ಉತ್ತಮ ಸಮಾಜಕ್ಕಾಗಿ

ಖಾಸಗಿ ಕಂಪನಿಗಳಿಗೆ ಜನವರಿ 21 ರಂದು ಸಂದರ್ಶನ

0

ಬೆಳಗಾವಿ, ಜನವರಿ 18 ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಜೈನ್ ಕಾಲೇಜ ಆಫ್ ಇಂಜನೀಯರಿಂಗ್, ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ, ಸುಮಾರು 20 ಖಾಸಗಿ ಕಂಪನಿಗಳಿಗೆ ಜನವರಿ 21 ರಂದು ಮುಂಜಾನೆ 8-30 ರಿಂದ ಉಚಿತ ಕ್ಯಾಂಪಸ ಸಂದರ್ಶನವನ್ನು ಜೈನ್ ಕಾಲೇಜ ಆಫ್ ಇಂಜನೀಯರಿಂಗ್ ಟಿ.ಎಸ್. ನಗರ ಹುಂಚ್ಯಾನಟ್ಟಿ ಕ್ರಾಸ್ ಮಚ್ಚೆ ಬೆಳಗಾವಿಯಲ್ಲಿ ಹಮ್ಮಿಕೋಳ್ಳಲಾಗಿದೆ.
ಯಾವುದೆ ಡಿಪ್ಲೊಮಾ, ಹಾಗೂ ಯಾವುದೇ ಪದವಿ/ದ್ವಿಪದವಿ, ಹೊಂದಿದ ಅಬ್ಯರ್ಥಿಗಳಿಗೆ ಮಾತ್ರ ಬೇಡಿಕೆಗಳಿದ್ದು, ಅರ್ಹ ಅಬ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಕಾಲೇಜು ವತಿಯಿಂದ, ಕೇಂದ್ರ ಬಸ್ ನಿಲ್ದಾಣದಿಂದ ಆವರಣ ಸಂದರ್ಶನ ಸ್ಥಳದ ವರೆಗೆ ಉಚಿತ ಬಸ್ ಸೌಲಭ್ಯವನ್ನು ಏರ್ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆ: 9620912034 ಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.