ಉತ್ತಮ ಸಮಾಜಕ್ಕಾಗಿ

ಕಾಸಿಯಾ ಸಂಸ್ಥೆಯ ವತಿಯಿಂದ ಕೈಗಾರಿಕೋದ್ಯಮಿಗಳ ಕುಂದುಕೊರತೆಗಳ ಸಭೆ

0

ಕಾಸಿಯಾ ಸಂಸ್ಥೆಯ ವತಿಯಿಂದ ಕೈಗಾರಿಕೋದ್ಯಮಿಗಳ ಕುಂದುಕೊರತೆಗಳ ಸಭೆ

ಕಾಸಿಯಾ ಸಂಸ್ಥೆಯು ಸಣ್ಣ ಕೈಗಾರಿಕೆಗಳ ಏಳಿಗೆ ಮತ್ತು ಶ್ರೇಯೋಭಿವೃದ್ಧಿಗೆ ಪ್ರಾರಂಭವಾದ ರಾಜ್ಯ ವ್ಯಾಪ್ತಿ ಹೊಂದಿರುವ ಏಕೈಕ ಸಂಸ್ಥೆಯಾಗಿದ್ದು, ರಾಜ್ಯದೆಲ್ಲಡೆ ಇರುವ ಸಣ್ಣ ಕೈಗಾರಿಕೆಗಳನ್ನು ಪ್ರೊತ್ಸಾಹಿಸುವುದು ಕಾಸಿಯಾದ ಮೂಲ ಮಂತ್ರವಾಗಿದೆ.

ರಾಜ್ಯಾದ್ಯಂತ ಇರುವ ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯಗಳಿಗೆ ಪರಿಹಾರೋಪಾಯಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಾ ಬಂದಿರುತ್ತದೆ. ಸಣ್ಣ ಕೈಗಾರಿಕೆಗಳು ಹಾಗೂ ರಾಜ್ಯ ಸರ್ಕಾರದ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿರುತ್ತದೆ.

ಕಾಸಿಯಾ ಸಂಸ್ಥೆಯು ತನ್ನ ಸದಸ್ಯರ ಅಭಿವೃದ್ಧಿ ಹಿತದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

ತನ್ನಯೋಜನೆಗಳ ಅಂಗವಾಗಿ ಕಾಸಿಯಾ ಸಂಸ್ಥೆಯು ದಿನಾಂಕ ೨೪.೦೯.೨೦೧೮ ರಂದು ಬೆಳಗಾವಿಯಲ್ಲಿ ರಾಜ್ಯದ ಗ್ರಾಮಾಂತರ ಜಿಲ್ಲೆಗಳಲ್ಲಿ ಸ್ಥಾಪಿತವಾಗಿರುವ ಕೈಗಾರಿಕೋದ್ಯಮಿಗಳ ಕುಂದುಕೊರತೆಗಳನ್ನು ಬಗೆಹರಿಸುವ ರಾಜ್ಯದ ಗ್ರಾಮಾಂತರ ಜಿಲ್ಲೆಗಳಲ್ಲಿನ ಉದ್ದಿಮೆ ಸಂಘಗಳ ಸಭೆಯನ್ನು ಆಯೋಜಿಸಿಲಾಗಿದೆ.

ಸದರಿ ಸಭೆಯನ್ನು ಶ್ರೀಮತಿ ಗುಂಜನ್ ಕೃಷ್ಣ, ಆಯುಕ್ತರು, ಸೂಕ್ಷ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಿರ್ದೇಶನಾಲಯ, ಬೆಂಗಳೂರು ರವರು ಉದ್ಘಾಟಿಸಲಿದ್ದು ಕಾಸಿಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸವರಾಜ ಎಸ್ ಜವಳಿ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ////

ಸಭೆ ನಡೆಯಲಿರುವ ಸ್ಥಳ : ಯುಕೆ-೨೭, ಫೆರ್ನ್, ಬೆಳಗಾವಿ

The post ಕಾಸಿಯಾ ಸಂಸ್ಥೆಯ ವತಿಯಿಂದ ಕೈಗಾರಿಕೋದ್ಯಮಿಗಳ ಕುಂದುಕೊರತೆಗಳ ಸಭೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.