ಉತ್ತಮ ಸಮಾಜಕ್ಕಾಗಿ

ಕಿತ್ತೂರು ಉತ್ಸವಕ್ಕೆ 2 ಕೋಟಿ ಅನುದಾನ ಬೇಡಿಕೆ ಶೀಘ್ರ ಮುಖ್ಯಮಂತ್ರಿ ಭೇಟಿ: ಸಚಿವ ಜಾರಕಿಹೊಳಿ

0

ಕಿತ್ತೂರು ಉತ್ಸವಕ್ಕೆ 2 ಕೋಟಿ ಅನುದಾನ ಬೇಡಿಕೆ ಶೀಘ್ರ ಮುಖ್ಯಮಂತ್ರಿ ಭೇಟಿ: ಸಚಿವ ಜಾರಕಿಹೊಳಿ

ಬೆಳಗಾವಿ, ಇದೇ ತಿಂಗಳು 23ರಿಂದ ಮೂರು ದಿನಗಳ ಕಾಲ ನಡೆಯಲಿರುವ ಕಿತ್ತೂರು ಉತ್ಸವಕ್ಕೆ 2 ಕೋಟಿ ರೂಪಾಯಿ ಅನುದಾನ ನೀಡುವಂತೆ ಕೋರಲು ಸ್ಥಳೀಯ ಶಾಸಕರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಭರವಸೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ(ಅ.6) ನಡೆದ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಿತ್ತೂರು ಉತ್ಸವವನ್ನು ಆಚರಿಸಲು ಸರ್ಕಾರ ನೀಡುತ್ತಿರುವ 30 ಲಕ್ಷ ರೂಪಾಯಿ ಅನುದಾನ ಸಾಕಾಗುತ್ತಿಲ್ಲ; ಪ್ರತಿವರ್ಷ ಬಿಲ್ ಬಾಕಿ ಉಳಿಯುತ್ತಿರುವುದರಿಂದ ಮುಜುಗರ ಉಂಟಾಗುತ್ತಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಸಭೆಯ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಸಚಿವರು, ಸ್ಥಳೀಯ ಶಾಸಕರನ್ನು ಕರೆದುಕೊಂಡು ಶಿಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಉತ್ಸವಕ್ಕೆ ಪ್ರತಿವರ್ಷ ಎರಡು ಕೋಟಿ ರೂಪಾಯಿ ಅನುದಾನ ಒದಗಿಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಜಯಂತಿ ದಿನಾಂಕ ಬದಲಿಸಲು ಮನವಿ:

