ಉತ್ತಮ ಸಮಾಜಕ್ಕಾಗಿ

ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ; ಸಾಕ್ಷ್ಯಚಿತ್ರ ಪ್ರದರ್ಶನ

0

ಗಾಂಧೀಜಿ ಕನಸಿನ ಭಾರತ ನಿರ್ಮಾಣ; ನಮ್ಮೆಲ್ಲರ ಹೊಣೆ-ಸಂಸದ ಸುರೇಶ್ ಅಂಗಡಿ

ಬೆಳಗಾವಿ, ಮಹಾತ್ಮಾ ಗಾಂಧೀಜಿಯವರು ಸ್ವತಃ ಕಸಬರಿಗೆ ಹಿಡಿದು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಈ ರೀತಿ ನಾವೆಲ್ಲರೂ ಸ್ವಯಂಪ್ರೇರಣೆಯಿಂದ ಸ್ವಚ್ಛತೆಯನ್ನು ಕಾಪಾಡಿದಾಗ ಮಾತ್ರ ಸ್ವಚ್ಛ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ಮಂಗಳವಾರ(ಅ.2) ಟಿಳಕವಾಡಿಯ ವೀರಸೌಧದಲ್ಲಿ ಏರ್ಪಡಿಸಲಾಗಿದ್ದ ‘ಗಾಂಧೀಜಿಗೆ ನಮನ’ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೊಘಲರು ಹಾಗೂ ಬ್ರಿಟಿಷ್‍ರ ಆಡಳಿತ ಸೇರಿದಂತೆ ಬಹುಪಾಲು ಗುಲಾಮಗಿರಿಯಲ್ಲಿ ಕಳೆದ ನಾವು ಇತಿಹಾಸವನ್ನು ಅರಿತುಕೊಳ್ಳಬೇಕು. ಅಂದಾಗ ಮಾತ್ರ ಬದಲಾವಣೆ ಸಾಧ್ಯ; ಸದೃಢ ಭಾರತ ನಿರ್ಮಾಣ ಸಾಧ್ಯ ಎಂದರು.

ಅತಿಥಿಯಾಗಿ ಆಗಮಿಸಿದ್ದ ಶಾಸಕ ಅನಿಲ್ ಬೆನಕೆ ಅವರು, ಅನೇಕ ಮಹನೀಯರ ಹೋರಾಟದ ಫಲವಾಗಿ ಸ್ವತಂತ್ರ ಭಾರತ; ಸುರಕ್ಷಿತ ಭಾರತ ನಿರ್ಮಾಣವಾಗಿದೆ. ಇದೀಗ ಮಹಾತ್ಮಾ ಗಾಂಧೀಜಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಸ್ವಚ್ಛ ಭಾರತ ನಿರ್ಮಾಣ ಆಗಬೇಕಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಮುಂಚೂಣಿಯಲ್ಲಿತ್ತು ಎಂಬುದುನ್ನು ನೆನಪಿಸಿದ ಅವರು, ಗಾಂಧೀಜಿಯವರ ಕನಸಿನ ಭಾರತ ನಿರ್ಮಾಣ ನಮ್ಮಿಂದಲೇ ಆರಂಭಗೊಳ್ಳಬೇಕು ಎಂದರು.

ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಅವರು, ಸತ್ಯ-ಅಹಿಂಸೆ ಮಾರ್ಗದಲ್ಲಿ ನ್ಯಾಯ ಮತ್ತು ಧರ್ಮಕ್ಕಾಗಿ ಹೋರಾಡಿದ ಮಹಾತ್ಮಾ ಗಾಂಧೀಜಿಯವರ ಬದುಕು ಇಡೀ ವಿಶ್ವಕ್ಕೆ ಒಂದು ಸಂದೇಶವಾಗಿದೆ ಎಂದು ಬಣ್ಣಿಸಿದರು.

ವಿಶೇಷ ಉಪನ್ಯಾಸ:

ಮಹಾತ್ಮಾ ಗಾಂಧೀಜಿ ಅವರ ಹೋರಾಟದ ಬದುಕಿನ ಕುರಿತು ವಿಶೇಷ ಉಪನ್ಯಾಸ ನೀಡಿದ ಖ್ಯಾಟ ನಾಟಕಕಾರ ಹಾಗೂ ಸಾಹಿತಿಗಳಾದ ಡಿ.ಎಸ್.ಚೌಗಲೆ ಅವರು, ಸತ್ಯಾಗ್ರಹ, ಅಹಿಂಸೆ ಮತ್ತು ಸರಳತೆಯ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗಿ ಬೆಳೆದು ಬಂದ ಮಹಾತ್ಮಾ ಗಾಂಧೀಜಿ ಅವರ ಜೀವನದ ವಿಧಾನವನ್ನು ವಿವರಿಸಿದರು.

ಸಾರ್ವಜನಿಕ ಜೀವನದಲ್ಲಿ ಯಾವುದೇ ಪ್ರತಿಫಲ ಬಯಸಬಾರದು ಎಂಬುದು ಗಾಂಧೀಜಿಯವರ ತತ್ವವಾಗಿತ್ತು. ಅದಕ್ಕೆ ಬದ್ಧರಾಗಿಯೇ ಬದುಕಿದ ಅವರು, ಎಂತಹ ಕಠಿಣ ಸಂದರ್ಭದಲ್ಲೂ ರಾಜೀ ಮಾಡಿಕೊಳ್ಳಲಿಲ್ಲ ಎಂದರು.
ಮಹಾತ್ಮಾ ಗಾಂಧೀಜಿಯವರ ಹೋರಾಟದ ಬದುಕು ರೂಪಿಸುವಲ್ಲಿ ಅವರ ಪತ್ರಿ ಕಸ್ತೂರಬಾ ಅವರ ಶ್ರಮವನ್ನು ಅವರು ಮೆಲುಕು ಹಾಕಿದರು.

