ಉತ್ತಮ ಸಮಾಜಕ್ಕಾಗಿ

ಗೋಗಟೆ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದವರಿಂದ ವಾರ್ಷಿಕೋತ್ಸವ- ಸಾಂಸ್ಕøತಿ ಕಾರ್ಯಕ್ರಮಗಳು

0


ಬೆಳಗಾವಿ 18- ಕರ್ನಾಟಕ ಲಾ ಸೊಸೈಟಿಯ ಗೋಗಟೆ ಕಲಾ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ವಿದ್ಯಾರ್ಥಿನಿಯರ ವಾರ್ಷಿಕೋತ್ಸವವನ್ನು ತಿಲಕವಾಡಿಯ ಶುಕ್ರವಾರ ಪೇಟೆಯಲ್ಲಿರುವ ಮಿಲೇನಿಯಮ್ ಗಾರ್ಡನ್‍ದಲ್ಲಿ ಹಮ್ಮಿಕೊಂಡಿದ್ದರು. ಮಹಾವಿದ್ಯಾಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಗುಂಪುನೃತ್ಯ, ಗುಂಪುಹಾಡುಗಾರಿಕೆ ಹೀಗೆ ವೈವಿದ್ಯಮಯ ಕಾರ್ಯಕ್ರಮಗಳನ್ನು ನೀಡಿದರು. ಸ್ವಯಂಸ್ಪೂರ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದರು.
ಪ್ರಾಂಶುಪಾಲರಾದ ಡಾ(ಶ್ರೀಮತಿ) ಎ. ಎಸ್. ಕೆರೂರ ಎಲ್ಲ ಅತಿಥಿಗಳನ್ನು, ವಿದ್ಯಾರ್ಥಿವೃಂದವನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಸ್ವಾಗತಿಸಿದರು. ಸುಮಾರು 35 ರಷ್ಟು ವೈವಿದ್ಯಮಯ ಕಾರ್ಯಕ್ರಮಗಳನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೀಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯ ಆಡಳಿತ ಮಂಡಳಿಯ ಚೇರಮನ್‍ರಾದ ವಿ. ಎಮ್. ದೇಶಪಾಂಡೆ, ಸದಸ್ಯರಾದ ಆರ್. ಎಸ್. ಮುತಾಲಿಕೆ ಮುಂತಾದವರು ಉಪಸ್ಥಿತರಿದ್ದರು

Leave A Reply

 Click this button or press Ctrl+G to toggle between Kannada and English

Your email address will not be published.