ಉತ್ತಮ ಸಮಾಜಕ್ಕಾಗಿ

ಜಿಲ್ಲಾ ಮಟ್ಟದ “ಮೆಗಾಮೈಂಡ್”ಅಂತರ್‍ಶಾಲಾ ರಸಪ್ರಶ್ನೆ ಸ್ಪರ್ಧೆ

0

ಬೆಳಗಾವಿ.ಜ.18: ಟೆಕ್‍ಟ್ರೀ ಐ.ಟಿ.ಸಿಸ್ಟಮ್ಸ್ ಬೆಂಗಳೂರು ಸಂಸ್ಥೆಯು ಆಯೋಜಿಸಿರುವ ಮತ್ತು ಪೀಪಲಟ್ರೀ ಎಜ್ಯುಕೇಶನ ಟ್ರಸ್ಟ ಸಂಸ್ಥೆಯ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ “ಮೆಗಾಮೈಂಡ್” ಅಂತರ್‍ಶಾಲಾ ರಸಪ್ರಶ್ನೆ ಸ್ಪರ್ಧೆಯನ್ನು ಇದೇ ಜನೇವರಿ 22 ರವಿವಾರದಂದು ಬೆಳಿಗ್ಗೆ 10 ಗಂಟೆಗೆ ಪೀಪಲಟ್ರೀ ಸಂಸ್ಥೆಯ ಬಿಬಿಎ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆಯಲಿದೆ.
ಈ “ಮೆಗಾಮೈಂಡ್” ಅಂತರ್‍ಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ 9 ನೇ ಮತ್ತು 10 ನೇ ತರಗತಿಯಲ್ಲಿ ಓದುತ್ತಿರುವ 22 ವಿವಿಧ ಶಾಲೆಗಳಿಂದ ಸುಮಾರು 1800 ವಿದ್ಯಾರ್ಥಿಗಳು ಪ್ರಥಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ 80 ವಿದ್ಯಾರ್ಥಿಗಳು 2 ನೇ ಸುತ್ತಿನ ಸ್ಫರ್ಧೆಗೆ ಆಯ್ಕೆಯಾಗುವ ಮೂಲಕ ಅಂತಿಮ ಘಟ್ಟವನ್ನು ತಲುಪಲಿದ್ದಾರೆ. ಅಂತಿಮ ಹಂತದ ಸುತ್ತಿನಲ್ಲಿ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಪೀಪಲಟ್ರೀ ಬಿಬಿಎ ಮಹಾವಿದ್ಯಾಲಯದ ಪ್ರಾಚಾರ್ಯ ಅನಿಲ ಕನಗಣ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.