ಉತ್ತಮ ಸಮಾಜಕ್ಕಾಗಿ

ಕುವೆಂಪುರ ಮಾರ್ಗದರ್ಶನ ಇಂದಿಗೂ ಅಜರಾಮರ – ಡಾ.ಹಂಪ ನಾಗರಾಜಯ್ಯ

0

ಬೆಳಗಾವಿ.ಜ.23: ಸಾಹಿತ್ಯ ಕ್ಷೇತ್ರದಲ್ಲಿ ನನಗೆ ಅಪಾರವಾದ ಪ್ರೋತ್ಸಾಹ ನೀಡಿರುವ ರಾಷ್ಟ್ರಕವಿ ಕುವೆಂಪು ಅವರು ನೀಡಿದ ಶಿಕ್ಷಣ ನನ್ನ ಜೀವನದಲ್ಲಿ ಅಜರಾಮರವಾಗಿ ಉಳಿದುಕೊಂಡಿದ್ದು, ಕುವೆಂಪು ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಪಂಪ ಪ್ರಶಸ್ತಿ ಪುರಸ್ಕøತ ನಾಡೋಜ ಹಂಪ ನಾಗರಾಜಯ್ಯ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯ ಭರತೇಶ ಶಿಕ್ಷಣ ಸಂಸ್ಥೆಯ ಕನ್ನಡ ವಿಶ್ವ ವಿದ್ಯಾಲಯ ಹಂಪಿ ಇವರ ಡಾ. ಆ.ನೇ. ಉಪಾಧ್ಯೆ ಕನ್ನಡ ಅಧ್ಯಯನ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕುವೆಂಪು ಅವರು ನಾನು ನೇರ ಶಿಷ್ಯನಾಗಿ ಬೆಳೆದು ಬಂದಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ನಾನು ಈ ಮಟ್ಟದ ಎತ್ತರಕ್ಕೆ ಬೆಳೆಯಲು ಕುವೆಂಪು ಅವರು ನೀಡಿದ ಮಾರ್ಗದರ್ಶನವೇ ಕಾರಣ ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಜೈನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಪ್ರಾಚೀನ ಕಾಲದಲ್ಲಿ ಕನ್ನಡ ಸಾಹಿತ್ಯ ಅಂದರೆ ಜೈನ ಸಾಹಿತ್ಯ ಎಂದು ಗುರುತಿಸುವಂತಿತ್ತು. ಕನ್ನಡ ಸಾಹಿತ್ಯಕ್ಕೆ ರನ್ನ,ಪೊನ್ನ,ಜನ್ನ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದ ಅವರು, ಇಂದು ಬೆಳಗಾವಿಯಲ್ಲಿ ತಮ್ಮನ್ನು ಸತ್ಕರಿಸಿ ಗೌರವಿಸಿದ ಭರತೇಶ ಶಿಕ್ಷಣ ಸಂಸ್ಥೆ ಕಾರ್ಯವೂ ಸಹ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಮುಂದುವರೆಯುತ್ತಿರುವುದು ಹರ್ಷದ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಬಿ.ಎಂ.ಶ್ರೀ. ಪ್ರಶಸ್ತಿ ಪುರಸ್ಕøತ ನಾಡೋಜ ಡಾ. ಕಮಲಾ ಹಂಪನಾ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, 35 ವರ್ಷದ ವೃತ್ತಿಜೀವನ ನನ್ನದು ಭರತೇಶ ಶಿಕ್ಷಣ ಸಂಸ್ಥೆಯ ಸತ್ಕಾರ ಸಮಾರಂಭ ಇಟ್ಟುಕೊಂಡಿದ್ದು ನಮಗೆ ಹೆಮ್ಮ ಎನಿಸುತ್ತದೆ ಎಂದು ಹೇಳಿದರು. ನನಗೆ ನಮ್ಮ ಗುರುಗಳಿಗೆ ಗುರುಗಳಾದ ಬಿ.ಎಂ ಶ್ರೀರವರ ಪ್ರಶಸ್ತಿ ದೊರಕಿದ್ದು ಬಹಳಷ್ಟು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಮ್ಮ ಗುರುಗಳಾದ ಜಿ. ಬ್ರಹ್ಮಪಾರವರನ್ನು ಸ್ಮರಿಸಿಕೊಂಡರು ಇವರು ನಿನು ಬರವಣಿಗೆಯ ರೀತಿಯಲ್ಲಿ ಸಾಹಿತ್ಯವನ್ನು ಜನರಿಗೆ ಮುಟ್ಟಿಸಬೇಕು ಎಂದು ಹೇಳಿದÀಂತೆ ನನಗೆ ಸಂದೇಶ ಪ್ರಶಸ್ತಿ ಕೂಡಾ ದೊರಕಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕøತ ಡಾ. ಬಾಳಾಸಾಹೇಬ ಲೋಕಾಪೂರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ,ನಾನು ಪ್ರಥಮವಾಗಿ ನೌಕರಿ ಜೀವನವನ್ನು