ಉತ್ತಮ ಸಮಾಜಕ್ಕಾಗಿ

ಗೋವು ಬರೀ ಪ್ರಾಣಿಯಲ್ಲ ಮಾನವ ಬದುಕಿನ ಕಾಮಧೇನು:ಚನ್ನಮಲ್ಲೇಶ್ವರ ಶ್ರೀ

0


ಬೆಳಗಾವಿ:ಶ್ರೀಕ್ಷೇತ್ರ ಮುಕ್ತಿಮಠದ ಪೀಠಾಧಿಪತಿ ಶ್ರೀ ಶಿವಸಿದ್ಧ ಸೊಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಜ್ಞಾನದ ಅಂಧಕಾರದಲ್ಲಿ ಮುಳುಗಿದ್ದ ಗ್ರಾಮಾಂತರ ಜನರನ್ನು ಸುಜ್ಞಾನದ ಬೆಳಕಿನತ್ತ ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹುಮ್ನಾಬಾದ ಇಟಗಾ ಚನ್ನಮಲ್ಲೇಶ್ವರ ಸ್ವಾಮೀಜಿ ತಿಳಿಸಿದರು.
ಮಕರ ಸಂಕ್ರಮಣದ ನಿಮಿತ್ತ ನಡೆದ ಶ್ರೀಕ್ಷೇತ್ರ ಮುಕ್ತಿಮಠದ ಜಾತ್ರಾ ಮಹೋತ್ಸವ ಕೊನೆಯ ದಿನವಾದ ಬುಧವಾರ ಭೂತರಾಮನಹಟ್ಟಿ ಗ್ರಾಮದಿಂದ ಮುಕ್ತಿಮಠದವರೆಗೆ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ಕುಂಭಮೇಳ ವಾದ್ಯದೊಂದಿಗೆ ನಡೆಯಿತು. ನಂತರ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಚನ್ನಮಲ್ಲೇಶ್ವರರು ಮಹಾಂಚಂಡಿಕಾಯಾಗ ಎನ್ನುವುದು ಲೋಕದ ಲೋಪದೋಷಗಳಿಗೆ ದೇವರೆದುರು ಪ್ರಾಯಾಶ್ಚಿತಪಟ್ಟು ಶುದ್ದೀಕರಣ ಹೊಂದುವುದಾಗಿದೆ. ಗೋಪೂಜೆ, ಸುಹಾಸಿನಿ ಪೂಜೆ, ಮಹಾಚಂಡಿಕಾಯಾಗ, ಶಿವಪಾರ್ವತಿ ಕಲ್ಯಾಣೋತ್ಸವದಂಥ ಧಾರ್ಮಿಕ ಕಾರ್ಯಕ್ರಮಗಳ ಹಿಂದೆ ಅಪಾರ ಕೃಪಾರ್ಥ ಅಡಗಿದೆ. ಸಕಲ ಮಾನವ ಉದ್ದಾರಕ್ಕೆ ಹಾಗೂ ಪ್ರಕೃತಿಯ ಸೌಮ್ಯತೆಗಾಗಿ ಯಾಗಗಳನ್ನು ಮಾಡಲಾಗುತ್ತದೆ ಎಂದರು. ಗೋವು ಎಂಬುವುದು ಬರೀ ಪ್ರಾಣಿಯಲ್ಲ ಕಾಮಧೇನುವಾಗಿ ಮಾನವನ ಬಂಧುವಾಘಿ ಅನಾದಿಕಾಲದಿಂದ ಬೆಳೆದು ಬಂದಿದೆ. ಆದ್ದರಿಂದ ಗೋವು ಹತ್ಯೆ ಅಧರ್ಮ ಎಂದು ಸಾರಲಾಗುತ್ತಿದೆ. ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದ ವತಿಯಿಂದ ಗೋ ರಕ್ಷಣೆ ಬಗ್ಗೆ ಹೋರಾಟ ತಿಳಿವಳಿಕೆಯನ್ನು ಮುಕ್ತಿಮಠ ಮಾಡುತ್ತ ಬಂದಿರುವುದು ಅಭಿನಂದನಾರ್ಹ ಎಂದರು.
ಶಿವಪಾರ್ವತಿಯರ ಕಲ್ಯಾಣೋತ್ಸವ ಸಮಾರಂಭ ಕುಂಭ ಹೊತ್ತ ನೂರಾರು ಸುಮಂಗಲೆಯರಿಂದ ನಡೆಯಿತು. ದಿವ್ಯ ಸಾನಿಧ್ಯವನ್ನು ಷ. ಬ್ರ. ಶ್ರೀ ವೈಜನಾಥ ಶಿವಾಚಾರ್ಯ ಮಹಾಸ್ವಾಮೀಜಿ ಗಂಜಿಗಟ್ಟಿ ವಹಿಸಿದ್ದರು. ಸಂಜೆ ನಡೆದ ಧರ್ಮಸಭೆಯಲ್ಲಿ ವೇದಘೋಷ, ಶ್ರೀಮಠದ ಆನೆಯಿಂದ ನಜರ್ ಸಮರ್ಪಣೆ ಹಾಗೂ ದೀಪಪ್ರಜ್ವಲನೆ ನಡೆಯಿತು. ಮಮದಾಪುರದ ಶ್ರೀ ಮೌನಮಲ್ಲಿಕಾರ್ಜುನ ಸ್ವಾಮೀಜಿ, ಪ. ಪೂ. ಚನ್ನಮಲ್ಲೇಶ್ವರ ಸ್ವಾಮೀಜಿ ಇಟಗಾ-ಹುಮ್ನಾಬಾದ, ಷ. ಬ್ರ. ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಷ.ಬ್ರ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕೊನಂದೂರು, ಬಾಲತಪಸ್ವಿ ಶ್ರೀ ಜಗದೀಶ ದೇವರು ಪುಣ್ಯಕೋಟಿಮಠ ಹರಿಹರ, ಈಶ್ವರ ಠಾಕೂರ, ಶಿವಣ್ಣ ಐನಾಪುರ, ರಾಮೇಶ್ವರ ಚಿಕಲೆ, ಜಗದೀಶ ಬೂದಿಹಾಳ ಇನ್ನಿತರರು ಭಾಗವಹಿಸಿದ್ದರು.

ಬಾಕ್ಸ್……
ಧರ್ಮಸಭೆಯಲ್ಲಿ ಶ್ರೀಕ್ಷೇತ್ರ ಮುಕ್ತಿಮಠದ ಐದು ದಿನಗಳ ಜಾತ್ರೆಗೆ ಪ್ರತಿವರ್ಷ ನೂರು ಕ್ವಿಂಟಲ್ ಅಕ್ಕಿ ದಾನ ಮಾಡುತ್ತ ಬಂದಿರುವ ಶ್ರೀಮಠದ ಭಕ್ತ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ರೈತ ಜಗದೀಶ ಬೂದಿಹಾಳ ಅವರನ್ನು ಶ್ರೀಮಠದ ಪೀಟಾಧಿಪತಿ ಷ.ಬ್ರ. ಶ್ರೀ ಶಶಿವಶಿದ್ದ ಶಿವಾಚಾರ್ಯ ಮಹಾಸ್ವಾಮೀಜಿ ಸತ್ಕರಿಸಿ ಆಶೀರ್ವದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.