ಉತ್ತಮ ಸಮಾಜಕ್ಕಾಗಿ

ಚಿನ್ನದ ಪದಕ ಗೆದ್ದ ಜಿ.ಶಾಲಿನಿ – ಶಾಸಕ ಬಿ.ಶಿವಣ್ಣರವರಿಂದ ಅಭಿನಂದನೆ

0

 ಚಿನ್ನದ ಪದಕ ಗೆದ್ದ ಜಿ.ಶಾಲಿನಿ – ಶಾಸಕ ಬಿ.ಶಿವಣ್ಣರವರಿಂದ ಅಭಿನಂದನೆ

ತಾಲ್ಲೂಕಿನ ಇಗ್ಗಲೂರಿನ ಸರ್ಕಾರಿ ಶಾಲೆಯಲ್ಲಿ ಆಯೋಜನೆ ಕಾರ್ಯಕ್ರಮದಲ್ಲಿ ಏಪ್ಯನ್ ಬೆಂಚ್ ಪ್ರೆಸ್ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಜಿ.ಶಾಲಿನಿ ಹಾಗೂ ಅವರ ತಂದೆ-ತಾಯಿಗಳಾದ ಗುರುಮೂರ್ತಿ ಹಾಗೂ ವನಜಾಕ್ಷಿ ಅವರನ್ನುಶಾಸಕ ಬಿ.ಶಿವಣ್ಣಮತ್ತು ಎಸ್‌ಡಿಎಂಸಿ ಅದ್ಯಕ್ಷ ಬಾಲರಾಜು ನೇತೃತ್ವದಲ್ಲಿ ಅಭಿನಂಧಿಸಲಾಯಿತು.

ನೇಕಲ್: ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಪೋತ್ಸಾಹಿಸುವಂತಹ ಕೆಲಸ ದೈಹಿಕ ಶಿಕ್ಷಕರು ಮಾಡಿದರೆ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಚಂದಾಪುರ ಪುರಸಭಾ ಅಧ್ಯಕ್ಷ ವಿ.ಶ್ರೀನಿವಾಸ್ ತಿಳಿಸಿದರು.
ಅವರು ತಾಲ್ಲೂಕು ಇಗ್ಗಲೂರಿನ ಸರ್ಕಾರಿ ಶಾಲೆಯಲ್ಲಿ ಆಯೋಜನೆ ಮಾಡಿದ ಅಭಿನಂದನೆ ಕಾರ್ಯಕ್ರಮದಲ್ಲಿ ದುಬೈನಲ್ಲಿ ನಡೆದ ಏಪ್ಯನ್ ಬೆಂಚ್ ಪ್ರೆಸ್ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಗಡಿಗ್ರಾಮ ಸೋಲೂರಿನ ಜಿ,ಶಾಲಿನಿ ಅವರನ್ನು ಸನ್ಮಾನಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಹುಡಗಿಯ ಸಾಧನೆಯನ್ನು ಗುರ್ತಿಸುವ ಕೆಲಸ ಮಾಡಲಾಗಿದೆ ಅದಕ್ಕಾಗಿ ಕ್ರೀಡೆಯನ್ನು ಪೋತ್ಸಾಹಿಸಲು ಪುರಸಭಾ ವತಿಯಿಂದ ಚಿನ್ನದ ಪದಕ ಗೆದ್ದ ಜಿ.ಶಾಲಿನಿ ರವರಿಗೆ ೧.೫ ಲಕ್ಷ ಪೋತ್ಸಾಹಧನವನ್ನು ನೀಡಲಾಗುವುದು ಎಂದು ತಿಳಿಸಿದರು.
ಇಗ್ಗಲೂರು ಸರ್ಕಾರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಾಲರಾಜು ಮಾತನಾಡಿ ಏಪ್ಯನ್ ಬೆಂಚ್ ಪ್ರೆಸ್ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ನಮ್ಮ ಊರಿನ ಪ್ರತಿಭೆಯನ್ನು ನಾವು ಗುರ್ತಿಸುವುದು ನಮ್ಮ ಕೆಲಸ ಹಾಗಾಗಿ ಶಾಲೆಯಲ್ಲಿ ಅಭಿನಂದನೆ ಕಾರ್ಯಕ್ರಮ ಮಾಡುತ್ತಿರುವುದು ಉತ್ತಮ ಕೆಲಸ.
ಗ್ರಾಮೀಣ ಭಾಗದ ಮಕ್ಕಳ ಕ್ರೀಡೆಗೆ ಹೆಚ್ಚು ಸಹಕಾರ ದೊರೆಯುವುದಿಲ್ಲ ಇಂತಹ ಸಂದರ್ಭದಲ್ಲಿ ಬಡ ಕುಟುಂಬದಿಂದ ಬಂದು ಕ್ರೀಡೆಯಲ್ಲಿ ಸಾಧನೆ ಮಾಡುವುದು ದೊಡ್ಡ ಸಾಧನೆ ಎಂದು ಹೇಳಬಹುದು.
ಇಂತಹ ಪ್ರತಿಭೆಗಳು ದೇಶ ಹಾಗೂ ತಾಲ್ಲೂಕಿನ ಕೀರ್ತಿಗೆ ಕಳಸಪ್ರಯವಾಗಿದೆ ಜಿ,ಶಾಲಿನಿ ಸಾಧನೆಗೆ ತಂದೆ-ತಾಯಿಗಳ ಶ್ರಮ ಹಾಗೂ ದೈಹಿಕ ಶಿಕ್ಷಕರ ಮಾರ್ಗದರ್ಶನ ಮತ್ತು ಬಾಲಕಿಯ ಕಠಿಣ ಪರಿಶ್ರಮದ ಫಲವಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತು.

