ಉತ್ತಮ ಸಮಾಜಕ್ಕಾಗಿ

ಕಾರ್ಯಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ಪರಿಸರದ ವಚನಬದ್ಧತೆ

0
 • ಬೆಳಗಾವಿ: ಕಾರ್ಯಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ಪರಿಸರ ಖಚಿತಪಡಿಸುವುದರಿಂದ ಮಹಿಳೆಯರ ಪಾಲುದಾರಿಕೆ ಸುಧಾರಿಸುತ್ತದೆ. ಇದರ ಪರಿಣಾಮವಾಗಿ ಅವರ ಆರ್ಥಿಕ ಸಬಲೀಕರಣ ಮತ್ತು ಒಳಗೊಳ್ಳುವಿಕೆಯಲ್ಲಿ ಹೆಚ್ಚಳ ಕಂಡು ಬರುತ್ತದೆ.
  ಕಾರ್ಯಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಸುಧಾರಣೆ) ಅಧಿನಿಯಮ 2013 ರ ಅಡಿ ಕಾರ್ಯಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ದೂರುಗಳನ್ನು ನಿಗದಿತ ಸಮಯಮಿತಿಯಲ್ಲಿ ವಿಚಾರಣೆಗಾಗಿ ಉದ್ಯೋಗದಾತರು ‘ಆಂತರಿಕ ದೂರು ಸಮೀತಿ’ ರಚಿಸಬೇಕು. ಮತ್ತು ಸರಕಾರದಿಂದ ಜಿಲ್ಲಾ ಮಟ್ಟದಲ್ಲಿ “ ಸ್ಥಳೀಯ ದೂರು ಸಮೀತಿ ರಚಿಸುವದು ಕಡ್ಡಾಯವಾಗಿದೆ.
 • ಲೈಂಗಿಕ ಕಿರುಕುಳ ಎಂದರೇನು?
  * ಮಹಿಳೆಯರಿಗೆ ಕಿರಿಕಿರಿಯಾಗುವಂತಹ ಲೈಂಗಿಕ ವ್ಯವಹಾರ (ಪ್ರತ್ಯಕ್ಷ, ಪರೋಕ್ಷ ಅಥವಾ ನೇರವಾಗಿ) ಶಾರೀರಿಕ ಸಂಪರ್ಕ ಅಥವಾ ಆ ತರಹದ ಆಶಯ, ಅದಕ್ಕಾಗಿ ಬೇಡುವದು ಅಥವಾ ವಿನಂತಿಸುವದು. ಲೈಂಗಿಕ ಭಾವನೆ ಉತ್ತೇಜಿಸುವಂತಹ ಟಿಪ್ಪಣಿ ಮಾಡುವದು. ಅಶ್ಲೀಲ ಚಿತ್ರ ತೋರಿಸುವದು. ಅಥವಾ ಇತರೆ ಯಾವುದೇ ತೊಂದರೆದಾಯಕ ಶಾರೀರಿಕ, ಮೌಖಿಕ, ನಿಶ್ಯಬ್ದ ಕೃತ್ಯ.
  * ಉದ್ಯೋಗದಲ್ಲಿ ಹಿತಕರ ವ್ಯವಹಾರದಲ್ಲಿ ಅಂತಹ ಪರಿಸ್ಥಿತಿ ಹುಟ್ಟಿಸುವದು ಅಥವಾ ಇರುವದು. ಉದ್ಯೋಗದಲ್ಲಿ ಅಹಿತಕರ ತೊಂದರೆ ಇರುವದು ಅಥವಾ ಭಾವಿ ಉದ್ಯೋಗದಲ್ಲಿ ತೊಂದರೆ ಇರುವದು ಕೆಲಸದಲ್ಲಿ ಹಸ್ತಕ್ಷೇಪವಿರುವದು. ಕಾರ್ಯದಲ್ಲಿ ಭಯಪಡಿಸುವ ಅಥವಾ ಅವಮಾನಕರ ಅಥವಾ ಹಿಂಸಾ ವಾತಾವರಣ ನಿರ್ಮಿಸುವದು. ಮಹಿಳೆಯರ ಆರೋಗ್ಯದ ಮೇಲೆ ಅಥವಾ ಸುರಕ್ಷತೆಯ ಮೇಲೆ ಒತ್ತಡ ಬೀರುವ ಸಾಧ್ಯತೆ ಇರುವಂತಹ ಅಪಮಾನಕರ ವ್ಯವಹಾರ.
  ಕಾರ್ಯಸ್ಥಳ ಎಂದರೇನು
  ಸರಕಾರಿ ನಿಗಮಗಳು, ಖಾಸಗಿ ಹಾಗೂ ಸಾರ್ವಜನಿಕ ಕ್ಷೇತ್ರದ ಸಂಘಟನೆ, ಸರಕಾರೇತರ ಸಂಘಟನೆ, ವ್ಯಾಪಾರ ವ್ಯವಸಾಯಿಕ, ಶಿಕ್ಷಣ, ಮನೋರಂಜನಾತ್ಮಕ, ಔದ್ಯೋಗಿಕ, ಆರ್ಥಿಕ ಚಟುವಟಿಕೆಯ ಸಂಘಟನೆ,ಆಸ್ಪತ್ರೆ, ನರ್ಸಿಂಗ್ ಹೋಮ್, ಶಿಕ್ಷಣ ಸಂಸ್ಥೆ, ಕ್ರೀಡಾ ಸಂಸ್ಥೆ ಮತ್ತು ವೈಯಕ್ತಿಕ ತರಬೇತಿಗಾಗಿ ಉಪಯೋಗಿಸಲಾಗುವ ಸ್ಟೇಡಿಯಂ
