ಉತ್ತಮ ಸಮಾಜಕ್ಕಾಗಿ

ಜನರ ಪ್ರೀತಿಯ ಋಣ ತೀರಿಸಲು ಶ್ರಮಿಸುವೆ: ಮುಖ್ಯ ಮಂತ್ರಿ ಕುಮಾರಸ್ವಾಮಿ

0

I will strive to repay the love of people-Chief Minister Kumaraswamy

ಜನರ ಪ್ರೀತಿಯ ಋಣ ತೀರಿಸಲು ಶ್ರಮಿಸುವೆ: ಮುಖ್ಯ ಮಂತ್ರಿ ಕುಮಾರಸ್ವಾಮಿ

ಹಾಸನ  :ಜನರ ಅಶೀರ್ವಾದದಿಂದ ಮುಖ್ಯಮಂತ್ರಿಯಾಗಿದ್ದೇನೆ ಬಡವರು, ದೀನದಲಿತರು, ರೈತರು, ವಿಕಲಚೇತನರ ಋಣ ತೀರಿಸಿಯೇ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ತೋಟಿ ಹಿರಿಸಾವೆಯಲ್ಲಿ ಕಾವೇರಿ ನೀರಾವರಿ ನಿಗಮದವತಿಯಿಂದ ವಿವಿಧ ನೀರಾವರಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ತಮಗೆ ದೊರೆತಿರುವ ಅಧಿಕಾರದಲ್ಲ್ಲಿ ಈ ನಾಡಿನ ಯುವಕರು ತಾಯಂದಿರು ಜನ ಸಾಮಾನ್ಯರ ಕಣ್ಣಿರು ಒರಸಿ ಅವರ ಶ್ರೇಯೋಭಿವೃದ್ದಿ ಮಾಡಲು ಪಣತೊಟ್ಟಿದ್ದು, ಅದನ್ನು ಮಾಡಿಯೇ ತೀರುತ್ತೇನೆ ಎಂದು ಮುಖ್ಯ ಮಂತ್ರಿ ಹೇಳಿದರು.

