ಉತ್ತಮ ಸಮಾಜಕ್ಕಾಗಿ

ಖಾತೆಗಳಿಗಾಗಿ ನಡೆದ ಕಿತ್ತಾಟಕ್ಕಿಂತಲೂ “ವರ್ಗಾವಣೆ ಹಸ್ತಕ್ಷೇಪ” ದ ಜಗಳ ಇನ್ನು “ನಿತ್ಯ ರಾಮಾಯಣ”!!

"The Never Ramayana" is a quarrel of "transfer interference" than accounts for accounts !!

0

ವಿಶೇಷ ಬರಹ: ಅಶೋಕ್ ಚಂದರಗಿ

ಸಮ್ಮಿಶ್ರ ಸರಕಾರವೊಂದರಲ್ಲಿ ದೊಡ್ಡ ತಲೆನೋವೆಂದರೆ ಅಧಿಕಾರಿಗಳ ವರ್ಗಾವಣೆ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳ ವರ್ಗಾವಣೆಗಳನ್ನು ಮುಖ್ಯಮಂತ್ರಿಗಳು, ಸಂಬಂಧ ಪಟ್ಟ ಇಲಾಖೆಯ ಸಚಿವರ ಗಮನಕ್ಕೆ ತರಲಾರದೆಯೂ, ನೇರವಾಗಿ ಮಾಡಬಹುದು. ಶಾಸಕರು ಕೊಡುವ “ಮಿನಿಟ್” ಗಳನ್ನು ಆಧರಿಸಿಯೂ ಸಿಎಮ್ ಇಂಥ ವರ್ಗಾವಣೆಗಳನ್ನು ಮಾಡುತ್ತಾರೆ. ಪ್ರಭಾವಿ ಶಾಸಕರು ಮಂತ್ರಿಗಳಿಗೆ ಸಲಾಂ ಹೊಡೆಯದೇ ನೇರವಾಗಿ ಸಿಎಮ್ ರಿಂದಲೇ ತಮಗೆ ಬೇಕಾದವರನ್ನು ವರ್ಗ ಮಾಡಿಸಿಕೊಳ್ಳುತ್ತಾರೆ. ವರ್ಗಾವಣೆಗಳ ಆದೇಶ ಪಟ್ಟಿ ಹೊರಬಿದ್ದ ನಂತರವೇ ಆಯಾ ಇಲಾಖೆಗಳ ಸಚಿವರಿಗೆ ಗೊತ್ತಾದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ.

2004 ರಲ್ಲಿ ಕಾಂಗ್ರೆಸ್ ಜೆಡಿಎಸ್ ಸರಕಾರವಿದ್ದಾಗ ಒಬ್ಬ ಕಾರ್ಯಕಾರಿ ಅಭಿಯಂತರ ವರ್ಗಾವಣೆಯ ಸಂಗತಿ ಸಾಕಷ್ಟು ಗೊಂದಲಕ್ಕೆ ಕಾರಣವಾಯಿತು. ಇದೇ ಕುಮಾರಸ್ವಾಮಿಯವರ( ಅವರು ಮುಖ್ಯಮಂತ್ರಿಯಾಗಿರಲಿಲ್ಲ) ಪ್ರಭಾವ ಬಳಸಿ ಆ ಅಭಿಯಂತರು ಒಂದು ಜಾಗೆಗೆ ವರ್ಗ ಮಾಡಿಸಿಕೊಂಡರು. ಅಂದು ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗರು ಕುಮಾರಸ್ವಾಮಿಯವರ ಶಿಫಾರಸಿನ ಮೇರೆಗೆ ವರ್ಗ ಮಾಡಿದರು. ಆದರೆ ಈ ಅಭಿಯಂತರಿಗೆ ಪ್ರತಿಸ್ಪರ್ಧಿಯಾಗಿದ್ದ ಇನ್ನೊಬ್ಬ ಅಭಿಯಂತರು ತಮ್ಮ ಜಾತಿಯ ಪ್ರಭಾವಿ ಮಂತ್ರಿಯೊಬ್ಬರನ್ನು ಹಿಡಿದುಕೊಂಡರು. ಅವರು ಧರ್ಮಸಿಂಗ್ ಬಳಿ ಹೋಗಿ ತಮಗೆ ಬೇಕಾದಂತೆ ಮರು ಆದೇಶ ಮಾಡಿಸಿಕೊಂಡರು. ಈ ತಿಕ್ಕಾಟ ಮುಂದುವರೆದು ಎರೆಡೆರಡು ಆದೇಶಗಳು, ರದ್ಧತಿಗಳು ನಡೆದವು. ಕೊನೆಗೆ ಜೆಪಿ ನಗರದ ಕುಮಾರಸ್ವಾಮಿ ಅವರ ನಿವಾಸಕ್ಕೆ ಅಭಿಯಂತರನ್ನು ಕರೆದೊಯ್ಯಲಾಯಿತು. ಅವರು ಅಭಿಯಂತರ ಭುಜದ ಮೇಲೆ ಕೈಹಾಕಿ,”ಸ್ವಲ್ಪ ದಿನ ಕಾಯಿರಿ. ನಾನು ಮತ್ತೆ ನಿಮ್ಮನ್ನು ನೀವು ಕೇಳಿದ ಜಾಗೆಗೆ ಹಾಕುತ್ತೇನೆ” ಎಂದರು. ಮುಂದೆ ಕೆಲವೇ ತಿಂಗಳಲ್ಲಿ ಅವರು ಬಿಜೆಪಿ ಜೊತೆಗೆ ಸೇರಿ ಸಿಎಮ್ ಆದರು. ತಾವು ನೀಡಿದ ಭರವಸೆಯಂತೆ ಆ ಅಭಿಯಂತರನ್ನು ಅವರು ಬಯಸಿದ ಜಾಗೆಯಲ್ಲೇ ಕೂಡಿಸಿದರು.!