ವಿಜಾಪೂರದಿಂದ ಪ್ರಾರಂಭಿಸಿದೆ. ನಮ್ಮ ಊರಿನ ಪಕ್ಕದಲ್ಲಿ ಕೂಡಲಸಂಗಮವು ಇದೆ. ಆದರೆ ಈಗ ನಾನು ಕೃಷ್ಣ ನದಿಯ ದಂಡೆಯಲ್ಲಿರುವ ಅಥಣಿಯಲ್ಲಿ ಬಂದು ನೆಲೆಸಿದೆ ಮಹಿಳೆಯರಿಗೆ ವಿರೋಧ ಮಾಡಿದ ಮನುಷ್ಯ ಧರ್ಮದ ಮಹಾವಿರೋಧ ನಾನು ಆದರೆ ಮಹಿಳೆಗೆ ಉನ್ನತ ಸ್ಥಾನವನ್ನು ಜೈನಧರ್ಮವು ಕೊಟ್ಟಿದೆ. ಎಂದು ಹೇಳಿದರು. ಅಷ್ಟೇ ಅಲ್ಲದೇ ಹತ್ತು ಗಂಡು ಮಕ್ಕಳನ್ನು ಹೆತ್ತರು ಒಂದು ಹೆಣ್ನು ಬಂಜೆತನ ಇದ್ದಹಾಗೆ ಆದರೆ ಒಂದು ಹೆಣ್ಣು ಮಕ್ಕಳನ್ನು ಹೆತ್ತರೆ ಆದಾಗ ಬಂಜೆತನ ಹೊದಂತೆ ಎಂದು ಹೇಳಿದರು.
ಚಾವುಂಡರಾಯ ಪ್ರಶಸ್ತಿ ಪುರಸ್ಕøತ ಡಾ.ಧರಣೇಂದ್ರ ಕುರಕುರಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದಿನ ಸನ್ಮಾನ ನನಗೆ ಸಮಾಜದಲ್ಲಿ ಜವಾಬ್ದಾರಿ ಹೆಚ್ಚಿಸುವಂತೆ ಮಾಡಿದೆ. ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಯುವ ಜನಾಂಗಕ್ಕೆ ಸಮಾಜದ ಪರಿಚಯ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಅವರು ಹೇಳಿದರು.
ಖ್ಯಾತ ಉದ್ಯಮಿ ಹಾಗೂ ಕರ್ಮವೀರ ಡಾ.ಶ್ರೀ ಬಾಬಾರಾವ್ ಪಾಟೀಲ ಪ್ರಶಸ್ತಿ ಪುರಸ್ಕøತ ಗೊಪಾಲ ಜಿನಗೌಡ ಅವರು ಮಾತನಾಡಿ, ನಾನು ಕೂಡಾ ಭರತೇಶ ಶಿಕ್ಷಣ ಸಂಸ್ಥೆಯಲ್ಲಿ 10 ವರ್ಷ ಕಾರ್ಯದರ್ಶಿಗಳಾಗಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೇನೆ ನನಗೆ ತುಂಬಾ ಹೆಮ್ಮೆ ಏನುಸುತ್ತದೆ ಎಂದು ಹೇಳಿದರು. ದಕ್ಷಿಣ ಭಾರತದ ಜೈನಸಭಾ ಸಂಸ್ಥೆಯು ಕರ್ಮವೀರ ಡಾ. ಬಾಬಾರಾವ್ ಪಾಟೀಲ ರವರ ಪ್ರಶಸ್ತಿ ಕೊಟ್ಟಿದ್ದಕ್ಕೆ ಧನ್ಯವಾದ ಹೇಳಿದರು. ಅಷ್ಟೇ ಅಲ್ಲದೇ ಭರತೇಶ ಶಿಕ್ಷಣ ಸಂಸ್ಥೆ ನನನ್ನು ಸತ್ಕರಿಸದ್ದಕ್ಕಾಗಿ ಹೆಮ್ಮೆ ಎನಿಸುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜಿನದತ್ತ ದೇಸಾಯಿ ಅವರು ಮಾತನಾಡಿ, ಹಂಪನಾರವರು ಅಂತರಾಷ್ಟ್ರೀಯ ವಿದ್ವಾಂಸರು ಎಂದು ಹೇಳಿದರು. ಈ ಸಮಾಜ ಇಬ್ಬರನ್ನು ಅಂತರಾಷ್ಟ್ರೀಯ ವಿದ್ವಾಂಸರನ್ನು ಕೊಟ್ಟಿದೆ. ಅದರಲ್ಲಿ ಮೊದಲನೆಯವರು ದಿವಂಗತ ಡಾ.ಆ.ನೇ. ಉಪಾಧ್ಯೆ ರವರು ಮತ್ತು ನಾಡೋಜ ಡಾ. ಹಂಪ ನಾಗರಾಜಯ್ಯರವರು ಎಂದು ಹೇಳಿದರು.
ಸಮಾರಂಭದಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪುಷ್ಪದಂತ ದೊಡ್ಡಣವರ, ಕಾರ್ಯದರ್ಶಿ ರಾಜೀವ ದೊಡ್ಡಣವರ, ಖಜಾಂಚಿ ಶ್ರೀಪಾಲ ಖೆಮಲಾಪೂರೆ, ಆಡಳಿತ ಮಂಡಳಿಯ ಸದಸ್ಯರಾದ ಜಗದೀಶ ಸವದತ್ತಿ, ಪ್ರಕಾಶ ಉಪಾಧ್ಯೆ ಮೊದಲಾದವರು ಉಪಸ್ಥಿತರಿದ್ದರು. ಡಾ.ಎ.ಆರ್.ರೊಟ್ಟಿ ಇವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭರತ ಅಲಸಂದಿ ಕಾರ್ಯಕ್ರಮ ನಿರೂಪಿಸಿದರು. ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ವಿನೋದ ದೊಡ್ಡಣವರ ಅವರು ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.