ಉತ್ತಮ ಸಮಾಜಕ್ಕಾಗಿ

ಡಾ||ವಿಷ್ಣುವರ್ಧನ ಜನ್ಮ ದಿನದ ಸವಿನೆನಪಾಗಿ “ಡಾ||ವಿಷ್ಣುವರ್ಧನ ಗಾನಸಿರಿ”

0

ಡಾ||ವಿಷ್ಣುವರ್ಧನ ಜನ್ಮ ದಿನದ ಸವಿನೆನಪಾಗಿ “ಡಾ||ವಿಷ್ಣುವರ್ಧನ ಗಾನಸಿರಿ”

ಬೆಳಗಾವಿ :  ರಾಮನಾಥ ಮಂಗಲ ಕಾರ್ಯಾಲಯ ಸಭಾಂಗಣ,  ನಿವೇದಾರ್ಪಣ ಸಂಗೀತ ಅಕಾಡಮಿ, ಬೆಳಗಾವಿ
ವತಿಯಿಂದ ಸಾಹಸ ಸಿಂಹ್ ಡಾ||ವಿಷ್ಣುವರ್ಧನ ಜನ್ಮ ದಿನದ ಸವಿನೆನಪಾಗಿ “ಡಾ||ವಿಷ್ಣುವರ್ಧನ ಗಾನಸಿರಿ”
ಸಂಗೀತ ಸಂಜೆಯನ್ನು

ದಿ:29/9/2018 ರಂದು ಸಾ:5.30ಘಂಟೆಯಿಂದ ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕನ್ನಡದ ಹಿರಿಯ ನಾಟಕಕಾರ ಬಹುಮುಖ ಪ್ರತಿಭೆಯ ಶ್ರೀ.ಯಶವಂತ ಸರದೇಶಪಾಂಡೆ ಅವರು ಆಗಮಿಸಿದ್ದರು.ಕಾರ್ಯಕ್ರಮ ಸಾಹಿತ್ಯ ನಿರೂಪಣೆ ಜವಾಬ್ದಾರಿಯನ್ನು ಉದಯವಾಣಿ ನ್ಯೂಜ್ ಬ್ಯೂರೋ ಮುಖ್ಯಸ್ಥ ಶ್ರೀ.ಮನೋಹರ ಪ್ರಸಾದ ಅವರು ವಹಿಸಿದ್ದರು.

News Belgaum-ಡಾ||ವಿಷ್ಣುವರ್ಧನ  ಜನ್ಮ ದಿನದ ಸವಿನೆನಪಾಗಿ "ಡಾ||ವಿಷ್ಣುವರ್ಧನ ಗಾನಸಿರಿ" 3ಸುಮಾರು 3ಘಂಟೆಗಳ ಕಾಲ ಈ ಸುಮಧುರ ಗೀತೆಗಳ ಗಾಯನದ.ಮೂಲಕ ಸಂಗೀತಾಭಿಮಾನಿಗಳಿಗೆ ವಿದ್ಯಾರ್ಥಿ ವೃಂದ ನಿವೇದಿತಾ ಚಂದ್ರಶೇಖರ ನೇತೃತ್ವದಲ್ಲಿ ರಂಜಿಸಿದರು. ಶ್ರೀಯತ. ಯಶವಂತ ಸರದೇಶಪಾಂಡೆ ಅವರು ಮಾತನಾಡಿ ಅಕಾಡಮಿಯ ಪ್ರತಿಭೆಗಳು ತಾವು ಕಲಿತು ಇತರರಿಗೂ ಸಂಗೀತ ಸವಿಯುವಂತೆ ಮಾಡಿ ಎಲ್ಲರ ಮೊಗದಲ್ಲಿ ಸಂತೋಷದ ನಗೆಯನ್ನು ಹೊಮ್ಮಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ನಿವೇದಿತಾ ಅವರು ಇಂದಿನ ಸಮಾಜಕ್ಕೆ ಸಂಗೀತ ಸವಿಯುವಂತೆ ಮಾಡುವ.ಮೂಲಕ ಎಲ್ಲರ ಮುಖದಲ್ಲಿ ನಗುವನ್ನು ತರುವ ಕಾರ್ಯದಲ್ಲಿ ತೊಡಗಿದ್ದು, ಹೆಚ್ಚಿನ ಜನ ಇದರ ಲಾಭ ಪಡೆದು ನಗುನಗುತಾ ಇರಿ ಎಂದು ಶುಭ ಹಾರೈಸಿದರು. ಸುಮಾರು 1000 ಕ್ಕೂ ಹೆಚ್ಚಿನ ಜನ ಸಂಗೀತವನ್ನು ಸವಿದರು. ಇದೇ ಸಂದರ್ಭದಲ್ಲಿ ಇಬ್ಬರೂ ಗಣ್ಯರಿಗೆ ಅಕಾಡಮಿ ವತಿಯಿಂದ ಗೌರವಿಸಲಾಯಿತು.

The post ಡಾ||ವಿಷ್ಣುವರ್ಧನ ಜನ್ಮ ದಿನದ ಸವಿನೆನಪಾಗಿ “ಡಾ||ವಿಷ್ಣುವರ್ಧನ ಗಾನಸಿರಿ” appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.