ವಿಧಾನ ಸೌಧದಲ್ಲಿ ನಡೆಯುವ ವರ್ಗಾವಣೆ ಆಟಗಳು ಸಿಎಮ್ ಮತ್ತು ಸಚಿವರ ಮಧ್ಯೆ ಸಾಕಷ್ಟು ಸಂಘರ್ಷಗಳನ್ನು ಹುಟ್ಟಿ ಹಾಕಿದ ನೂರಾರು ಪ್ರಕರಣಗಳು ನೋಡಸಿಗುತ್ತವೆ. ಸಚಿವರನ್ನು ಹದ್ದುಬಸ್ತಿನಲ್ಲಿಡಲು ಅವರ ಇಲಾಖೆಯ ಕಾರ್ಯದರ್ಶಿಗಳನ್ನಾಗಿ “ಅಡಮುಟ್” (ಯಾರಿಗೂ ಜಗ್ಗದ,ಯಾರ ಮಾತನ್ನೂ ಕೇಳದ) ವ್ಯಕ್ತಿಯನ್ನು ನೇಮಿಸುವದು, ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳನ್ನಾಗಿ, ಎಸ್ ಪಿ ಯನ್ನಾಗಿ ನೇಮಿಸುವದನ್ನು ಬಹುತೇಕ ಎಲ್ಲ ಮುಖ್ಯಮಂತ್ರಿಗಳೂ ಮಾಡುತ್ತಲೇ ಬಂದಿದ್ದಾರೆ.

ಸಮ್ಮಿಶ್ರ ಸರಕಾರದಲ್ಲಂತೂ ಉಭಯ ಪಕ್ಷಗಳ ಪ್ರಭಾವಿ ಶಾಸಕರು ವರ್ಗಾವಣೆಗಳ ಸಂಬಂಧ ತರುವ ಒತ್ತಡಗಳು ಸಿಎಮ್ ಖುರ್ಚಿಯ ಮೇಲೆ ಕುಳಿತವರನ್ನು ನಿತ್ಯ ಪರೀಕ್ಷೆಗೆ ಒಡ್ಡುತ್ತಲೇ ಇರುತ್ತವೆ. ಅನಿವಾರ್ಯವಾಗಿ “ಪುಟ್ ಅಪ್ ದಿ ಫೈಲ್” ಎಂದು ಸಿಎಮ್ ಬರೆದಾಕ್ಷಣ ಶಾಸಕರು ಖುಷಿಯಾಗಿ ಬಂದು ಬಿಡುತ್ತಾರೆ. ಆದರೆ ನಂತರದ ಆಟವೇ ಬೇರೆಯಾಗಿರುತ್ತದೆ.!

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.