇಕಾಬಿಟ್ಟಿ ವರ್ತನೆಗೆ ಫ್ರೀಯಾಗಿ ಬಿಟ್ಟಿದೆ. ಬೆಳಗಾವಿಯಲ್ಲಿ ಆಡಳಿತ ಸಂಪೂರ್ಣ ಬಿದ್ದುಹೋಗಿದೆ. ಇಲಾಖೆಯನ್ನು ಸರಿ ದಾರಿಗೆ ತರದಿದ್ದರೆ ಹೋಂ ಮಿನಿಸ್ಟರ್ ರಾಜೀನಾಮೆಗೆ ಶೀಘ್ರದಲ್ಲೇ ಡಿಮ್ಯಾಂಡ್ ಮಾಡಲಾಗುತ್ತದೆ ಎಂದರು.

The post ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ಇಲಾಖೆ ನಿಷ್ಜ್ರೀಯವಾಗಿದೆ:ದಕ್ಷಿಣ ಶಾಸಕ ಅಭಯ ಪಾಟೀಲ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.