  * ಉದ್ಯೋಗದ ಸ್ಥಳಕ್ಕೆ ಹೋಗಿಬರಲು ಉದ್ಯೋಗದಾತರಿಂದ ಕೊಡಲಾದ ವಾಹನವೂ ಸೇರಿದಂತೆ ಉದ್ಯೋಗ ಸ್ಥಳ ಮತ್ತು ಉದ್ಯೋಗಕ್ಕಾಗಿ ಓಡಾಡುವ ಸ್ಥಳದಲ್ಲಿ
  * ವಸತಿ ಸ್ಥಳ ಅಥವಾ ಮನೆ.
  ಯಾವುದೇ ಉದ್ಯಮ( ಯಾವುದೇ ವ್ಯಕ್ತಿಯ ವೈಯಕ್ತಿಕ ಅಧೀನದಲ್ಲಿರುವ ಅಥವಾ ಕನಿಷ್ಠ 10 ಕ್ಕಿಂತ ಹೆಚ್ಚು ಜನ ಕೆಲಸಕ್ಕಿರುವ ಸ್ವುದ್ಯೋಗ ಮಾಡುತ್ತಿರುವವರು)
  ಉದ್ಯೋಗದಾತರು ಮಾಡಬೇಕಾದ ಉಪಾಯಗಳು
  * ಕೆಲಸದ ಸುರಕ್ಷಿತ ಪರಿಸರ ಒದಗಿಸುವದು.
  * ಲೈಂಗಿಕ ದೌರ್ಜನ್ಯ ಎಂದರೇನು ಎಂಬುದನ್ನು ಕಾರ್ಯಸ್ಥಳದಲ್ಲಿ ಸ್ಪಷ್ಟರೂಪದಲ್ಲಿ ಪ್ರದರ್ಶಿಸುವುದು. ಕಾರ್ಯಸ್ಥಳದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟ ಕೃತ್ಯದಲ್ಲಿ ತೊಡಗಿದರೆ ಶಿಕ್ಷೆಯ ಪ್ರಾವಧಾನಗಳೇನು ಎಂಬುದನ್ನೂ ಪ್ರದರ್ಶಿಸಬೇಕು. ಮತ್ತು ಆಂತರಿಕ ದೂರು ಸಮೀತಿಯ ಸದಸ್ಯರಿಗಾಗಿ ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸುವದು.
  * ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳ ಮತ್ತು ಅವುಗಳ ಪರಿಣಾಮಗಳ ಕುರಿತು ನಿಯಮಿತ ಅಂತರದಲ್ಲಿ ಕಾರ್ಯಾಗಾರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವುದುಮತ್ತು ಆಂತರಿಕ ದೂರು ಸಮೀತಿಯ ಸದಸ್ಯರಿಗಾಗಿ ಓರಿಯಂಟೇಶನ್ ಕಾರ್ಯಕ್ರಮ ಆಯೋಜಿಸುವದು.
  * ಲೈಂಗಿಕ ದೌರ್ಜನ್ಯವನ್ನು ಸೇವಾ ನಿಯಮಗಳನ್ವಯ ದುವ್ರ್ಯವಹಾರವೆಂದು ಪರಿಗಣಿಸುವದು ಮತ್ತು ಅದರನ್ವಯ ಕ್ರಮ ಕೈಗೊಳ್ಳುವದು.
  ಸಮಯ ಸಾರಣಿ
  * ಘಟನೆಯ ದಿನಾಂಕದಿಂದ 3 ತಿಂಗಳ ಒಳಗಾಗಿ ಪೀಡಿತ ಮಹಿಳಾ ಉದ್ಯೋಗಿ ಲಿಖಿತ ದೂರು ಸಲ್ಲಿಸಬೇಕು.
  * ವಿಚಾರಣೆÉಯ ಕಾರ್ಯ 90 ದಿನಗಳ ಒಳಗಾಗಿ ಪೂರ್ಣಗೊಳಿಸಲಾಗುವದು.
  * ವಿಚಾರಣೆ ಮುಗಿದ 10 ದಿನಗಳೊಳಗಾಗಿ ವಿಚಾರಣಾ ವರದಿ ಜಾರಿಗೊಳಿಸಲಾಗುವದು.
  * ವಿಚಾರಣಾ ವರದಿ ಜಾರಿಯಾದ 60 ದಿನಗಳೊಳಗಾಗಿ ಉದ್ಯೋಗದಾತ ವಿಚಾರಣಾ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡಬೇಕು.
  * ಶಿಫಾರಸು ಜಾರಿಯಾದ 90 ದಿನಗಳ ಒಳಗೆ ಸಮೀತಿಯ ನಿರ್ಣಯದ ವಿರುದ್ಧ ಅಪೀಲ ಮಾಡಿಕೊಳ್ಳಲು ಅನುಮತಿಸಲಾಗುವದು.

Leave A Reply

 Click this button or press Ctrl+G to toggle between Kannada and English

Your email address will not be published.