ಕ್ರೀಡೆಯನ್ನು ಬೆಳೆಸಿ ಉಳಿಸಲು ಸರ್ಕಾರ ವತಿಯಿಂದ ಸಹಾಕರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ಮಾತನಾಡಿ ಶಿಕ್ಷಣಕ್ಕಿಂತ ದೈಹಿಕ ಶಿಕ್ಷಣಕ್ಕೆ ಹೆಚ್ಚು ಅಧ್ಯತೆ ನೀಡಿದರೆ ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಭಾಗವಾಹಿಸಿ ಉತ್ತಮ ಸಾಧನೆ ಮಾಡಲು ಅವಕಾಶ ಇದೆ,
ಹಾಗಾಗಿ ದೈಹಿಕ ಶಿಕ್ಷಕರು ಮಕ್ಕಳ ಚಿಕ್ಕ ವಯಸ್ಸಿನಲ್ಲಿಯೇ ಕ್ರೀಡೆಯಲ್ಲಿ ತೋಡಗಿಸುವಂತೆ ಮಾಡಿದರೆ ರಾಷ್ಟ್ರ ಮತ್ತು ಅಂತರ್ ರಾಷ್ಟ್ರ ಮಟ್ಟದ ಓಲಂಪಿಕ್‌ನಲ್ಲಿ ಭಾಗವಾಹಿಸಿ ಉತ್ತಮ ಸಾಧನೆ ಮಾಡಲು ಸಹಾಯವಾಗುತ್ತದೆ,
ಹಾಗೂ ಶಾಲಿನಿಗೆ ಇಲಾಖೆ ವತಿಯಿಂದ ಎಲ್ಲ ರೀತಿ ಸಹಕಾರ ಮಾಡಲಾಗುವುದು ಎಂದರು, ಏಪ್ಯನ್ ಬೆಂಚ್ ಪ್ರೆಸ್ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ವಿಜೇತೆ ಜಿ.ಶಾಲಿನಿ ಮಾತನಾಡಿ ನಾನು ಬಡ ಕುಟುಂಬದಿಂದ ಹಿನ್ನೆಲೆಯಿಂದ ಬಂದ ನಾನು ನನ್ನ ಸಾಧನೆಗೆ ತಂದೆ ತಾಯಿಗಳ ಕಾರಣವಾಗಿದೆ.
ಶಿಕ್ಷಣದಷ್ಟೆ ಕ್ರೀಡೆಗೆ ಹೆಚ್ಚು ಒತ್ತು ನೀಡಿದರೆ ಉತ್ತಮ ಅವಕಾಶಗಳು ಇವೆ ಹಾಗೂ ಕ್ರೀಡೆಯಲ್ಲಿ ಪ್ರತಿ ದಿನ ಅಭ್ಯಾಸ ಮಾಡಿದರೆ ಸಾಧನೆ ಮಾಡಬಹುದು ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಓಲಂಪಿಕ್‌ನಲ್ಲಿ ಉತ್ತಮ ಸಾಧನೆ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಸುಧಾಕರ್, ಸದಸ್ಯರಾದ ಇಗ್ಗಲೂರು ಮುನಿರಾಜು, ರಾಷ್ಟ್ರ ಪ್ರಶಸ್ತಿ ವಿಜೇತೆ ನಾಗವೇಣಿ, ಮುಖ್ಯಾಧಿಕಾರಿ ಎಜಾಜ್ ಪಾಷ, ಶಿಕ್ಷಣ ಸಂಪನ್ಮೂಲ ವ್ಯಕ್ತಿ ಜಿ.ಎಂ.ಆರ್,ಮುನಿರಾಜು, ದೈಹಿಕ ಶಿಕ್ಷಣಾಧಿಕಾರಿ ಡಿ.ಎನ್, ವೀರಭದ್ರಪ್ಪ, ಮುಂತಾದವರು ಹಾಜರಿದ್ದರು////

The post ಚಿನ್ನದ ಪದಕ ಗೆದ್ದ ಜಿ.ಶಾಲಿನಿ – ಶಾಸಕ ಬಿ.ಶಿವಣ್ಣರವರಿಂದ ಅಭಿನಂದನೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.