ಉತ್ತಮ ಸಮಾಜಕ್ಕಾಗಿ

ಕಾಮಗರಿ ಸ್ಥಗಿತ : ಆಕ್ರೋಶ

0

ಒಳಚರಂಡಿ ಕಾಮಗಾರಿ ಸ್ಥಗಿತ: ಆಕ್ರೋಶ

ಶ್ರವಣಬೆಳಗೊಳ: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಆರಂಭವಾಗಿದ್ದ ಒಳಚರಂಡಿ ಮತ್ತು ನೀರು ಸರಬರಾಜು ಕಾಮಗಾರಿ ಪೂರ್ಣಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.

ಈ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೇಲ್ವಿಚಾರಣೆಯಲ್ಲಿ ಕೈಗೊಳ್ಳಲಾಗಿತ್ತು. ಉದ್ದೇಶಿತ ಯೋಜನೆಯ ಒಟ್ಟು ಅಂದಾಜು ವೆಚ್ಚ ₹ 15 ಕೋಟಿಯಾಗಿದ್ದು, ಅದರಲ್ಲಿ ಈಗಾಗಲೇ 2.5 ಲಕ್ಷ ಲೀಟರ್‌ ಸಾಮರ್ಥ್ಯದ ಶುದ್ಧ ನೀರು ಜಲ ಸಂಗ್ರಹಾಗಾರ, ನವೀನ ರೀತಿಯ ಪಂಪ್‌ಹೌಸ್‌ ಮತ್ತು ವಿಂಧ್ಯಗಿರಿಯ ಬಾಹುಬಲಿ ಬೆಟ್ಟದ ದಕ್ಷಿಣ ಭಾಗದ 5 ಲಕ್ಷ ಲೀಟರ್‌ ಸಾಮರ್ಥ್ಯದ ನೆಲಮಟ್ಟದ ಜಲ ಸಂಗ್ರಹಾಗಾರ ಕಾಮಗಾರಿ ಪೂರ್ಣಗೊಂಡಿದೆ.

ಆದರೆ ಮಸ್ತಕಾಭಿಷೇಕ ನಡೆದು 9 ತಿಂಗಳು ಕಳೆದಿದ್ದರೂ ಒಳ ಚರಂಡಿ ಕಾಮಗಾರಿಯನ್ನು ಮಾತ್ರ ಪೂರ್ಣಗೊಳಿಸಿಲ್ಲ. ಇದರಿಂದ ಕಲುಷಿತ ನೀರು ನಿತ್ಯವೂ ರಸ್ತೆಗೆ ಹರಿಯುತ್ತಿದೆ. ಇದರಿಂದ ಇಲ್ಲಿಯ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದರಿಂದ ಸಾರ್ವಜನಿಕರು, ನಿತ್ಯ ಶಾಲೆ– ಕಾಲೇಜುಗಳಿಗೆ ಓಡಾಡುತ್ತಿರುವ ವಿದ್ಯಾರ್ಥಿಗಳು, ವಾಹನ ಸವಾರರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು 7ನೇ ವಾರ್ಡಿನ ಸದಸ್ಯರಾದ ಎನ್‌.ಆರ್‌.ವಾಸು, ಪುಷ್ಪಾ ಪ್ರಕಾಶ್‌, ಮಣಿ ಮಲ್ಲೇಶ್‌ ಆರೋಪಿಸಿದರು.

ಶ್ರೀಕಂಠನಗರ ಬಡಾವಣೆ ಮಾರ್ಗದ ರಸ್ತೆಯ ಒಳಚರಂಡಿ ಕಾಮಗಾರಿಯೂ ಅಪೂರ್ಣಗೊಂಡಿದೆ. ರಸ್ತೆಯ ಮಧ್ಯದಲ್ಲಿಯೇ ಮ್ಯಾನ್‌ಹೋಲ್‌ಗೆ ಕಲ್ಲುಗಳನ್ನು ಇಡಲಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ತೊಂದರೆಯುಂಟಾಗಿದೆ ಎಂದು ಸದಸ್ಯೆ ಲತಾ ರಮೇಶ್‌ ದೂರಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಅಪೂರ್ಣ ಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸ್ಥಳೀಯರಾದ ವೆಂಕಟೇಶ್‌, ಕುಮಾರ್‌, ರವಿ, ಒತ್ತಾಯಿಸಿದ್ದಾರೆ.[ category  hassan news ]

The post ಕಾಮಗರಿ ಸ್ಥಗಿತ : ಆಕ್ರೋಶ appeared first on Prajaa News.

Source link

ಕಾಮಗರಿ ಸ್ಥಗಿತ : ಆಕ್ರೋಶ

Leave A Reply

 Click this button or press Ctrl+G to toggle between Kannada and English

Your email address will not be published.