ಉತ್ತಮ ಸಮಾಜಕ್ಕಾಗಿ

ಜಿಲ್ಲಾ ಪ್ರಣಾಳಿಕೆ ಮೂಲಕ ಜನರಿಗೆ ಹೊಸ ಆಸೆ ಹುಟ್ಟಿಸಿದ BJP

0

ಬೆಳಗಾವಿ (Tarun Kranti): ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ದಿಸೆಯಲ್ಲಿ ಎಲ್ಲ ಪ್ರಯತ್ನ ನಡೆದಿದೆ. ಪ್ರಧಾನಿ ಮೋದಿ ಆಗಮನದಿಂದ ಬಿಜೆಪಿ ಹೆಚ್ಚು ಶಕ್ತಿ ಪಡೆದಿದೆ. ಸುದ್ದಿಗೋಷ್ಠಿಯಲ್ಲಿ ಇಂದು ಸಂಸದ ಸುರೇಶ್ ಅಂಗಡಿ ಮಾತನಾಡಿ ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ. ಜನ ಮತ್ತು ರೈತವರ್ಗ ಸಂಕಷ್ಟಕ್ಕೆ ಈಡಾಗಿದ್ದಾರೆ, ಕಾಂಗ್ರೆಸ್ ದುರಾಡಳಿತದ ಅವಧಿಯಲ್ಲಿ ರೈತರಿಗೆ ಇನ್ನೂ ವಿಮೆ ಹಣ ಸಿಕ್ಕಿಲ್ಲ.

ಜಿಲ್ಲೆಯ ಸಹಕಾರ ಸಚಿವ ರಮೇಶ ಜಾರಕಿಹೊಳಿ ಮತ್ತು ಮುಖ್ಯಮಂತ್ರಿ ಇಬ್ಬರೂ ರೈತರನ್ನು ತುಚರಛವಾಗಿ ಕಾಣುತ್ತಿದ್ದಾರೆ. ರೈತರ ಬಂಧು, ಸಮಾಜ ಚಿಂತಕ ಎಂದು ಸಿದ್ದರಾಮಯ್ಯ ಅವರ ಬಗ್ಗೆ ನಮ್ಮ ನಂಬಿಕೆ ಇತ್ತು. ಆದರೆ ಅವರು ವಿಫಲ ಆಡಳಿತ ನಡೆಸಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆಗೆ ಅಗತ್ಯವಾಗಿ ಆಗಬೇಕಾದ ಕೆಲಸಗಳ ಬಗ್ಗೆ ಈಗ ಬಿಜೆಪಿ ಪ್ರಣಾಳಿಕೆ(Manifesto) ತಯಾರಿಸಲಾಗಿದೆ ಎಂದರು. ಅದರ ಅಂಶಗಳ ಪ್ರಕಾರ ಬೆಳಗಾವಿಗೆ ಸರಕು ಸಾಗಾಣೆ ವಿಮಾನ, ಸುವರ್ಣಸೌಧಕ್ಕೆ ಎಲ್ಲ ಸಚಿವಾಲಯದ ಉಪಕಚೇರಿ, ತಾಲೂಕಿಗೊಂದು ಸೋಲಾರ್ ಹಬ್ ನಿರ್ಮಾಣ, ಬೆಲ್ಲ ಸಂಶೋಧನಾ ಕೇಂದ್ರ, ಬೆಲ್ಲ ತಯಾರಿಕೆಗೆ ಮುಕ್ತ ಪರವಾಣಗಿ, ಕಳಸಾ-ಬಂಡೂರಿ ಮತ್ತು ಮಹಾದಾಯಿ-ಮಲಪ್ರಭಾ ಜೋಡನೆ, ಪ್ರವಾಸಿ ತಾಣಗಳ ಮೂಲಭೂತ ಸೌಕರ್ಯ ಅಭಿವೃದ್ಧಿ, ಪ್ರತಿ ಗ್ರಾಪಂ.

ವ್ಯಾಪ್ತಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ, ತಾಲೂಕುಗೊಂದು ಆಹಾರ ಸಂಸ್ಕರಣಾ ಘಟಕ, ಪ್ರತಿ ಗ್ರಾಪಂ. ಗೆ PHC, ತಾಲೂಕಿಗೊಂದು ಎಕನಾಮಿಕ್ & ಇಂಡಸ್ಟ್ರಿಯಲ್ ಜೋನ್, ನದಿಗಳ ಸುತ್ತ 500 ಮೀಟರ್ ಅಂತರದಲ್ಲಿ ಮರಗಿಡಗಳ ಸಸಿಕರಣ, ಧಾರವಾಡ ಬೆಳಗಾವಿ ಜೋಡಿ ರೈಲು ಮಾರ್ಗ, ತಾಲೂಕಿಗೊಂದು ಗೋಶಾಲೆ, ವೃರ್ತಿ ತರಬೇತಿ ಹಾಗೂ ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳ ರಚನೆ, ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ, ಪ್ಲಾಸ್ಟಿಕ್ ರಹಿತ ನಗರ, ನಿರಂತರ ವಿದ್ಯುತ್ ಮತ್ತು ನೀರು ಸೇರಿದಂತೆ ಇತರ ಪ್ರಣಾಳಿಕೆಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.