ರಾಜ್ಯದಲ್ಲಿ ರೈತರ 40 ಸಾವಿರ ಕೋಟಿಗೂ ಅಧಿಕ ಸುಸ್ತಿ ಹಾಗೂ ಚಾಲ್ತಿ ಸಾಲವನ್ನು ಮನ್ನಾ ಮಾಡಲಾಗಿದೆ. ಸಹಕಾರ ಸಂಘಗಳಲ್ಲಿ ಕೃಷಿಕರು ಮಾಡಿದ್ದ 10,430 ಕೋಟಿ ರೂಪಾಯಿ ಚಾಲ್ತಿ ಸಾಲದಲ್ಲಿ 9450 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ. ಚನ್ನರಾಯಪಟ್ಟಣ ತಾಲ್ಲೂಕು ಒಂದರಲ್ಲೇ 170 ಕೋಟಿ ರೂಪಾಯಿ ಸಾಲ ಮನ್ನಾ ಆಗಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಮಾಡಿದ್ದ 30 ಸಾವಿರ ಕೋಟಿ ರೂಪಾಯಿ ಸುಸ್ತಿ ಸಾಲ ಮನ್ನಾ ಘೋಷಣೆ ಮಾಡಲಾಗಿದ್ದು, ದೇಶದ ಇತಿಹಾಸದಲ್ಲೇ ಇಂತಹ ನಿರ್ಧಾರವನ್ನು ಯಾರು ಮಾಡಿಲ್ಲ ಇದೇ ಮೊದಲು ಈಗಾಗಲೇ ರಾಷ್ಟ್ರೀಯ ಬ್ಯಾಂಕ್‍ಗಳ ಮುಖ್ಯಸ್ಥರಿಗೆ ತಮ್ಮ ರೈತರು ಮಾಡಿರುವ ಸಾಲದ ವಿವರ ನೀಡುವಂತೆ ಸೂಚಿಸಲಾಗಿದೆ. ನಾಲ್ಕು ಹಂತಗಳಲ್ಲಿ ಇದನ್ನು ತೀರಿಸಿಕೊಡುವುದಾಗಿ ತಿಳಿಸಲಾಗಿತ್ತು ಆದರೆ ಈ ವರ್ಷವೇ ಅಷ್ಟೂ ಹಣವನ್ನು ಬ್ಯಾಂಕ್‍ಗಳಿಗೆ ಕಟ್ಟಿ ಕೊಡಲು ಈಗಾಗಲೇ ನಿರ್ಧಾರ ಕೈಗೊಂಡಿದ್ದು ಅದಕ್ಕೆ ಅಗತ್ಯವಿರುವ ಹಣವನ್ನು ಹೊಂದಿಸಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ಹಾನಿಗೀಡಾದ ತೆಂಗಿನ ಬೆಳೆ ಎಕರೆಗೆ 20 ಸಾವಿರ ರೂಪಾಯಿ ಪರಿಹಾರ ನೀಡಲಾಗಿದ್ದು, ದೇಶದ ಇತಿಹಾಸದಲ್ಲಿ ಇಷ್ಟು ಪ್ರಮಾಣದಲ್ಲಿ ಪರಿಹಾರ ನೀಡಿರುವುದು ಇದೇ ಮೊದಲು ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯದಲ್ಲಿನ ವೃದ್ದರಿಗೆ ಮಾಸಿಕ 6 ಸಾವಿರ ರೂಪಾಯಿ ಪಿಂಚಣಿ ನೀಡುವುದಾಗಿ ಭರವಸೆ ನೀಡಿದ್ದು, ಹಾಲಿ 600 ರೂಗಳಿಂದ ಒಂದು ಸಾವಿರ ರೂಗಳಿಗೆ ಏರಿಕೆ ಮಾಡಿದ್ದು ಮುಂದಿನ ನಾಲ್ಕು ವರ್ಷಗಳಲ್ಲಿ ಅದನ್ನು 6 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗುವುದು ಎಂದರು.
ಈ ನಾಡಿನ ಬಡವ, ಬಲ್ಲಿದ, ದೀನ ದಲಿತರು, ತಾಯಂದಿರು, ವಿಕಲಚೇತನರ ಆಶೀರ್ವಾದ ಇರುವವರೆಗೆ ತಮ್ಮ ಸರ್ಕಾರವನ್ನು ಯಾರು ಏನು ಮಾಡಲಾಗದು ಎಂದು ಮುಖ್ಯ ಮಂತ್ರಿಯವರು ತಿಳಿಸಿದರು.

ಮುಂದಿನ ದಸರಾ ಒಳಗಡೆ ಜಿಲ್ಲೆಯಲ್ಲಿ 20 ಕೋಟಿ ಬಂಡವಾಳ ಹೂಡಿಕೆ ಮಾಡುವ ಯೋಜನೆಯನ್ನ ರೂಪಿಸಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಸದ್ಯದಲ್ಲಿಯೇ ಹಾಸನ ಜಿಲ್ಲೆಗೆ ಬೃಹತ್ ಬಂಡವಾಳ ಹೂಡಿಕೆ ಮಾಡುವ ಚಿಂತನೆ ಮಾಡಿದ್ದೇನೆ. ಇದರಿಂದ ಸುಮಾರು 10 ಸಾವಿರ ಮಂದಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ಯೋಜನೆ ಇದಾಗಿದೆ. ಈ ಮೂಲಕ ನಿರುದ್ಯೋಗಿ ಯುವಜನತೆಗೆ ಸ್ಫೂರ್ತಿ ತುಂಬಿದರು. ಇಂತಹ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಗುಲ್ಬರ್ಗ, ರಾಯಚೂರು, ಧಾರವಾಡಗಳಲ್ಲಿ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.

ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಸೂಚಿಸಿದ್ದು, ವರದಿ ಬಂದ ಬಳಿಕ ಮುಂದಿನ ದಿನಗಳಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದೇನೆ. ರಾಜ್ಯದ ಜನತೆಗೆ ನಾನು ಒಂದು ಮನವಿ ಮಾಡುತ್ತೇನೆ. ನಮ್ಮ ಸರ್ಕಾರದ ಮೇಲೆ ವಿಶ್ವಾಸವನ್ನು ಇಡಿ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಕೆಲಸವನ್ನು ಮಾಡುತ್ತೇವೆ ಎಂದರು.