ಕಿರು ಪುಸ್ತಕ ಬಿಡುಗಡೆ:

ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಕಟಿಸಲಾಗಿರುವ ಬೊಳುವಾರು ಮಹಮದ್ ಕುಂಞÂ ಅವರು ರಚಿಸಿದ “ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ” ಕಿರು ಪುಸ್ತಕವನ್ನು ಶಾಸಕ ಅನಿಲ್ ಬೆನಕೆ ಅವರು ಬಿಡುಗಡೆಗೊಳಿಸಿದರು.

ಗಾಂಧೀಜಿ ಜಯಂತಿ ಅಂಗವಾಗಿ ಹೊರತರಲಾಗಿರುವ ಜನಪದ ಹಾಗೂ ಮಾರ್ಚ ಆಫ್ ಕರ್ನಾಟಕ ವಿಶೇಷ ಸಂಚಿಕೆಗಳನ್ನು ಸಂಸದ ಸುರೇಶ್ ಅಂಗಡಿ ಅವರು ಬಿಡುಗಡೆಗೊಳಿಸಿದರು.

News Belgaum-ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ; ಸಾಕ್ಷ್ಯಚಿತ್ರ ಪ್ರದರ್ಶನವಾರ್ತಾ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಮಹಾತ್ಮಾ ಗಾಂಧೀಜಿ ಜೀವನದ ವಿವಿಧ ಮಜಲುಗಳನ್ನು ಒಳಗೊಂಡ ವಿಶೇಷ ಛಾಯಾಚಿತ್ರ ಪ್ರದರ್ಶನವನ್ನು ಅತಿಥಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾತ್ಮಾ ಗಾಂಧೀಜಿ ಜೀವನ ಕುರಿತ ಸಾಕ್ಷ್ಯಚಿತ್ರವನ್ನು ಇದೇ ವೇಳೆ ಪ್ರದರ್ಶಿಸಲಾಯಿತು. ಮಹಾಪೌರರಾದ ಬಸಪ್ಪ ಚಿಕ್ಕಲದಿನ್ನಿ, ಉಪ ಮಹಾಪೌರರಾದ ಮಧುಶ್ರೀ ಪೂಜಾರಿ, ಪೊಲೀಸ್ ಆಯುಕ್ತರಾದ ಡಾ.ಡಿ.ಸಿ.ರಾಜಪ್ಪ, ಮಹಾನಗರ ಪಾಲಿಕೆಯ ಆಯುಕ್ತರಾದ ಶಶಿಧರ್ ಕುರೇರ್, ಪಾಲಿಕೆ ಇಂಜನೀಯರ್‍ರಾದ ಲಕ್ಷ್ಮೀ ನಿಪ್ಪಾಣಿಕರ, ಪಾಲಿಕೆ ಸದಸ್ಯರಾದ ಅನಂತರಾವ್ ದೇಶಪಾಂಡೆ, ಬೆಳಗಾವಿ ಜಿಲ್ಲಾ ಸ್ವಾತಂತ್ರ್ಯ ಸೈನಿಕ ಹಾಗೂ ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ವಿಠ್ಠಲರಾವ್ ಯಾಳಗಿ, ಕಾರ್ಯದರ್ಶಿ ಪಿ.ಬಿ.ನಂದಿಹಳ್ಳಿ, ಉಪಾಧ್ಯಕ್ಷ ರಾಜೇಂದ್ರ ಕಲಘಟಗಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಹಾಂತೇಶ ನಗರದ ಪ್ರೌಢಶಾಲೆಯ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ನಡೆಸಿಕೊಟ್ಟರು. ಸ್ವರಾಂಜಲಿ ಸಂಗೀತ ವಿದ್ಯಾಲಯದ ಮೋರೆ ಅವರ ನೇತೃತ್ವದ ತಂಡ ಹಾಗೂ ಮರಾಠಾ ಮಹಿಳಾ ಭಜನ್ ಸಂಘದ ಸದಸ್ಯರು ಗಾಂಧೀಪ್ರಿಯ ಭಜನ್‍ಗಳನ್ನು ಪ್ರಸ್ತುತಪಡಿಸಿದರು.

News Belgaum-ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ; ಸಾಕ್ಷ್ಯಚಿತ್ರ ಪ್ರದರ್ಶನ 2ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆಯನ್ನು ಜಿಲ್ಲಾ ಪಂಚಾಯತಿಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಆಶಾ ಐಹೊಳೆ, ಉಪಾಧ್ಯಕ್ಷರಾದ ಅರುಣ ಖಟಾಂಬಳೆ,

ಸರ್ವಮಂಗಳಾ ಅರಳಿಮಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ವಿವಿಧ ಶಾಲೆಗಳ ನೂರಾರು ಮಕ್ಕಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

 

 

The post ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ; ಸಾಕ್ಷ್ಯಚಿತ್ರ ಪ್ರದರ್ಶನ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.