ಉತ್ತಮ ಸಮಾಜಕ್ಕಾಗಿ

ಚಾಕಲೇಟ್ ಕೊಟ್ಟು 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ

0

ಚಾಕಲೇಟ್ ಕೊಟ್ಟು 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ರಾಷ್ಟ್ರೀಯ ಸುದ್ದಿ : ಐದು ವರ್ಷದ ಯುಕೆಜಿ ಬಾಲಕಿಗೆ ಚಾಕ್ಲೇಟ್ ಆಸೆ ತೋರಿಸಿ ಶಾಲಾ ಸಿಬ್ಬಂದಿ , ಶಾಲಾ ಆವರಣದಲ್ಲಿ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ನಡೆದಿದೆ.

National News Kannada

ಹೈದರಾಬಾದ್ : ಚಾಕ್ಲೇಟ್ ಕೊಡುವುದಾಗಿ ಆಸೆ ಮೂಡಿಸಿ, ಐದು ವರ್ಷದ ವಿದ್ಯಾರ್ಥಿನಿ ಮೇಲೆ ಶಾಲೆ ಆವರಣದಲ್ಲಿಯೇ ಅತ್ಯಾಚಾರ ಎಸಗಿರುವ ಧಾರುಣ ಘಟನೆ ಹೈದರಾಬಾದ್‍ ಆಲ್ಲಿ ನಡೆದಿದೆ.

ಶನಿವಾರ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಸಂತ್ರಸ್ತ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ >>>ಅಂಕಲ್ ಆಪಿಸ್ ಗೆ ಆಂಟಿ ಟಾಕಿಸ್ ಗೆ, ಇಲ್ಲಿದೆ ರಿಯಲ್ ಕಹಾನಿ

“ಚಾಕ್ಲೇಟ್ ನೀಡುತ್ತೇನೆ ಎಂದು ಹೇಳಿ ನಮ್ಮ ಮಗಳನ್ನು ಶಾಲೆಯ ಸಿಬ್ಬಂದಿಯೊಬ್ಬ ಕರೆದುಕೊಂಡು ಹೋಗಿ,  ಬಳಿಕ ಶಾಲಾ ಆವರಣದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ” ಎಂದು ದೂರಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಏತನ್ಮಧ್ಯೆ, ಆಕ್ರೋಶಿತ ಸ್ಥಳೀಯರು ಶಾಲೆಗೆ ನುಗ್ಗಿ, ಪೀಠೋಪಕರಣ ಮತ್ತು ವಿವಿಧ ವಸ್ತುಗಳನ್ನು ದ್ವಂಸಗೊಳಿಸಿದ್ದಾರೆ.

ಗಲಾಟೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಇದನ್ನೂ ಓದಿ >>>ವೈದ್ಯನ ಪತ್ನಿ ಆತ್ಮಹತ್ಯೆ ಹಿಂದೆ ಕಳ್ಳತನದ ಶಂಕೆ

ಇನ್ನು ಶಂಕಿತನನ್ನು ಪೊಲೀಸರು ಬಂದಿಸಿದ್ದಾರೆ ಮತ್ತು ಮತ್ತಷ್ಟು ತನಿಖೆ ನಡೆಯುತ್ತಿದೆ.

ಸಂತ್ರಸ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕುರಿತು ಪೋಕ್ಸೋ ಕಾಯ್ದೆ ಅಡಿ ಗೋಲ್ಕೊಂಡಾ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಮತ್ತು ಪಿಒಸಿಎಸ್ಒ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆಯ ಸಂಬಂಧಿತ ವಿಭಾಗಗಳಲ್ಲಿ ಪ್ರಕರಣ ದಾಖಲಾಗಿದೆ. ///

WebTitle : ಚಾಕಲೇಟ್ ಕೊಟ್ಟು 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ – five-year-old girl was raped inside her school premises by staffer

>>> ಹೆಚ್ಚಿನ ಕ್ರೈಂ ನ್ಯೂಸ್ ಗೆ  ಕ್ಲಿಕ್ಕಿಸಿ : Kannada Crime News | Karnataka Crime News

Hyderabad Police | Hyderabad Crime | ಆಂದ್ರಪ್ರದೇಶ | ಕ್ರೈಂ ಸ್ಟೋರಿ | ಕನ್ನಡ ನ್ಯೂಸ್

Kannada Crime News

Kannada News

The post ಚಾಕಲೇಟ್ ಕೊಟ್ಟು 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ appeared first on News Belgaum.

Source link

ಚಾಕಲೇಟ್ ಕೊಟ್ಟು 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ

Leave A Reply

 Click this button or press Ctrl+G to toggle between Kannada and English

Your email address will not be published.