ಉತ್ತಮ ಸಮಾಜಕ್ಕಾಗಿ

ಕು.ಮಲ್ಲಪ್ರಭಾ ಅವರಿಗೆ ಸ್ವಚ್ಛಾಗೃಹಿ ಎಂದು ನೇಮಕ: ಸಿಇಓ

0

ಬೆಳಗಾವಿ, ಇತ್ತೀಚಿಗೆ ಇಂಡೋನೇಶಿಯಾ ದೇಶದ ಜಾಕಾರ್ತಾದಲ್ಲಿ ಜರುಗಿದ ಏಶಿಯನ್ ಗೇಮ್ಸ್‍ನಲ್ಲಿ ಕರ್ನಾಟಕ ರಾಜ್ಯದಿಂದ
ಬೆಳಗಾವಿ ಜಿಲ್ಲೆಯ ಕ್ರೀಡಾ ಪಟುವಾದ ಕುಮಾರಿ. ಮಲಪ್ರಭಾ ಯ. ಜಾಧವ ಇವರು ಭಾಗವಹಿಸಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಕ್ಕಾಗಿ ಬೆಳಗಾವಿ ಜಿಲ್ಲೆಯ “ಸ್ವಚ್ಛಾಗೃಹಿ” ಎಂದು ನೇಮಕ ಮಾಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಮಚಂದ್ರನ್ ಆರ್. ಅವರು ತಿಳಿಸಿದ್ದಾರೆ.

ಮಾನ್ಯ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿಯವರು ಕಂಚಿನ ಪದಕವನ್ನು ಪಡೆದು ನಮ್ಮ ದೇಶಕ್ಕೆ ಕೀರ್ತಿಯನ್ನು ತಂದಿದ್ದಕ್ಕೆ ಶುಭ ಕೋರಿ ನೀವು ಮಾಡಿದ ಈ ಸಾಧನೆ ಪ್ರತಿ ಒಬ್ಬ ವ್ಯಕ್ತಿಗೆ ಸ್ಪೂರ್ತಿಯಾಗಿದ್ದು, ತಾವು “ಸ್ವಚ್ಚ ಭಾರತ ಮೀಷನ್”ನಲ್ಲಿ ಅತಿ ಹೆಚ್ಚು ಆಸಕ್ತಿ ತೋರಿಸಿ ಮಹಾತ್ಮಾ ಗಾಂಧಿಯವರ ಕನಸು ನನಸು ಮಾಡಲು ಸಹರಿಸಿ ಎಂದು ಮಾನ್ಯ ಪ್ರಧಾನಿ ಮಂತ್ರಿಗಳ ಪತ್ರದ ಮೂಲಕ ಕುಮಾರಿ. ಮಲಪ್ರಭಾ ಇವರಿಗೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ “ಸ್ವಚ್ಛಾಗೃಹಿ” ಎಂದು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಮಚಂದ್ರನ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

The post ಕು.ಮಲ್ಲಪ್ರಭಾ ಅವರಿಗೆ ಸ್ವಚ್ಛಾಗೃಹಿ ಎಂದು ನೇಮಕ: ಸಿಇಓ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.