News Belgaum-ಕಿತ್ತೂರು ಉತ್ಸವಕ್ಕೆ 2 ಕೋಟಿ ಅನುದಾನ ಬೇಡಿಕೆ ಶೀಘ್ರ ಮುಖ್ಯಮಂತ್ರಿ ಭೇಟಿ: ಸಚಿವ ಜಾರಕಿಹೊಳಿಸರ್ಕಾರವು ಅ.23ರಂದು ಚನ್ನಮ್ಮ ಜಯಂತಿ ಆಚರಿಸಲು ನಿರ್ಧರಿಸಿದ್ದು, ಇದನ್ನ ಬದಲಾಯಿಸಿ ನವೆಂಬರ್ 14 ರಂದು ಜಯಂತಿ ಆಚರಿಸಬೇಕು ಎಂದು ಸಆಹಿತಿ ಯ.ರು.ಪಾಟೀಲ ಆಗ್ರಹಿಸಿದರು.
ವೀರ ರಾಣಿ ಕಿತ್ತೂರು ಚನ್ನಮ್ಮ ನವೆಂಬರ್ 14 ರಂದು ಹುಟ್ಟಿದ್ದು, ಈ ಬಗ್ಗೆ ಅನೇಕ ದಾಖಲೆಗಳಿವೆ. ಅಕ್ಟೋಬರ್ 23 ವಿಜಯೋತ್ಸವದ ದಿನವಾಗಿದೆ. ಆದರೆ ಸರ್ಕಾರವು ಅ.23ರಂದು ಜಯಂತಿ ಆಚರಣೆ ಮಾಡುವುದಾಗಿ ಘೋಷಿಸಿದ್ದು, ಇದನ್ನು ಬದಲಾಯಿಸಬೇಕು ಎಂದು ಅವರು ಸಚಿವರ ಗಮನಕ್ಕೆ ತಂದರು.
ಉತ್ಸವದ ಸಂದರ್ಭದಲ್ಲಿ ಪೂರ್ಣಪ್ರಮಾಣದಲ್ಲಿ ಕೃಷಿಮೇಳ ಆಯೋಜಿಸಬೇಕು ಎಂದು ಸಾರ್ವಜನಿಕರು ಸಲಹೆ ನೀಡಿದರು. ಈ ಬಗ್ಗೆ ಪರಿಶೀಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿವರ್ಷದಂತೆ ಅದ್ದೂರಿಯಾಗಿ ಕಿತ್ತೂರು ಉತ್ಸವ ಆಚರಿಸಲು ಸ್ಥಳೀಯ ಜನರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮಗಳಿಗೆ ತಮ್ಮ ಸಂಪೂರ್ಣ ಸಹಮತವಿದ್ದು, ಯಾವುದೇ ಕೊರತೆಯಾಗದಂತೆ ಸ್ಥಳೀಯ ಜನರ ಆಶಯದಂತೆ ಉತ್ಸವ ಯಶಸ್ವಿಯಾಗಿ ನಡೆಯಬೇಕು ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ವೀರಜ್ಯೋತಿ 16ರಿಂದ:

ಕಿತ್ತೂರು ಉತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ವೀರಜ್ಯೋತಿ ಸಂಚರಿಸಲಿದ್ದು, ಈ ಜ್ಯೋತಿಗೆ ಅ.16ರಂದು ಕಿತ್ತೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದರು.
ಉತ್ಸವದ ಅಂಗವಾಗಿ ಸ್ವಾಗತ ಸಮಿತಿ, ವೇದಿಕೆ, ಆಹಾರ, ಕ್ರೀಡೆ, ಸಾಂಸ್ಕøತಿಕ ಮತ್ತಿತರ ಸಮಿತಿಗಳನ್ನು ರಚಿಸಲಾಗಿದ್ದು, ಉತ್ಸವಕ್ಕೆ ಸಂಬಂಧಿಸಿದಂತೆ ಎಲ್ಲ ರಈತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಈ ಬಾರಿ ಹೆಲಿಟೂರಿಸಂ ಉತ್ಸವದ ಆಕರ್ಷಣೆಯಾಗಲಿದ್ದು, ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಹೆಲಿಕಾಪ್ಟರ್ ಮೂಲಕ ಜಿಲ್ಲೆಯ ದರ್ಶನದ ಸೌಲಭ್ಯ ಸಿಗಲಿದೆ ಎಂದು ಭಜಂತ್ರಿ ಹೇಳಿದರು.
ಶಾಸಕರಾದ ಸತೀಶ್ ಜಾರಕಿಹೊಳಿ, ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡರ, ಬೈಲಹೊಂಗಲ್ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶೈಲಾ ಸಿದ್ರಾಮನಿ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಮತ್ತಿತರರು ಉಪಸ್ಥಿತರಿದ್ದರು.
ಕಿತ್ತೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಲಹೆ-ಸೂಚನೆಗಳನ್ನು ನೀಡಿದರು.

The post ಕಿತ್ತೂರು ಉತ್ಸವಕ್ಕೆ 2 ಕೋಟಿ ಅನುದಾನ ಬೇಡಿಕೆ ಶೀಘ್ರ ಮುಖ್ಯಮಂತ್ರಿ ಭೇಟಿ: ಸಚಿವ ಜಾರಕಿಹೊಳಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.