ಉತ್ತಮ ಸಮಾಜಕ್ಕಾಗಿ

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವಿದ್ಯಮಾನ ಸಚಿವ ಡಾ. ಹರ್ಷವರ್ಧನ ಅವರನ್ನು ಭೇಟಿ

0

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವಿದ್ಯಮಾನ ಸಚಿವ ಡಾ. ಹರ್ಷವರ್ಧನ ಅವರನ್ನು ಭೇಟಿ

ಬೆಳಗಾವಿ: ಬೆಳಗಾವಿ RCU ವಿವಿಗೆ ಜಮೀನಿನ ಮಾಲೀಕತ್ವ ಪಡೆಯುವ ಸಂಬಂಧ ಇಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವಿದ್ಯಮಾನ ಸಚಿವ ಡಾ. ಹರ್ಷವರ್ಧನ ಅವರನ್ನು ಭೇಟಿಯಾಗಿ ಚರ್ಚಿಸಲಾಯಿತು.
ಬೆಳಗಾವಿ ಸಂಸದ ಸುರೇಶ ಅಂಗಡಿ, ಆರ್ ಸಿಯು ಕುಲಪತಿ ಪ್ರೊ. ಸಿದ್ದಪ್ಪ ಹೊಸಮನಿ, ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡ್ರ ಇಂದು ಕೇಂದ್ರ ಸಚಿವರನ್ನು ಭೇಟಿಯಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ‌ ಕೊಡಮಾಡಲಾದ ಅರಣ್ಯ ಇಲಾಖೆ ಜಾಗವನ್ನು ವಿವಿ ಮಾಲೀಕತ್ವಕ್ಕೆ ಹಸ್ತಾಂತರಿಸುವಂತೆ ಕೋರಿದರು.
ರಾಜ್ಯ ಸರಕಾರದ ಅರಣ್ಯ ಇಲಾಖೆ ಅಧಿಕಾರಿಗಳು RCU ಜಮೀನಿಗೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಸಚಿವಾಲಯವನ್ನು ಅಗತ್ಯ ಪತ್ರ ವ್ಯವಹಾರದೊಂದಿಗೆ ಸಂಪರ್ಕಿಸುವಂತೆ ಡಾ. ಹರ್ಷವರ್ಧನ ತಮ್ಮನ್ನು ಭೇಟಿಯಾದ ನಿಯೋಗದ ಎದುರು ಅಭಿಪ್ರಾಯಪಟ್ಟರು. ಸಚಿವಾಲಯದ ಐಎಎಸ್ ಅಧಿಕಾರಿಗಳಾದ ಹಾರ್ಧಿಕ ಶಹಾ ಹಾಗೂ ಸಿದ್ಧಾಯ ದಾಸ್ ಅವರನ್ನೂ ಭೇಟಿಯಾಗಿ ಚರ್ಚಿಸಲಾಯಿತು.

The post ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವಿದ್ಯಮಾನ ಸಚಿವ ಡಾ. ಹರ್ಷವರ್ಧನ ಅವರನ್ನು ಭೇಟಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.