ಉತ್ತಮ ಸಮಾಜಕ್ಕಾಗಿ

ಚುನಾವಣೆ ಮೇ 12 ರಂದು ಏಕಹಂತದಲ್ಲಿ ನಡೆಯಲಿದ್ದು, ಮ ೇ 15ರಂದು ಫಲಿತಾಂಶ

0

ಬೆಳಗಾವಿ:ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12 ರಂದು ಏಕಹಂತದಲ್ಲಿ ನಡೆಯಲಿದ್ದು, ಮೇ 15ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಅವರು ಮಂಗಳವಾರ ದಂದು ನವದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಘೋಷಿಸುತ್ತಿದ್ದಂತೆ ಬೆಳಗಾವಿ ಜಿಲ್ಲಾಧಿಕಾರಿಗಳು ಮದ್ಯಾಹ್ನ ಜಿಲ್ಲಾದಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಜಿಲ್ಲೆಯಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಹಾಗೂ ಮುಖ್ಯ ಚುನಾವಣಾ ಆಯೋಗದಿಂದ ಬಂದಂತದ ನಿರ್ದೇಶನಗಳ ಬಗ್ಗೆ ಮಾಹಿತಿ ನೀಡಿದರು.

ನಾಮಪತ್ರ ಸಲ್ಲಿಕೆಗೆ ಕಡೆಯ ದಿನ – ಏಪ್ರಿಲ್ 24, ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಏಪ್ರಿಲ್ 27, ಮತದಾನ – ಮೇ 12, ಮತ ಎಣಿಕೆ ಫಲಿತಾಂಶ- ಮೇ 18 ರಂದು ನಿಗದಿಪಡಿಸಲಾಗಿದ್ದು ಮತದಾನದ ಅವಧಿ- ಬೆಳಗ್ಗೆ 8ರಿಂದ ಸಂಜೆ 5 ಯವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 4404 ಭೂತಗಳನ್ನು ನಿಗದಿಪಡಿಸಲಾಗಿದ್ದು, ಪ್ರತಿ ಕ್ಷೇತ್ರಗಳಿಗೆ ಒಬ್ಬರಂತೆ ಮಾಡಲ್ ಕೊಡ ಆಪ್ ನೂಡಲ್ ಆಫೀಸರ್ ಗಳನ್ನು ನೇಮಕ ಮಾಡಲಾಗಿದೆ, ಜಿಲ್ಲೆಯಲ್ಲಿ 3657541 ಜನರು ಮತದಾರರ ಪಟ್ಟಿಯಲ್ಲಿದ್ದು ಅವರಿಗೆ ಮತ ಚಲಾಯಿಸಲು ಯಾವುದೆ ತೊಂದರೆ ಉಂಟಾಗದಂತೆ ಕುಡಿಯುವ ನೀರು ಸೇರಿದಂತೆ ‌ಇನ್ನಿತರ ಮೂಲ ಸೌಕರ್ಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.ಇನ್ನು ಚುನಾವಣಾ ಸಂದರ್ಭದಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ಜಿಲ್ಲೆಯ ಗಡಿ ಪ್ರದೇಶದಲ್ಲಿ ಚೆಕ್ ಪೊಸ್ಟಗಳನ್ನು ತೆರೆಯಲಾಗುವುದು ಎಂದು‌ ಮಾಹಿತಿ ನೀಡಿದರು.

ಅದಲ್ಲದೆ ನೀತಿ ಸಂಹಿತೆಯಲ್ಲಿ ಸಾರ್ವಜನಿಕರು ಯಾವುದೇ ಕಾರ್ಯಕ್ರಮ ಹಾಗೂ ಇನ್ನಿತರ ಜಾತ್ರೆಗಳನ್ನು ನಡೆಸಬೇಕಾದರೆ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆಯ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವೆಂದು ತಿಳಿಸಿದ‌ ಜಿಲ್ಲಾಧಿಕಾರಿಗಳು ಯಾವುದೆ ನಗದು ವ್ಯವಹಾರ ನಡೆಸಬೇಕೆಂದರೆ ಗರಿಷ್ಠ 50 ಸಾವಿರ ರೂಪಾಯಿ ವರೆಗೂ ವ್ಯವಹಾರ ನಡೆಸಬಹುದೆಂದರು.

ಅಬ್ಬರ ಪ್ರಚಾರಕ್ಕೆ ಕಡಿವಾಣ: ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಮುದ್ರಣ, ವಿದ್ಯುನ್ಮಾನ ಮಾಧ್ಯಮದಲ್ಲಿ ಜಾಹಿರಾತು ನೀಡಬಯಸಿದರೆ ಜಿಲ್ಲಾಡಳಿತ ವತಿಯಿಂದ ಅನುಮತಿ ಪಡೆದುಕೊಳ್ಳಬೇಕು ಅದಲ್ಲದೆ‌ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅನುಮತಿ ಪಡೆಯದೆ ಪ್ರಚಾರ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು

ಮತದಾನಕ್ಕೆ ಇವಿಎಂ ಹಾಗೂ ವಿವಿ- ಪ್ಯಾಟ್ ಮಶಿನ್ ಬಳಕೆ: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಸಲು ಇವಿಎಂ ಮಶಿನ್ ಹಾಗೂ ವಿವಿ- ಪ್ಯಾಟ್ ಮಶಿನ್ ಬಳಕೆ ಮಾಡಲಾಗುವುದು ಇದರಿಂದ ಮತದಾರರಿಗೆ ಪಾರದರ್ಶಕ ಮಾಹಿತಿ ದೊರೆಯಲಿದೆ‌ ಎಂದು ತಿಳಿಸಿದರು

Leave A Reply

 Click this button or press Ctrl+G to toggle between Kannada and English

Your email address will not be published.