ಉತ್ತಮ ಸಮಾಜಕ್ಕಾಗಿ

ಕ್ಷೀರಭಾಗ್ಯ ಯೋಜನೆಯ ನಂದಿನಿ ಮೀಲ್ಕ ಪೌಡರ ಕೆನೆ ಬೆರೆತ ಹಾಲಿನ ಪಾಕೇಟ ಅನಧೀಕೃತವಾಗಿ ಮಾರಾಟ ಮಾಡುತ್ತಿದ್ದಾಗ 2 ಪ್ರಕರಣದಲ್ಲಿ 5 ಜನರ ಬಂಧನ,:

0

ಬೆಳಗಾವಿ ಕರ್ನಾಟಕ ಸರ್ಕಾರ ಶಾಲಾ ಮಕ್ಕಳಿಗೆ ಪೂರೈಸಬೇಕಾದ ಕ್ಷೀರಭಾಗ್ಯ ಯೋಜನೆಯ ನಂದಿನಿ ಮೀಲ್ಕ ಪೌಡರ ಕೆನೆ ಬೆರೆತ ಹಾಲಿನ ಪಾಕೇಟ ಅನಧೀಕೃತವಾಗಿ ಮಾರಾಟ ಮಾಡುತ್ತಿದ್ದಾಗ 2 ಪ್ರಕರಣದಲ್ಲಿ 5 ಜನರ ಬಂಧನ,:
ದಿನಾಂಕ: 21/01/2017 ರಂದು ಎಪಿಎಂಸಿ ಮಾರ್ಕೆಟಯಾರ್ಡದ ಕ್ಯೂ ಲೈನ್ ಹತ್ತಿರ ಗಂಗಾಧರ ರುದ್ರಪ್ಪ ಹಡಗಿನಾಳ ಸಾ: ದೇಶನೂರ ಈತನು ತನ್ನ ವಶದಲ್ಲಿ ಮಾರಾಟಕ್ಕಲ್ಲದ ಕರ್ನಾಟಕ ಸರ್ಕಾರದಿಂದ ಉಚಿತವಾಗಿ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ವಿತರಣೆಯಾಗಿದ್ದ ಹಾಲಿನ ಪುಡಿಯ ಪಾಕೇಟಗಳನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ಸ್ವಂತ ಪಾಯ್ದೆಗೋಸ್ಕರ ಸರ್ಕಾರಕ್ಕೆ ಮೋಸ ಮಾಡಿ, ದುರುಪಯೋಗ ಪಡಿಸಿಕೊಂಡು ಮಾರಾಟ ಮಾಡುತ್ತಿದ್ದಾಗ, ಸಿಸಿಐಬಿ ಪೊಲೀಸ್ ಇನ್ಸಪೇಕ್ಟರ್ ಶ್ರೀ. ಎ ಎಸ್ ಗುದಿಗೊಪ್ಪ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಇಬ್ಬರನ್ನು ವಶಕ್ಕೆ ಪಡೆದುಕೊಂಡು 01 ಕೆಜಿಯ 07 ಹಾಲಿನ ಪೌಡರ ಪಾಕೇಟ ಹಾಗೂ ಅರ್ಧ ಕೆಜಿಯ 12 ಪಾಕೇಟಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ, ಭೀಮಾಶಂಕರ ಕಾಂತಪ್ಪ ಮಿಂಚಿನಾಳ ಸಾ: ಬೀಜಾಪೂರ, ಪ್ರವೀಣ ಶಿವಾನಂದ ಪಾಶ್ವಾಪುರೆ ಸಾ: ಬೆಳಗಾವಿ ರವರನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
2) ದಿನಾಂಕ: 20/01/2017 ರಂದು ರಾತ್ರಿ 08ಃ30 ಗಂಟೆಗೆ ಹಿರೇಬಾಗೇವಾಡಿ ಗ್ರಾಮದ ಪೇಟೆ ಓಣಿಯಲ್ಲಿ ನಾಗರಾಜ ಚನ್ನಪ್ಪ ವಾಲಿ ಮತ್ತು ಬಸವರಾಜ ಚನ್ನಪ್ಪ ವಾಲಿ ಸಾ: ಇಬ್ಬರೂ ಪೇಟೆ ಓಣಿ, ಹಿರೇಬಾಗೇವಾಡಿ ಇಬ್ಬರು ಕರ್ನಾಟಕ ಸರ್ಕಾರದಿಂದ ಉಚಿತವಾಗಿ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ವಿತರಣೆಯಾಗಿದ್ದ ಹಾಲಿನ ಪುಡಿಯ ಪಾಕೇಟಗಳನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ಸ್ವಂತ ಪಾಯ್ದೆಗೋಸ್ಕರ ಸರ್ಕಾರಕ್ಕೆ ಮೋಸ ಮಾಡಿ, ದುರುಪಯೋಗ ಪಡಿಸಿಕೊಂಡು ಮಾರಾಟ ಮಾಡುತ್ತಿದ್ದಾಗ, ಬಾಗೇವಾಡಿ ಪೊಲೀಸ್ ಇನ್ಸಪೇಕ್ಟರ್ ಶ್ರೀ. ಎಸ್ ಸಿ ಪಾಟೀಲ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಇಬ್ಬರನ್ನು ವಶಕ್ಕೆ ಪಡೆದುಕೊಂಡು ಅರ್ಧ ಕೆಜಿಯ 10 ಹಾಲಿನ ಪೌಡರ ಪಾಕೇಟಗಳನ್ನು ಮತ್ತು 500/- ರೂ ವಶಪಡಿಸಿಕೊಂಡ ಬಗ್ಗೆ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

Leave A Reply

 Click this button or press Ctrl+G to toggle between Kannada and English

Your email address will not be published.