ಉತ್ತಮ ಸಮಾಜಕ್ಕಾಗಿ

ಗಣೇಶ ವಿಸರ್ಜನೆ: ಭಾರಿ ಪೊಲೀಸ್ ಪಥಸಂಚಲನ

0

ಗಣೇಶ ವಿಸರ್ಜನೆ: ಭಾರಿ ಪೊಲೀಸ್ ಪಥಸಂಚಲನ

ಬೆಳಗಾವಿ: ಸುದೀರ್ಘ 11ದಿನಗಳ ನಂತರ ಸಾರ್ವಜನಿಕ ಗಣೇಶೋತ್ಸವಕ್ಜೆ ಭಾನುವಾರ ತೆರೆ ಬೀಳಲಿದ್ದು, ಭಾನುವಾರ ಸಂಜೆ ವಿಸರ್ಜನೆ ನಡೆಯಲಿದ್ದು, ಪೊಲೀಸ್ ಇಲಾಖೆ ವ್ಯಾಪಕ ಪೊಲೀಸ್ ಬಂದೋಬಸ್ತ್ ವಹಿಸಿದೆ.

ರಾಜ್ಯದ ಎಲ್ಲ ರೇಂಜ್ ಮತ್ತು ಕಮಿಷ್ನರೇಟಗಳಿಂದ ಎರಡು ಸಾವಿರಕ್ಕೂ ಹೆಚ್ಚು ಸಿಬ್ಬಂಧಿ ಬೆಳಗಾವಿಗೆ ಎರಡು ದಿನ ಮುಂಚೆ ಆಗಮಿಸಿದ್ದಾರೆ.
ನಗರ ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಹಾಗೂ ಡಿಸಿಪಿ ಸೀಮಾ ಲಾಟಕರ ಅವರ ನೇತೃತ್ವದಲ್ಲಿ ಇಂದು ಮೆರವಣಿಗೆ ಸಂಚರಿಸುವ ನಗರದ ಪ್ರಮುಖ ರಸ್ತೆ ಮತ್ತು ಗಲ್ಲಿಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಲಾಯಿತು.

News Belgaum-ಗಣೇಶ ವಿಸರ್ಜನೆ: ಭಾರಿ ಪೊಲೀಸ್ ಪಥಸಂಚಲನಕ್ಷಿಪ್ರ ಕಾರ್ಯಾಚರಣೆ ಪಡೆ, ಕೆಎಸ್ ಆರ್ ಪಿ, ಡಿಎಆರ್, ಮಹಿಳಾ ಪೊಲೀಸ್ ಪಡೆಗಳು ಬಂದೋಬಸ್ತ್ ನೋಡಿಕೊಳ್ಳಲಿವೆ.
ಲಕ್ಷಾಂತರ ಜನ ಭಾನುವಾರ ಸಂಜೆಯಿಂದ ಸೋಮವಾರ ಬೆಳಗಿನವರೆಗೆ ಗಣೇಶ ವೀಕ್ಷಣೆ ಮೆರವಣಿಗೆಯಲ್ಲಿ ಸೇರುವುದರಿಂದ ಕಾನೂನು ಸುವ್ಯವಸ್ಥೆ ಕಾಯಲು ಪೊಲೀಸ್ ಇಲಾಖೆ ಸಜ್ಜಾಗಿದೆ.

ಬೆಳಗಾವಿ ನಾಗರಿಕರು ಶಾಂತಿ ಸೌಹಾರ್ಧತೆ ಕಾಯ್ದುಕೊಂಡು ಗಣೇಶ ವಿಸರ್ಜನೆ ಮಾಡಬೇಕು ಎಂದು ಪೊಲೀಸ್ ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಮನವಿ ಮಾಡಿದ್ದಾರೆ. ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಂಕರ ಮಾರಿಹಾಳ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದರು.

The post ಗಣೇಶ ವಿಸರ್ಜನೆ: ಭಾರಿ ಪೊಲೀಸ್ ಪಥಸಂಚಲನ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.