ಇದಕ್ಕೂ ಮೊದಲು ಮಾತನಾಡಿದ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಇದು ನನ್ನ ಜೀವನದಲ್ಲಿ ಸುದಿನ. ನಾನು ಎರಡು ಬಾರಿ ಚುನಾವಣೆಯಲ್ಲಿ ಗೆದ್ದಾಗಲೂ ಕೂಡ ಇಷ್ಟೊಂದು ಸಂಭ್ರಮಿಸಿರಲಿಲ್ಲ ಕಳೆದ 20 ವರ್ಷಗಳಿಂದ ನೆನೆ ಗುದಿಗೆ ಬಿದ್ದಂತಹ ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ. ಚನ್ನರಾಯಪಟ್ಟಣದ ಅಮಾನಿಕೆರೆ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಮಂಗಳೂರಿನ ಓಶಿಯನ್ ಕಂಪನಿಯ ಮೂಲಕ ತ್ವರಿತಗತಿಯಲ್ಲಿ ಒಂದು ವರ್ಷದೊಳಗೆ ಪೂರ್ಣಗೊಳಿಸುವ ಕಾರ್ಯ ಮಾಡಲಾಗುವುದು ಇದರಿಂದ ತೋಟಿ ಭಾಗದ ಸುಮಾರು 26 ಕೆರೆಗಳಿಗೆ ಜೀವ ಸೆಲೆ ಬರುತ್ತದೆ ರೈತರ ಸಂಕಷ್ಟಗಳು ಕೂಡ ಬಗೆಹರಿಯುತ್ತದೆ ಹಾಗಾಗಿ ಇಂತಹ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಜೊತೆ ನಾನು ಭಾಗವಹಿಸಿರುವುದು ತುಂಬಾ ಖುಷಿಯಾಗುತ್ತಿದೆ ಎಂದರು.

ಬಾಗೂರು ನವಿಲೆ ಸುರಂಗ ಒಡಲನ್ನ ಬಗೆದು ತುಮಕೂರು ಭಾಗಗಳಿಗೆ ನೀರನ್ನು ನೀಡಿದ್ದೇವೆ ಅದೇ ರೀತಿ ಬಾಗೂರು ನವಿಲೆ ಸುರಂಗದ ನಿರ್ಗಮನದಿಂದ ನೀರನ್ನು ಏತ ನೀರಾವರಿ ಮೂಲಕ ಕುಡಿಯುವ ನೀರಿಗಾಗಿ ಚನ್ನರಾಯಪಟ್ಟಣ ತಾಲೂಕಿನ ಹಾಗೂ ಸುತ್ತಮುತ್ತಲಿನ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೂಡ ಮಾಡಲಾಗುವುದು ಎಂದರು.

ಲೋಕೋಪಯೋಗಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ.ರೇವಣ್ಣ, ಶಾಸಕರುಗಳಾದ ಸಿ.ಎನ್.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ, ಬಂಡೆಪ್ಪ ಕಾಶೇಂಪುರ್, ವಿಧಾನ ಪರಿಷತ್ ಶಾಸಕರಾದ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಜಿಲ್ಲಾಧಿಕಾರಿ ರೋಹಿಣಿ ಸಿಂದೂರಿ, ಮತ್ತಿತರರು ಉಪಸ್ಥಿತರಿದ್ದರು .////

The post ಜನರ ಪ್ರೀತಿಯ ಋಣ ತೀರಿಸಲು ಶ್ರಮಿಸುವೆ: ಮುಖ್ಯ ಮಂತ್ರಿ ಕುಮಾರಸ್ವಾಮಿ appeared first on Prajaa News.

Source link

ಜನರ ಪ್ರೀತಿಯ ಋಣ ತೀರಿಸಲು ಶ್ರಮಿಸುವೆ: ಮುಖ್ಯ ಮಂತ್ರಿ ಕುಮಾರಸ್ವಾಮಿ

Leave A Reply

 Click this button or press Ctrl+G to toggle between Kannada and English

Your email address will not be published.