ಉತ್ತಮ ಸಮಾಜಕ್ಕಾಗಿ

ಡಾಂಬರೀಕರಣಕ್ಕೆ ಆಗ್ರಹ

0

ಹಾಸನಾಂಬ ದೇವಸ್ಥಾನದ ಬಾಗಿಲು ತೆಗೆಯಲು ಇನ್ನು ಕೇವಲ 20ದಿನಗಳು ಬಾಕಿ ಇದೆ., ಆದರೆ ರಾಜಬೀದಿ ಹೊಸಲೈನ್ ರಸ್ತೆ ಪರಿಸ್ಥಿತಿ ಮತ್ತು ಇಲ್ಲಿನ 100ಕ್ಕು ಹೆಚ್ಚು ವರ್ತಕರ ಸ್ಥಿತಿ ಅತಂತ್ರ ವಾಗಿಬಿಟ್ಟಿದೆ., ಕಳೆದ ವಾರದ ವರೆಗೂ ಅಮೃತ್ ಯೋಜನೆಯಡಿಯಲ್ಲಿ ರಸ್ತೆ ಮದ್ಯದಲ್ಲೇ ನೀರಿನ ಪೈಪುಗಳನ್ನು ಅಳವಡಿಸಲಾಗುತಿತ್ತು ., ಆದರೆ ಕಂಟ್ರಾಕ್ಟರ್ ಮತ್ತು ಕಾರ್ಮಿಕರು ಕಳೆದ 5ದಿನ ಗಳಿಂದ ಕಾಣೆಯಾಗಿರುತ್ತಾರೆ.,ಅಂದರೆ ಇತ್ತ ಬಂದಿಲ್ಲ., ಡಾಂಬಾರನ್ನು ಅಗೆದು ಅವರ ಕೆಲಸ ಮುಗಿಯುತ್ತಿದ್ದಂತೆ ರಸ್ತೆಗಳೆಲ್ಲ ಕೆಸರು ಗುಂಡಿಗಳಾಗಿವೆ., ಸಾಲಗಾಮೆಯಿಂದ ಸಂತೇಪೇಟೆವರೆಗು ದಿನಕ್ಕೆ ಸಾವಿರಾರು ವಾಹನ ಗಳು‌ ಸಂಚರಿಸುವ ಈ ರಸ್ತೆಯಲ್ಲಿ ಲಘುವಾಹನಗಳು ಕೂಡ ಈ ರಸ್ತೆಯಲ್ಲಿ ಸಿಕ್ಕಿಕೊಂಡು ಪರದಾಡೋದು ಪರಿಸ್ಥಿತಿ ಯಾಗಿದೆ.

ವಿಷಯ ಅತ್ಯಮೂಲವಾದುದೊಂದಿದೆ ., ಇದೇ ಹೊಸಲೈನ್ ರಸ್ತೆಯಲ್ಲಿ ಹಾಸನಾಂಬ ದೇವಸ್ಥಾನದ ಮತ್ತು ಸಿದ್ದೇಶ್ವರ ದೇವಸ್ಥಾನದ ಒಡವೇ ಮತ್ತು ರಥ ಕೊಂಡಯ್ಯುವುದು ವಾಡಿಕೆ ., ರಸ್ತೆ ಹೀಗೆ ಇದ್ದರೆ , ಹೊರ ಜಿಲ್ಲೆ , ಹೊರ ರಾಜ್ಯ ದಿಂದ ಬರೋ ಭಕ್ತಾದಿಗಳ ಮುಂದೆ ಮರ್ಯಾದೆ 3 ಕಾಸಿಗೆ ಹರಾಜಾಗೋದು ಗ್ಯಾರಂಟಿ.,,

ಜಿಲ್ಲಾಡಳಿತ., ರಾಜಕೀಯ ಪ್ರತಿನಿಧಿಗಳು ತುರ್ತು ಇತ್ತ ಗಮನ ವಹಿಸಿ., ಈಗಾಗಲೇ ಅಮೃತ್ ಯೋಜನೆಯಡಿ ಕಾಮಗಾರಿ ಮುಗಿದಿರುವ ಕಡೆ ಉತ್ತಮ ಡಾಂಬಾರೀಕರಣ ಮಾಡಿ.,ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕು . [hassan news]

The post ಡಾಂಬರೀಕರಣಕ್ಕೆ ಆಗ್ರಹ appeared first on Prajaa News.

Source link

ಡಾಂಬರೀಕರಣಕ್ಕೆ ಆಗ್ರಹ

Leave A Reply

 Click this button or press Ctrl+G to toggle between Kannada and English

Your email address will not be published.