ಉತ್ತಮ ಸಮಾಜಕ್ಕಾಗಿ

ಗ್ರಾಪಂಗಳಲ್ಲಿ ಪಹಣಿ ವಿತರಣೆ

0

ಗ್ರಾಪಂಗಳಲ್ಲಿ ಪಹಣಿ ವಿತರಣೆ

ಬೆಳಗಾವಿ, ಬೆಳಗಾವಿ ಜಿಲ್ಲೆಯ ಸಾರ್ವಜನಿಕರು ಮತ್ತು ರೈತಾಪಿ ವರ್ಗದ ಜನರಿಗೆ ತಿಳಿಯಪಡಿಸುವುದೇನೆಂದರೆ ಹಲವಾರು ರೈತರು ಸಾರ್ವಜನಿಕರು ಪಹಣಿಗಳನ್ನು ಪಡೆಯಲು ಕಂದಾಯ ಇಲಾಖೆಯ ಭೂಮಿ ಕಿಯಾಸ್ಕ ಕೇಂದ್ರಗಳಲ್ಲಿ, ಅಟಲಜೀ ನಾಡಕಚೇರಿಗಳಲ್ಲಿ ದಿನಪ್ರತಿ ಸರದಿ ಸಾಲಿನಲ್ಲಿ ನಿಲ್ಲುವುದು ಕಂಡು ಬಂದಿರುತ್ತದೆ.

ನಾಡಕಚೇರಿಗಳಿಗೆ ಮತ್ತು ಭೂಮಿ ಕಿಯಾಸ್ಕ ಕೇಂದ್ರಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವು ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಪಹಣಿ ಪತ್ರಿಕೆಗಳನ್ನು ವಿತರಿಸಲು ಈಗಾಗಲೇ ಅವಕಾಶವನ್ನು ಕಲ್ಪಿಸಿರುತ್ತದೆ. ಅದರಂತೆ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ, ಗ್ರಾಮ ಪಂಚಾಯತಿಗಳಲ್ಲಿ ಪಹಣಿ ಪತ್ರಿಕೆಗಳನ್ನು ವಿತರಿಸಲು ನಿರ್ದೇಶನಗಳನ್ನು ನೀಡಿ ಪಹಣಿ ಪತ್ರಗಳನ್ನು ವಿತರಿಸಲಾಗುತ್ತಿದೆ.
ಇಲಾಖೆಯ ಅಧಿಕೃತ ಅಂತರ್ಜಾಲ ತಾಣವಾದ http://landrecords.karnataka.gov.inನಿಂದ ಸಹ ಪಹಣಿ ಪತ್ರಗಳನ್ನು ಡೌನಲೋಡ ಮಾಡಿಕೊಂಡು ಸರ್ಕಾರವು ನಿಗಧಿಪಡಿಸಿದ ಶುಲ್ಕವನ್ನು ಇ-ಪಾವತಿ ಮುಖಾಂತರ ಸಂದಾಯ ಮಾಡುವ ಮೂಲಕ ಎಲ್ಲ ಸಾರ್ವಜನಿಕರು ರೈತರು ತಮ್ಮ ಮನೆಯಲ್ಲಿಯೂ ಸಹ ಪಹಣಿ ಪತ್ರಿಕೆಗಳನ್ನು ಪಡೆಯಲು ಸರ್ಕಾರವು ಈಗಾಗಲೇ ಅವಕಾಶವನ್ನು ಕಲ್ಪಿಸಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ಗ್ರಾಪಂಗಳಲ್ಲಿ ಪಹಣಿ ವಿತರಣೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.